Maha Kumbh 2025 Monalisa – ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭ ಮೇಳ ಶುರುವಾಗಿ ಇಂದಿಗೆ ಬರೋಬ್ಬರಿ 7 ದಿನ ಪೂರ್ಣಗೊಂಡಿವೆ. ಜನವರಿ 13ರಂದು ಆರಂಭವಾದ ಕುಂಭ ಮೇಳ ಶಿವರಾತ್ರಿಯವರೆಗೆ ಅಂದರೆ ಫೆಬ್ರವರಿ 26ರವರೆಗೆ ನಡೆಯಲಿದೆ. ಇತ್ತೀಚೆಗೆ ರುದ್ರಾಕ್ಷಿ ಮಾರುವ ಹುಡುಗಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ್ದಾಳೆ. ಆಕೆಯ ವಿಡಿಯೋಗಳು, ಪೊಟೋಗಳು ಸಖತ್ ವೈರಲ್ ಆಗುತ್ತಿದ್ದು, ಆಕೆ ರಾತ್ರೋ ರಾತ್ರಿ ಸೋಷಿಯಲ್ ಮಿಡಿಯಾ ಸ್ಟಾರ್ ಆಗಿದ್ದಾರೆ ಎನ್ನಬಹುದಾಗಿದೆ. ಆಕೆ ಫೇಮಸ್ ಏನೋ ಆದ್ರೂ, ಆದರೆ ಆಕೆಯ ಸದ್ಯ ಪಾಡು ಹೇಳತೀರದ್ದಾಗಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಮಹಾ ಕುಂಭಮೇಳ ದೇಶದಾದ್ಯಂತ ಸುದ್ದಿಯಲ್ಲಿರುವ ವಿಷಯ. ಈಗಾಗಲೇ ಐಐಟಿ ಬಾಬಾ, ಗ್ಲಾಮರಸ್ ಸಾಧ್ವಿ ಹರ್ಷರಿಚಾರ್ಯ ದೊಡ್ಡ ಮಟ್ಟದಲ್ಲೇ ಟ್ರೆಂಡಿಂಗ್ ಆಗಿದ್ದಾರೆ. ಇವರೆಲ್ಲರ ನಡುವೆ ವೈರಲ್ ಆದ ರುದ್ರಾಕ್ಷಿ ಮಾರುವ ಯುವತಿಯನ್ನು ಸಂದರ್ಶಿಸಲು ಕೆಲವೊಂದು ಮಾಧ್ಯಮಗಳು ಪೈಪೋಟಿ ನಡೆಸುತ್ತಿವೆ. ಕುಂಭಮೇಳದಲ್ಲಿ ಮಣಿ, ಸರ ಮಾರುತ್ತಿರುವ ಮೋನಾಲಿಸಾ ಎಂಬ ಯುವತಿಯ ಬಗ್ಗೆ ವ್ಲಾಗರ್ ಒಬ್ಬರು ಮಾಡಿದ ವಿಡಿಯೋ ಭಾರಿ ವೈರಲ್ ಆಗಿತ್ತು. ಮೊನಾಲಿಸಾ ಸೌಂದರ್ಯ ಹಾಗೂ ಆಕೆಯ ಕಣ್ಣುಗಳು ಅನೇಕರ ಮನಗೆದ್ದಿದೆ. ಮುಗ್ದ ನಗು, ಆಕರ್ಷಕ ಮುಖಚರ್ಯೆ, ಮಿಂಚಿನ ಮಾತುಗಳು ಎಲ್ಲರನ್ನೂ ಮೋಡಿ ಮಾಡಿದೆ. ಅನೇಕರಿಗೆ ಆಕೆ ರಾತ್ರೋ ರಾತ್ರಿ ಕ್ರಶ್ ಆಗಿದ್ದಾಳೆ ಎಂತಲೂ ಹೇಳಲಾಗುತ್ತಿದೆ. ರಾತ್ರೋ ರಾತ್ರಿ ಫೇಮಸ್ ಆದಂತಹ ಮೋನಾಲಿಸಾ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ ಎನ್ನುವಂತಾಗಿದೆ.
