Sunday, October 26, 2025
HomeStateUzbekistan: ಹೆಚ್ಚು ಸಂಬಳ ಗಳಿಸುವ ಆಸೆಗೆ ಉಜ್ಬೇಕಿಸ್ತಾನ್ ಗೆ ಹೋದ ಕನ್ನಡಿಗರು, ಅನ್ನ ನೀರು ಸಿಗದೇ...

Uzbekistan: ಹೆಚ್ಚು ಸಂಬಳ ಗಳಿಸುವ ಆಸೆಗೆ ಉಜ್ಬೇಕಿಸ್ತಾನ್ ಗೆ ಹೋದ ಕನ್ನಡಿಗರು, ಅನ್ನ ನೀರು ಸಿಗದೇ ಪರದಾಟ?

ಅನೇಕ ಯುವಕರು ಕೆಲಸವನ್ನು ಹರಸಿ ತಮ್ಮ ಊರುಗಳನ್ನು ಬಿಟ್ಟು ನಗರಗಳು, ರಾಜ್ಯಗಳು ಸೇರಿದಂತೆ ವಿದೇಶಗಳಿಗೂ ಸಹ ಹೋಗುತ್ತಿರುತ್ತಾರೆ. ಅನೇಕರು ಬೇರೆ ದೇಶಗಳಿಗೆ ಹೋಗಿ ಒಳ್ಳೆಯ ಹುದ್ದೆಗಳನ್ನು ಪಡೆದು ಸಂಪಾದನೆ ಮಾಡಿದರೇ, ಮತ್ತೆ ಕೆಲವರು ಕೆಲಸಕ್ಕೆಂದು ಹೋಗಿ ತುಂಬಾನೆ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. ಇದೀಗ ಅಂತಹುದೇ ಸುದ್ದಿಯೊಂದು ಕೇಳಿಬಂದಿದೆ. ಲಕ್ಷ ಲಕ್ಷ ಸಂಬಳ ಪಡೆಯುವ ಆಸೆಯಿಂದ ಕೆಲಸ ಹರಸಿ ಉಜ್ಬೇಕಿಸ್ತಾನಕ್ಕೆ (Uzbekistan) ಹೋದ ಬೀದರ್‍ ಹಾಗೂ ಕಲಬುರ್ಗಿ ಮೂಲದ ಯುವಕರಿಗೆ ಸಂಕಷ್ಟ ಎದುರಾಗಿದೆ, ಉದ್ಯೋಗವೂ ಇಲ್ಲದೇ, ಅನ್ನ ನೀರು ಇಲ್ಲದೇ ಪರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಉದ್ಯೋಗ ಹರಸಿ ಕರ್ನಾಟಕದ ಬೀದರ್‍ ಹಾಗೂ ಕಲಬುರ್ಗಿ ಮೂಲದ 14 ಮಂದಿ ಯುವಕರು ಲಕ್ಷಾಂತರ (Uzbekistan) ಸಂಬಳದ ಆಸಗೆ ಉಜ್ಬೇಕಿಸ್ತಾನಕ್ಕೆ ತೆರಳಿದ್ದಾರೆ. ಲಕ್ಷ ಲಕ್ಷ ಸಂಬಳದ ಆಸೆಯನ್ನು ಹುಟ್ಟಿಸಿದ ಮಧ್ಯವರ್ತಿಗಳ ಮಾತುಗಳನ್ನು ನಂಬಿ ಅವರಿಗೆ ಲಕ್ಷ ಲಕ್ಷ ಹಣ ನೀಡಿ ಉಜ್ಬೇಕಿಸ್ತಾನಕ್ಕೆ ಹೋಗಿ ಮೋಸ ಹೋಗಿದ್ದಾರೆ. ಅಲ್ಲಿಗೆ ಹೋದ ಬಳಿಕ ಉದ್ಯೋಗವೂ ಇಲ್ಲದೇ, ತಿನ್ನಲು ಅನ್ನ ನೀರು ಸಹ ಇಲ್ಲದೇ ಆ ಯುವಕರು ಪರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಜ್ಬೇಕಿಸ್ತಾನಕ್ಕೆ ತೆರಳಿದವರಲ್ಲಿ ಬೀದರ್‍ ಜಿಲ್ಲೆಯ ಬಸವಕಲ್ಯಾಣ, ಹುಮ್ನಾಬಾದ್ ಸೇರಿದಂತೆ ಈ ಭಾಗದ ಯುವಕರು (Uzbekistan) ಸೇರಿದ್ದಾರೆ ಎನ್ನಲಾಗಿದೆ.

ಇನ್ನೂ ತಮ್ಮ ಪರಿಸ್ಥಿತಿಯನ್ನು (Uzbekistan) ವಿಡಿಯೋ ಮಾಡಿ, ತಮ್ಮನ್ನು ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ. ಈ ವಿಡಿಯೋದಲ್ಲಿ (Uzbekistan) ಅವರು ನಾವು ಮಧ್ಯವರ್ತಿಗಳನ್ನು ನಂಬಿ (Uzbekistan) ಮೋಸ ಹೋಗಿದ್ದೇವೆ. ಇಲ್ಲಿ ಊಟ ಇಲ್ಲದೇ ಹಲವು ಜನ ಸತ್ತಿದ್ದಾರೆ. ಇದರಿಂದ ನಮಗೆ ಭಯವಾಗುತ್ತಿದೆ. ನಮ್ಮನ್ನು ಬೇಗ ಸ್ವದೇಶಕ್ಕೆ ಕರೆಸಿಕೊಳ್ಳಿ ಎಂದು ವಿಡಿಯೋ ಮೂಲಕ ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ. ಒಂದು ವೇಳೆ ವಿದೇಶಗಳಲ್ಲಿ ಉದ್ಯೋಗ ಮಾಡಲು ಬಯಸಿದರೇ (Uzbekistan) ಎಲ್ಲವನ್ನೂ ಪರಿಶೀಲನೆ ಮಾಡಿ, ಅವರು ಮೋಸ ಮಾಡುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು ಮುಂದೆ ಸಾಗುವುದು ಒಳಿತು ಎಂದು ಹೇಳಬಹುದಾಗಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular