LIC Bima Sakhi Yojana : ಮಹಿಳೆಯರು ತಿಂಗಳಿಗೆ 7 ಸಾವಿರ ಗಳಿಸುವ ಅವಕಾಶ, ಬಿಮಾ ಸಖಿ ಯೋಜನೆಗೆ ನೀವು ಅರ್ಜಿ ಹಾಕಿ…!

LIC Bima Sakhi Yojana – ಮಹಿಳಾ ಸ್ವಾವಲಂಬನೆ ಅದರಲ್ಲೂ ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ LIC Bima Sakhi Yojana (ಬಿಮಾ ಸಖಿ) ಯೋಜನೆಗೆ ಚಾಲನೆ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ಕೊಟ್ಟ ಈ ಯೋಜನೆಯಡಿ ಪ್ರತಿ ಮಾಹೆ ಮಹಿಳೆಯರು 7 ಸಾವಿರ ಆದಾಯ ಗಳಿಸಬಹುದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಅರ್ಹತೆಗಳೇನು? ವೇತನ ಎಷ್ಟು ದೊರಕುತ್ತದೆ? ಮಾನದಂಡಗಳೇನು? ಮೊದಲಾದ ವಿವರಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.

lic bima sakhi yojana apply online 2

ಪ್ರಧಾನಿ ನರೇಂದ್ರ ಮೋದಿಯವರು ಮಹಿಳೆಯ ಸಬಲೀಕರಣದ ಉದ್ದೇಶದಿಂದ ಕಳೆದ ಡಿ.9, 2024 ರಂದು LIC Bima Sakhi Yojana ಗೆ ಚಾಲನೆ ನೀಡಿದರು. ಮೂಲಗಳ ಪ್ರಕಾರ ಈ ಯೋಜನೆಗೆ ಒಂದೇ ತಿಂಗಳಲ್ಲಿ 50 ಸಾವಿರಕ್ಕೂ ಹೆಚ್ಚು ಮಹಿಳೆಯರು ನೊಂದಣಿಯಾಗಿದ್ದಾರೆ ಎನ್ನಲಾಗಿದೆ. 10 ನೇ ತರಗತಿ ಉತ್ತೀರ್ಣರಾದ 18 – 70 ವಷದೊಳಗಿನ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ. ನೇಮಕಗೊಂಡವರಿಗೆ 3 ವರ್ಷ ತರಬೇತಿ ನೀಡಲಾಗುತ್ತದೆ. ಮೊದಲ ವರ್ಷ ಪ್ರತೀ ತಿಂಗಳು 7,000 ರೂ. ನೀಡಲಾಗುತ್ತದೆ. 2 ನೇ ವರ್ಷ ಪ್ರತೀ ತಿಂಗಳು 6,000 ರೂ., 3ನೇ ವರ್ಷ ಪ್ರತೀ ತಿಂಗಳು 5000 ರೂ. ಸ್ಟೈಪೆಂಡ್‌ ನೀಡಲಾ ಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಅವರು ಏಜೆಂಟ್‌ ಆಗಬಹುದು. ಬಳಿಕ ಅವರನ್ನು ಡೆವಲಪ್‌ಮೆಂಟ್‌ ಆಫೀಸರ್‌ ಹುದ್ದೆಗೆ ನೇಮಕ ಮಾಡಬಹುದು.

lic bima sakhi yojana apply online 1

ಆಸಕ್ತ ಮಹಿಳೆಯರು ಅರ್ಜಿ ಸಲ್ಲಿಸಲು, ನೀವು ನಿಮ್ಮ ಹತ್ತಿರದ ಶಾಖೆಗೆ ಹೋಗಿ ಮಾಹಿತಿಯನ್ನು ಪಡೆಯಬಹುದು. ಅಲ್ಲದೆ, ನೀವು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಅರ್ಜಿ ಸಲ್ಲಿಸಬಹುದು. ಮಾಹಿತಿಗಳ ಪ್ರಕಾರ ಈ ಯೋಜನೆಗೆ ಕಳೆದ ಒಂದು ತಿಂಗಳಲ್ಲಿ 52,511 ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ. 27,695 ಮಹಿಳೆಯರಿಗೆ ನೇಮಕಾತಿ ಪತ್ರ ನೀಡಲಾಗಿದೆ. 14,583 ಮಹಿಳೆಯರು ಪಾಲಿಸಿಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಈ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ಸಾಗಿಸುತ್ತಿದ್ದಾರೆ. ಕಡಿಮೆ ಸಮಯದಲ್ಲಿ ನಿಶ್ಚಿತ ಆದಾಯ ಪಡೆಯಲು ಈ LIC Bima Sakhi Yojana (ಬಿಮಾ ಸಖಿ) ಯೋಜನೆ ಸಹಕಾರಿಯಾಗಲಿದೆ ಎನ್ನಲಾಗಿದೆ. lic bima sakhi yojana apply online 0

