Kodi Mutt Swamiji: ಸಿಎಂ ಸಿದ್ದರಾಮಯ್ಯ ಹಾಗೂ ನಟ ದರ್ಶನ್ ಕುರಿತು ಮಾರ್ಮಿಕ ಭವಿಷ್ಯ ನುಡಿದ ಕೋಡಿಶ್ರೀ….!

Kodi Mutt Swamiji – ಕರ್ನಾಟಕದಲ್ಲಿ ಇತ್ತೀಚಿಗೆ ಭಾರಿ ಸದ್ದು ಮಾಡಿದ ಪ್ರಕರಣಗಳಲ್ಲಿ ಮುಡಾ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ನವರಿಗೆ ಟೆನ್ಷನ್ ಶುರುವಾಗಿದ್ದರೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಡಿ ನಟ ದರ್ಶನ್ ಬೇಲ್ ಪಡೆಯಲು ಪರದಾಡುತ್ತಿದ್ದಾರೆ. ಈ ಇಬ್ಬರ ಭವಿಷ್ಯದ ಕುರಿತು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji) ಮಾರ್ಮಿಕ ಭವಿಷ್ಯ ನುಡಿದಿದ್ದಾರೆ. ಅವರು ಚಿಕ್ಕಬಳ್ಳಾಪುರ ನಗರದ ಉದ್ಯಮಿ ಹರಿಸ್ಥಳದ ಚಿಕ್ಕಗೆರಿಗರೆಡ್ಡಿ, ಗಿರೀಶ್ ಅವರ ಮನೆಯಲ್ಲಿ ಪಾದಪೂಜೆ ಸ್ವೀಕರಿಸಿದ ನಂತರ (Kodi Mutt Swamiji) ಮಾಧ್ಯಮಗಳೊಂದಿಗೆ ಮಾತನಾಡಿದರು.

Kodi Mutt Swamiji comments about CM and Darshan

ಮಾಧ್ಯಮಗಳೊಂದಿಗೆ ಮಾತನಾಡಿದ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (Kodi Mutt Swamiji)  ಮಹಾಭಾರತದಲ್ಲಿ ಶ್ರೀ ಕೃಷ್ಣ ಇದ್ಧ ಹೀಗಾಗಿ ಭೀಮ ಗೆದ್ದ. ಈಗ ಶ್ರೀ ಕೃಷ್ಣ ಇಲ್ಲ ದುರ್ಯೋಧನ ಗೆಲ್ಲುತ್ತಾನೆ. ಪಾಪದ ಪಾಷಣ ಕಳೆಯಬೇಕು. ಮಾಡಿದ ಪಾಪವನ್ನ ಅನುಭವಿಸಲೇಬೇಕು ಹೀಗಂತ ಕೋಡಿಶ್ರೀ ಗಳು (Kodi Mutt Swamiji) ಚಿಕ್ಕಬಳ್ಳಾಪುರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ದರ್ಶನ್ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದಿದ್ದಾರೆ.  ಪಾಪದ ಪಾಶ ಉಕ್ಕಿದರೆ ಪಶ್ಚಾತ್ತಾಪ ಆಗಲಿದೆ. ಪಾಯಸಕ್ಕೆ ಹಾಕಿದ ಬೆಲ್ಲದ ಕೊಳೆ ಉಕ್ಕಬೇಕು, ತಾನು ಮಾಡಿದ ಪಾಪ ಹೋಗಬೇಕು. ತಾವು ಮಾಡಿದ ಕರ್ಮ ಬಲವಂತವಾದರೇ ಯಾರೇನು ಮಾಡುವರು? ಎಂದು ಹೇಳುವ ಮೂಲಕ ನಟ ದರ್ಶನ್‌ಗೆ ಜಾಮೀನು ವಿಳಂಬವಾಗುತ್ತಿರುವುದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Kodi Mutt Swamiji Prediction

