Lokayukta – ರೈತರೊಬ್ಬರಿಂದ ತಮ್ಮ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಗ್ರಾಮ ಆಡಳಿತಾಧಿಕಾರಿ ಲೋಕಾ ಬಲೆಗೆ ಬಿದ್ದಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಂಪಸಂದ್ರ ಕಂದಾಯ ವೃತ್ತದ ಗ್ರಾಮ ಆಡಳಿತಾಧಿಕಾರಿ ನಾಗರಾಜ್ ಜಮೀನು ಪೋಡಿ ಮಾಡಲು ಹಣ ಪಡೆಯುತ್ತಿದ್ದಾಗ ಸಿಕ್ಕಿಬಿದಿದ್ದಾನೆ.
Lokayukta – ರೈತರ ಕೆಲಸ ಮಾಡಿಕೊಡಲು ಹಣಕ್ಕೆ ಬೇಡಿಕೆ
ಗುಡಿಬಂಡೆ ತಾಲೂಕಿನ ಬೆಣ್ಣೆಪರ್ತಿ ಗ್ರಾಮದ ರೈತ ಮಂಜುನಾಥ್ ರವರು ತಮ್ಮ 2.20 ಗುಂಟೆ ಜಮೀನನ್ನು ಪೋಡಿ ಹಾಗೂ ದುರಸ್ಥಿ ಮಾಡಿಸಲು ಗ್ರಾಮ ಆಡಳಿತಾಧಿಕಾರಿ ನಾಗರಾಜ್ ರವರಿಗೆ ಮನವಿ ಮಾಡಿದ್ದರು. ಆದರೆ ನಾಗರಾಜ್ ಈ ಕಾರ್ಯಕ್ಕಾಗಿ ಹಣಕ್ಕೆ ಬೇಡಿಕೆಯಿಟ್ಟಿದ್ದರಂತೆ. ಈ ಸಂಬಂಧ ರೈತ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಅದರಂತೆ ಡಿ.ವೈ.ಎಸ್.ಪಿ ವೀರೇಂದ್ರ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಿ, ಹಣ ಪಡೆಯುತ್ತಿದ್ದ ನಾಗರಾಜ್ ರನ್ನು ಹಿಡಿದಿದ್ದಾರೆ.
ಮಾಹಿತಿಯ ಪ್ರಕಾರ ನಾಗರಾಜ್ 55 ಸಾವಿರ ಹಣ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಸಿಲುಕಿದ್ದಾನೆ. ಈ ದಾಳಿಯಲ್ಲಿ ಲೋಕಾಯುಕ್ತ ಇನ್ಸ್ ಪೆಕ್ಟರ್ ನಿರ್ಮಲ ಹಾಗೂ ಸಿಬ್ಬಂದಿ ಹಾಜರಿದ್ದರು.