Rainfall – ಕರ್ನಾಟಕದಲ್ಲಿ (Karnataka) ಕಳೆದ ಕೆಲವು ದಿನಗಳಿಂದ ಪೂರ್ವ ಮುಂಗಾರು ಮಳೆ (Pre-Monsoon Rain) ಅಬ್ಬರಿಸುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ (Bengaluru) ಭಾನುವಾರ ಸುರಿದ ಒಂದೇ ಮಳೆ ಸಾಕಷ್ಟು ಅನಾಹುತಗಳನ್ನು ಸೃಷ್ಟಿಸಿತ್ತು. ಈಗ ಎರಡು ದಿನಗಳಿಂದ ಮಳೆ ಕೊಂಚ ಬಿಡುವು ನೀಡಿದೆ ಅಂದುಕೊಳ್ಳುವಷ್ಟರಲ್ಲಿ, ಹವಾಮಾನ ಇಲಾಖೆ (IMD) ಮತ್ತೊಂದು ಮಹತ್ವದ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಮುಂದಿನ ಐದರಿಂದ ಆರು ದಿನಗಳ ಕಾಲ ಭಾರೀ ಮಳೆಯಾಗುವ (Heavy Rainfall) ಸಾಧ್ಯತೆಯಿದೆ ಎಂದು ಮುನ್ಸೂಚನೆ (Rainfall Forecast) ನೀಡಿದೆ.
Rainfall – ಯಾವ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ?
ಹವಾಮಾನ ಇಲಾಖೆಯ ಪ್ರಕಾರ, ಮೇ 28ರವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ಕರಾವಳಿ (Coastal Karnataka), ಮಲೆನಾಡು (Malenadu), ಉತ್ತರ ಕರ್ನಾಟಕ (North Karnataka) ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
Rainfall – ಆರೆಂಜ್ ಅಲರ್ಟ್ ಘೋಷಣೆ
ಈ ಹಿನ್ನೆಲೆಯಲ್ಲಿ, ಮಳೆ ಹೆಚ್ಚಿರುವ ಸಂಭವ ಇರುವ ಜಿಲ್ಲೆಗಳಿಗೆ ಮೇ 26ರವರೆಗೆ ಆರೆಂಜ್ ಅಲರ್ಟ್ (Orange Alert) ಘೋಷಿಸಲಾಗಿದೆ. ಮೇ 22-24ರವರೆಗೆ ಕೊಂಕಣ ಮತ್ತು ಗೋವಾದಲ್ಲಿ, ಹಾಗೂ ಮೇ 24ರಂದು ಕರಾವಳಿ ಕರ್ನಾಟಕದಾದ್ಯಂತ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಮೇ 28ರವರೆಗೆ ಕೇರಳ ಮತ್ತು ಕರ್ನಾಟಕದಾದ್ಯಂತ ಭಾರೀ ಮಳೆಯಾಗುವ ನಿರೀಕ್ಷೆ ಇದೆ. ಈ ಅವಧಿಯಲ್ಲಿ ದಕ್ಷಿಣ ಪರ್ಯಾಯ ದ್ವೀಪದಲ್ಲಿ ಗಂಟೆಗೆ 40-50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ (Squally Weather) ಸಹಿತ ಗುಡುಗು-ಮಿಂಚು ಇರುವ ಸಾಧ್ಯತೆ ಇದೆ.
Read this also : Best credit cards in India 2025 : ನೀವು ಯಾವ ಕ್ರೆಡಿಟ್ ಕಾರ್ಡ್ ಆಯ್ಕೆ ಮಾಡಿಕೊಳ್ಳಬಹುದು, ಈ ಸುದ್ದಿ ಓದಿ…!
ಮೀನುಗಾರಿಕೆಗೆ ನಿರ್ಬಂಧ
ಧಾರಾಕಾರ ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಡಳಿತಗಳು ಮೀನುಗಾರಿಕೆಯನ್ನು (Fishing Ban) ಸಂಪೂರ್ಣವಾಗಿ ನಿಷೇಧಿಸಿವೆ. ಆಳ ಸಮುದ್ರಕ್ಕೆ ತೆರಳಿದ್ದ ದೊಡ್ಡ ಬೋಟುಗಳು ಈಗಾಗಲೇ ವಾಪಸ್ ಬರುತ್ತಿವೆ. ಕೆಲವು ಬೋಟುಗಳು ದಡದಲ್ಲಿ ಲಂಗರು ಹಾಕಿವೆ. ಮಳೆಯ ಕಾರಣದಿಂದ ಈ ವರ್ಷ ಮೀನುಗಾರಿಕಾ ಋತು ನಿಗದಿತ ಅವಧಿಗೂ ಮುನ್ನವೇ ಅಂತ್ಯಗೊಂಡಿದೆ.
Rainfall – ಚಿಕ್ಕಮಗಳೂರಿನಲ್ಲಿ ಐದು ದಿನ ಆರೆಂಜ್ ಅಲರ್ಟ್
ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಾದ್ಯಂತ (Chikkamagaluru Rain) ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದ, ಮೇ 23 ರಿಂದ ಮೇ 27ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಳೆದ 15 ದಿನಗಳಿಂದ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಎರಡು ದಿನಗಳ ಬಿಡುವಿನ ನಂತರ ಮತ್ತೆ ಮಳೆ ಅಬ್ಬರಿಸುವ ಸಾಧ್ಯತೆ ಇದೆ. ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲೂ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ, ಚಿಕ್ಕಮಗಳೂರು ಜಿಲ್ಲಾಡಳಿತ ಹೈ ಅಲರ್ಟ್ (High Alert) ಘೋಷಿಸಿದೆ.
Rainfall – ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಸೂಚನೆ
ಭಾರೀ ಮಳೆ ಹಿನ್ನೆಲೆಯಲ್ಲಿ, ಮೆಸ್ಕಾಂ ಸಿಬ್ಬಂದಿಗಳು (MESCOM Staff) ತಮ್ಮ ಕಾರ್ಯಸ್ಥಾನ ಬಿಟ್ಟು ತೆರಳದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲದೆ, ಸ್ಥಳೀಯರು ಮತ್ತು ಪ್ರವಾಸಿಗರು (Tourists) ಸಹ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವಂತೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸೂಚಿಸಿದ್ದಾರೆ.