LIC Bima Sakhi Yojana : ಯೋಜನೆಯ ಪ್ರಮುಖ ಅಂಶಗಳು

  • ಎಲ್‌ಐಸಿ ಬಿಮಾ ಸಖಿ ಎನ್ನುವುದು ಸ್ಟೈಫಂಡರಿ ಸ್ಕೀಮ್‌ ಆಗಿದೆ. ಮೂರು ವರ್ಷಗಳ ಕಾಲ ಸ್ಟೈಫಂಡ್‌ ದೊರಕಲಿದೆ
  • ಯೋಜನೆಗೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಮತ್ತು ಗರಿಷ್ಠ 70 ವರ್ಷವಾಗಿದೆ. ಕನಿಷ್ಠ ವಿದ್ಯಾರ್ಹತೆ 10ನೇ ತರಗತಿ ಪಾಸ್ ಆಗಿರಬೇಕು.
  • ಪ್ರತಿವರ್ಷದ ಸ್ಟೈಫಂಡರಿ ಅವಧಿಯಲ್ಲೂ ಅಭ್ಯರ್ಥಿಗಳ ಪರ್ಫಾಮೆನ್ಸ್‌ಗೆ ಮಾನದಂಡಗಳು ಇರುತ್ತವೆ. ನಿರ್ದಿಷ್ಟ ಟಾರ್ಗೆಟ್‌ ಪೂರೈಸಬೇಕು.
  • ಮೊದಲ ವರ್ಷ 24 ಲೈವ್ಸ್‌ ಪೂರೈಸಬೇಕು. ಮೊದಲ ವರ್ಷದ ಕಮಿಷನ್‌ 48 ಸಾವಿರ ರೂಪಾಯಿ ದೊರಕುತ್ತದೆ.
  • ಈಗಾಗಲೇ ಎಲ್‌ಐಸಿಯಲ್ಲಿ ಕೆಲಸ ಮಾಡುವವರು, ಏಜೆಂಟ್‌ ಆಗಿರುವವರು ಎಂಸಿಎಗೆ ಅರ್ಜಿ ಸಲ್ಲಿಸುವಂತೆ ಇಲ್ಲ. ಅವರ ಕುಟುಂಬದವರೂ ಅರ್ಜಿ ಸಲ್ಲಿಸುವಂತೆ ಇಲ್ಲ. ಈಗಾಗಲೇ ಎಲ್‌ಐಸಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿರುವವರು, ಈ ಹಿಂದೆ ಏಜೆಂಟ್‌ ಆಗಿ ಕೆಲಸ ಮಾಡಿದ್ದವರೂ ಅರ್ಜಿ ಸಲ್ಲಿಸುವಂತೆ ಇಲ್ಲ.
  • ಅರ್ಜಿ ನಮೂನೆ ಜೊತೆ ಇತ್ತೀಚಿನ ಪಾಸ್‌ಪೋರ್ಟ್‌ ಗಾತ್ರದ ಫೋಟೋ ಲಗ್ಗತ್ತಿಸಬೇಕು.
  • ವಯಸ್ಸಿನ ದೃಢೀಕರಣ, ವಿಳಾಸ ದೃಢೀಕರಣ, ಶೈಕ್ಷಣಿಕ ದಾಖಲೆಗಳ ಪ್ರತಿಯನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ಅಧಿಕೃತ ವೆಬ್ಸೈಟ್‌ ವಿಳಾಸ: https://licindia.in/lic-s-bima-sakhi ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *

Next Post

Vaikuntha Ekadashi: ಶ್ರದ್ದಾಭಕ್ತಿಯಿಂದ ವೈಕುಂಠ ಏಕಾದಶಿ ಆಚರಣೆ, ಹರಿದು ಬಂದ ಜನಸಾಗರ....!

Fri Jan 10 , 2025
Vaikuntha Ekadashi – ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ಪಟ್ಟಣದ ಸಂತೆ ಬೀದಿಯ ಭೂನಿಳಾ ಸಮೇತ ಶ್ರೀ ವೆಂಕಟರಮಣ ಸ್ವಾಮಿ ದೇವಾಲಯ ಹಾಗೂ ಬಾಗೇಪಲ್ಲಿಯ ಪ್ರಸಿದ್ದ  ಗಡಿದಂ ದೇವಾಲಯದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮ ಹಾಗೂ ಶ್ರದ್ದಾಭಕ್ತಿಯಿಂದ ಆಚರಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ವೈಕುಂಠ ಏಕಾದಶಿಯನ್ನು ಆಚರಿಲಾಯಿತು. ವಿವಿಧ ಕಡೆಗಳಿಂದ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಭಕ್ತರು ಮುಂಜಾನೆಯಿಂದ ದೇವಾಲಯದ ಮುಂದೆ ಸಾಲುಗಟ್ಟಿ ನಿಂತು ವೈಕುಂಠ ದ್ವಾರದ ಮೂಲಕ […]
Vaikuntha Ekadashi in GBD and BGP
error: Content is protected !!