ಬಳಿಕ ಶ್ರೀಗಳು (Kodi Mutt Swamiji)  ಮುಡಾ ಪ್ರಕರಣದ ಬಗ್ಗೆ ಮಾತನಾಡಿ, ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ದೈವ ಬಲವಿಲ್ಲ. ಹೀಗಾಗಿ ಅವರಿಗೆ ನೋವು ಕೊಟ್ಟು ತೊಂದರೆ ಮಾಡಿದ್ದಾರೆ. ಅಂದು ಮಹಾಭಾರತದಲ್ಲಿ ಚಕ್ರವ್ಯೂಹ ಹೊಕ್ಕ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಕರ್ಣನ ಕೈಯಲ್ಲಿ ಮೋಸದಿಂದ ಕತ್ತರಿಸುತ್ತಾರೆ. (Kodi Mutt Swamiji) ಮುಡಾ ಪ್ರಕರಣದಲ್ಲಿ ಇದೇ ರೀತಿ ಸಿದ್ದರಾಮಯ್ಯ ಅವರ ಹೆಂಡತಿ ರಂಗ ಪ್ರವೇಶ ಮಾಡುವಂತೆ ಮಾಡಿದ್ದಾರೆ. ಮಹಾಭಾರತದಲ್ಲಿ ಕೃಷ್ಣ ಇದ್ದ ಭೀಮ ಗೆದ್ದ, ಈಗ ಕೃಷ್ಣ ಬಲ ಇಲ್ಲ, ದುರ್ಯೋಧನ ಗೆಲ್ತಾನೆ ಅಂತ ನಾನು ಮೊದಲೇ ಹೇಳಿದ್ದೆ. ಅದೇ ರೀತಿ ಸಿದ್ದರಾಮಯ್ಯಗೆ ತೊಂದರೆ ಕೊಡ್ತಿದ್ದಾರೆ, ಅವರ ಹೆಂಡತಿ ಆಚೆ ಬರದವಳು ಆಚೆ ಬರುವಂತಾಯಿತು, ಜಗತ್ತು ನೋಡುವಂತಾಯಿತು. (Kodi Mutt Swamiji) ಈ ಮಹಾಭಾರತದಲ್ಲಿ ರಾಜ ಗೆಲ್ತಾನೆ, ಇವರಿಗೆ ದೈವ ಬಲ ಇಲ್ಲ ಅಂತ ಮಾರ್ಮಿಕವಾಗಿ ಸಿದ್ದರಾಮಯ್ಯನವರ ರಾಜಕೀಯ ಭವಿಷ್ಯದ ಬಗ್ಗೆ ನುಡಿದಿದ್ದಾರೆ.

Leave a Reply

Your email address will not be published. Required fields are marked *

Next Post

KPTCL Jobs: ವಿದ್ಯುತ್ ನಿಗಮದಲ್ಲಿವೆ 2975 ಹುದ್ದೆಗಳು, 10ನೇ ತರಗತಿ ಪಾಸ್ ಆದವರು ಅರ್ಜಿ ಹಾಕಿ, ಸಂಪೂರ್ಣ ವಿವರ ಇಲ್ಲಿದೆ….!

Wed Oct 16 , 2024
ಅನೇಕರಿಗೆ ಸರ್ಕಾರಿ ನೌಕರಿ ಪಡೆಯುವ ಆಸೆಯೊಂದಿರುತ್ತಾರೆ. ಅಂತಹ ಅಭ್ಯರ್ಥಿಗಳಿಗೆ ಸಿಹಿ ಸುದ್ದಿಯೊಂದಿದೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPTCL Jobs) ವತಿಯಿಂದ 2975 ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅ.21 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ನ.20 ಕೊನೆಯ ದಿನಾಂಕವಾಗಿದೆ. ಇನ್ನೂ ಈ ಹುದ್ದೆಗಳಿಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು. ಎಷ್ಟು ವೇತನ. ವಯೋಮಿತಿ ಮೊದಲಾದ ವಿವರಗಳನ್ನು ಈ ಸುದ್ದಿಯ ಮೂಲಕ ತಿಳಿಸಲಾಗಿದೆ. ಕರ್ನಾಟಕ ವಿದ್ಯುತ್‌ […]
Picsart 24 10 16 11 45 00 492
error: Content is protected !!