ಮಹಾಕುಂಭದಲ್ಲಿ ಭಾರಿ ಜನಪ್ರಿಯತೆ ಪಡೆದ ಮೊನಾಲಿಸಾ ಸದ್ಯದ ಪರಿಸ್ಥಿತಿ ಮಾತ್ರ ಯಾರಿಗೂ ಬೇಡ. ಎಲ್ಲಿಗೂ ಹೋಗುವಂತಿಲ್ಲ. ಮನೆಯಲ್ಲಿ ಇರುವಂತಿಲ್ಲ. ಅತ್ತ ಪೋಷಕರು, ಸಹೋದರಿಯರಿಗೂ ಕಾಟ ತಾಳಲಾಗುತ್ತಿಲ್ಲ. ಮೋನಾಲಿಸಾಳ ಸದ್ಯದ ಪರಿಸ್ಥಿತಿಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಮೋನಾಲಿಸಾ ಹಾಗೂ ಆಕೆಯ ಕುಟುಂಬ ಮಣಿ, ಸರ, ರುದ್ರಾಕ್ಷಿ ಮಾಲೆಗಳನ್ನು ಮಾರಾಟ ಮಾಡುತ್ತಾರೆ. ಮೈಸೂರಿನ ದಸರಾ ಹಬ್ಬಕ್ಕೂ ಆಗಮಿಸಿ ಅವರು ವ್ಯಾಪಾರ ಮಾಡಿದ್ದರು. 16 ವರ್ಷದ ಮೋನಾಲಿಸಾ ಇದೀಗ ದೊಡ್ಡ ಸೆಲೆಬ್ರೆಟಿಯಾಗಿದ್ದಾರೆ. ಆದರೆ ಮೋನಾಲಿಸಾ ಹಾಗೂ ಆಕೆಯ ಕುಟುಂಬಕ್ಕೆ ಇದೇ ಮುಳುವಾಗಿದೆ ಎನ್ನಬಹುದಾಗಿದೆ.
ವಿಡಿಯೋ ಇಲ್ಲಿದೆ ನೋಡಿ: Click Here
ಸೋಷಿಯಲ್ ಮಿಡಿಯಾ ಎಂತಹವರನ್ನೂ ಸ್ಟಾರ್ ಮಾಡುತ್ತದೆ ಎಂಬುದಕ್ಕೆ ಮೋನಾಲಿಸಾ ಒಳ್ಳೆಯ ಉದಾಹರಣೆ ಎನ್ನಬಹುದಾಗಿದೆ. ಮಹಾಕುಂಭಮೇಳಕ್ಕೆ ಆಗಮಿಸುತ್ತಿರುವ ಲಕ್ಷಾಂತರ ಮಂದಿ ಮೋನಾಲಿಸಾ ಭೇಟಿಯಾಗಿ ಪೊಟೋ ತೆಗೆಸಿಕೊಳ್ಳಲು ಮುಂದಾಗುತ್ತಿರುತ್ತಾರೆ. ಜೊತೆಗೆ ಸುದ್ದಿವಾಹಿನಿ, ಯುಟ್ಯೂಬರ್ ಗಳು, ವ್ಲಾಗರ್ ಗಳು ಸೇರಿದಂತೆ ಸೋಷಿಯಲ್ ಮಿಡಿಯಾ ಕಂಟೆಂಟ್ ಕ್ರಿಯೇಟರ್ ಗಳು ಮೋನಾಲಿಸಾಳನ್ನು ಸಂದರ್ಶನ ಮಾಡಲು ಮುಗಿ ಬೀಳುತ್ತಿದ್ದಾರೆ. ಈ ಕಾರಣದಿಂದ ಆಕೆ ಮುಖಕ್ಕೆ ಮಾಸ್ಕ್ ಹಾಕಿ, ತಲೆ ಕವರ್ ಮಾಡಿ ಯಾರಿಗೂ ಗುರುತು ಸಿಗದಂತೆ ಹೋದರೂ ಸಹ ಆಕೆಯ ಪೊಟೋ ತೆಗೆಯಲು ಜನರು ಮುಗಿ ಬೀಳುತ್ತಿದ್ದಾರೆ. ಈ ವಿಡಿಯೋ ಸಹ ಇದೀಗ ವೈರಲ್ ಆಗುತ್ತಿದೆ.
ವಿಡಿಯೋ ಇಲ್ಲಿದೆ ನೋಡಿ: Click here
ಇನ್ನೂ ಮೋನಾಲಿಸಾಗೆ ಈ ಸಮಸ್ಯೆ ಎದುರಾಗುತ್ತಿದ್ದಂತೆ ಆಕೆಯ ಪೋಷಕರು ಆಕೆಯನ್ನು ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದಾರೆ. ಮನೆಯಿಂದ ಹೊರಬಾರದಂತೆ ಹೇಳಿದ್ದಾರೆ. ಆದರೂ ಸಹ ಅನೇಕರು ಆಕೆಯ ಮನೆಯನ್ನು ಹುಡುಕಿಕೊಂಡು ಹೋಗುತ್ತಿದ್ದಾರಂತೆ. ಮನೆಗೆ ತೆರಳಿ ಪೊಟೋ, ವಿಡಿಯೋ ಗಾಗಿ ಕಾಟ ಕೊಡುತ್ತಿದ್ದಾರೆ. ಇದರಿಂದ ಆಕೆಯ ಮನೆಯವರಿಗೂ ಸಹ ಸಮಸ್ಯೆ ಎದುರಾಗಿದೆ ಎನ್ನಲಾಗುತ್ತಿದೆ.