ಕಾರ್ಮಿಕ ದಿನಾಚರಣೆ ಅಂಗವಾಗಿ ಹತ್ತು ಟ್ರಾಕ್ಟರ್ ಗಳನ್ನು ವಿತರಣೆ ಮಾಡಿದ ನಟ ರಾಘವ ಲಾರೆನ್ಸ್, ವೈರಲ್ ಆದ ವಿಡಿಯೋ……!

ಕಾಲಿವುಡ್ ಸ್ಟಾರ್‍ ನಟ, ನಿರ್ಮಾಪಕ, ನಿರ್ದೇಶಕ, ಕೊರಿಯೋಗ್ರಾಫರ್‍ ರಾಘವ ಲಾರೆನ್ಸ್ ಬಗ್ಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಮಲ್ಟಿ ಟ್ಯಾಲೆಂಟೆಡ್ ಕಲಾವಿದನಾಗಿ ಸಿನೆಮಾಗಳಲ್ಲಿ ಮಾತ್ರವಲ್ಲದೇ ಸಮಾಜ ಸೇವೆಯ ಮೂಲಕ ಫೇಂ ಪಡೆದುಕೊಂಡಿದ್ದಾರೆ. ಸ್ವಯಂ ಕೃಷಿಯಿಂದ ಈ ಮಟ್ಟಕ್ಕೆ ಬೆಳೆದ ರಾಘವ ಲಾರೆನ್ಸ್ ಬಡವರು, ನಿರ್ಗತಿಕರಿಗಾಗಿ ವಿವಿಧ ರೀತಿಯ ಸಹಾಯ ಮಾಡುತ್ತಿರುತ್ತಾರೆ. ಅವರನ್ನು ಸಿನೆಮಾಗಳಿಗಿಂತ ಅವರು ಮಾಡುವ ಸಮಾಜ ಸೇವೆಯ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ ಎಂದರೇ ತಪ್ಪಾಗಲಾರದು. ಇದೀಗ ಅವರು ಕಾರ್ಮಿಕರ ದಿನಾಚರಣೆ ಅಂಗವಾಗಿ ಮಾಡಿದ ಕೆಲಸಕ್ಕೆ ಎಲ್ಲರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

Raghava lawrence gave tractors 2

ಸಿನಿರಂಗದಲ್ಲಿ ಮಲ್ಟಿ ಟ್ಯಾಲೆಂಟೆಡ್ ಎಂದೇ ಗುರ್ತಿಸಿಕೊಂಡಿರುವ ನಟ ರಾಘವ ಲಾರೆನ್ಸ್ ನೃತ್ಯ ಸಂಯೋಜಕ, ನಾಯಕ ಹಾಗೂ ನಿರ್ದೇಶಕನಾಗಿ ಅನೇಕ ಸಿನೆಮಾಗಳನ್ನು ಮಾಡಿದ್ದಾರೆ. ಸಿನೆಮಾಗಳಲ್ಲಿ ಮಾತ್ರವಲ್ಲದೇ ಅವರು ಸಾಮಾಜಿಕ ಕಾರ್ಯಕ್ರಮಗಳಲ್ಲೂ ಸಹ ತಮ್ಮನ್ನು ತೊಡಗಿಸಿಕೊಳ್ಳುವ ಕೆಲಸ ಮಾಡುತ್ತಿರುತ್ತಾರೆ. ತುಂಬಾ ಬಡತನದಿಂದ ಬಂದು ಓರ್ವ ಸ್ಟಾರ್‍ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದುಡಿದ ಹಣದಲ್ಲಿ ಇಂತಿಷ್ಟು ಮೀಸಲಿಟ್ಟು, ಅದನ್ನು ಬಡವರಿಗಾಗಿ ಮೀಸಲಿಟ್ಟು ಅವರಿಗೆ ಸಹಾಯ ಮಾಡುತ್ತಿರುತ್ತಾರೆ. ಈ ರೀತಿ ಲಾರೆನ್ಸ್ ಕೈಗೊಂಡ ಸಾಮಾಜಿಕ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇದೆ ಎನ್ನಬಹುದಾಗಿದೆ. ಕೆಲವು ದಿನಗಳ ಹಿಂದೆಯಷ್ಟೆ ವಿಶೇಷ ಚೇತನ ಮಕ್ಕಳಿಗೆ ಬೈಕ್ ಗಳನ್ನು ಕೊಡಿಸಿ ಮಾನವೀಯತೆ ಮೆರೆದಿದ್ದರು. ಇದೀಗ ಅವರು ಮತ್ತೊಂದು ಸಾಮಾಜಿಕ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಟ ರಾಘವ ಲಾರೆನ್ಸ್ ಕಾರ್ಮಿಕರ ದಿನಾಚರಣೆಯಂದು ಮತ್ತೊಂದು ಸಾಮಾಜಿಕ ಕಾರ್ಯದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.  ಕಾರ್ಮಿಕರ ದಿನಾಚರಣೆಯ ಅಂಗವಾಗಿ ರಾಘವ ಲಾರೆನ್ಸ್ ರೈತರಿಗೆ ಮೊದಲ ವಿತರಣೆಯಾಗಿ 10 ಟ್ರಾಕ್ಟರ್‍ ಗಳನ್ನು ನೀಡಿದ್ದಾರೆ. ಈ ನಿಸ್ವಾರ್ಥ ಸೇವೆಗೆ ಎಲ್ಲರೂ ಕೈ ಜೋಡಿಸಿ ಬೆಂಬಲ ನೀಡಬೇಕೆಂದು ವಿನಂತಿ ಮಾಡಿದ್ದಾರೆ. ಈ ಸಂಬಂಧ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ನಮ್ಮ ಚಾರಿಟಬಲ್ ಟ್ರಸ್ಟ್ ಮೂಲಕ ಸೇವೇಯೇ ದೇವರು ಎಂಬ ಉಪಕ್ರಮದೊಂದಿಗೆ ಈ ಹೊಸ ಪ್ರಯಾಣವನ್ನು ಪ್ರಾರಂಭಿಸಲು ನನಗೆ ಸಂತೋಷವಾಗಿದೆ. ನಮ್ಮ ದೇಶದ ಬೆನ್ನೆಲುಬಾಗಿರುವ ರೈತರಿಗೆ ನನ್ನ ಸ್ವಂತ ಹಣದಲ್ಲಿ 10 ಟ್ರಾಕ್ಟರ್‍ ನೀಡುತ್ತಿದ್ದೇನೆ. ಅಗತ್ಯವಿರುವಂತಹ ಜನರಿಗೆ ಸೇವೆ ಸಲ್ಲಿಸಲು ಪ್ರತಿಯೊಬ್ಬರು ಈ ನಿಸ್ವಾರ್ಥ ಪ್ರಯಾಣಕ್ಕೆ ಬೆಂಬಲ ನೀಡಬೇಕು. ಮಾತುಗಳಿಗಿಂತ ಕೆಲಸ ಜೋರಾಗಿ ಮಾತನಾಡುತ್ತವೆ. ನನ್ನ ಪಯಣದಲ್ಲಿ ನನಗೆ ನಿಮ್ಮೆಲ್ಲರ ಬೆಂಬಲ ಹಾಗೂ ಆರ್ಶಿವಾದ ಬೇಕು ಎಂದು ಹೇಳಿದ್ದಾರೆ.

Raghava lawrence gave tractors 0

ಇನ್ನೂ ರಾಘವ ಲಾರೆನ್ಸ್ ಹಂಚಿಕೊಂಡ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ. ಅಭಿಮಾನಿಗಳು ಮಾತ್ರವಲ್ಲದೇ ನೆಟ್ಟಿಗರು ಸಹ ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಎಲ್ಲರಿಂದಲೂ ಅವರ ನಿಸ್ವಾರ್ಥ ಸೇವೆಗೆ ಬೆಂಬಲ ವ್ಯಕ್ತವಾಗತ್ತಿದೆ.

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಕುಡಿಯೋಕೆ ನೀರಿಲ್ಲ, ಆದರೂ ಕಾವೇರಿ ನೀರು ಕೇಳಿದ ತಮಿಳುನಾಡಿಗೆ ಭಾರಿ ಮುಖಭಂಗ…..!

Thu May 2 , 2024
ಕರ್ನಾಟಕದಲ್ಲಿ ತೀವ್ರ ಬರಗಾಲ ತಾಂಡವವಾಡುತ್ತಿದೆ. ಜನ ಜಾನುವಾರುಗಳು ನೀರಿಲ್ಲದೇ ಪರದಾಡುತ್ತಿದ್ದಾರೆ. ಕುಡಿಯುವ ನೀರಿಗೂ ಪರದಾಡುವಂತಹ ದುಸ್ಥಿತಿ ಬಂದಿದೆ. ಇಂತಹ ಕಷ್ಟಕರ ಸಮಯದಲ್ಲಿ ತಮಿಳುನಾಡು ಏಪ್ರಿಲ್ ಹಾಗೂ ಮೇ ಮಾಹೆಯ ಪಾಲಿನ ಕಾವೇರಿ ನೀರನ್ನು ಬಿಡುವಂತೆ ಅರ್ಜಿ ಸಲ್ಲಿಸಿದ್ದು, ಕಾವೇರಿ ನೀರು ನಿಯಂತ್ರಣ ಸಮಿತಿ ತಮಿಳುನಾಡು ಸರ್ಕಾರಕ್ಕೆ ಮಂಗಳಾರತಿ ಮಾಡಿದೆ. ನೀರು ಬಿಡುವಂತೆ ಸಲ್ಲಿಸಿದ ತಮಿಳುನಾಡಿನ ಅರ್ಜಿಯನ್ನು CWRC ತಿರಸ್ಕರಿಸಿದೆ ಎಂದು ತಿಳಿದುಬಂದಿದೆ. ಕಾವೇರಿ ನದಿ ನೀರು ಹಂಚಿಕೆಯ ವಿಚಾರಕ್ಕೆ ಸಂಬಂಧಿಸಿದಂತೆ […]
Kaveri water dispute
error: Content is protected !!