K N Rajanna ಸದ್ಯ ರಾಜ್ಯದಲ್ಲಿ ಡಿನ್ನರ್ ಪಾಲಿಟಿಕ್ಸ್ ತುಂಬಾನೆ ಸದ್ದು ಮಾಡುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮನೆಯಲ್ಲಿ ಆಯೋಜಿಸಿದ್ದ ಡಿನ್ನರ್ ಮಿಟೀಂಗ್ ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಗೃಹ ಸಚಿವ ಡಾ.ಪರಮೇಶ್ವರ್ ಡಿನ್ನರ್ ಪಾರ್ಟಿಯನ್ನು ಏರ್ಪಡಿಸಿದ್ದು, ಇದು ಮತಷ್ಟು ಗದ್ದಲಕ್ಕೆ ಕಾರಣವಾಗಿತ್ತು. ಆದರೆ ಈ ಪಾರ್ಟಿಯನ್ನು ಮುಂದೂಡುವಂತೆ ಹೈಕಮಾಂಡ್ ಸೂಚನೆ ನೀಡಿದ್ದು, ಇಂದು (ಜ.8) ನಡೆಯಬೇಕಿದ್ದ ಡಿನ್ನರ್ ಪಾರ್ಟಿ ಮುಂದೂಡಲಾಗಿದೆ.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ರವರ ಮನೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮುಖಂಡರಿಗೆ ತುಮಕೂರು ನಗರದ ಹೋಟೆಲ್ ನಲ್ಲಿ ಡಿನ್ನರ್ ಪಾರ್ಟಿ ಆಯೋಜಿಸಿದ್ದು, ಇದು ಹೈಕಮಾಂಡ್ ಸೂಚನೆಯ ಮೇರೆಗೆ ಮುಂದೂಡಲಾಗಿದೆ. ಈ ಸಂಬಂಧ ಮಾತನಾಡಿದ ಸಹಕಾರ ಸಚಿವ ರಾಜಣ್ಣ, ಡಿನ್ನರ್ ಪಾರ್ಟಿಯನ್ನು ಮುಂದೂಡಲಾಗಿದೆಯೇ ವಿನಃ ರದ್ದು ಮಾಡಿಲ್ಲ. ಮೊನ್ನೆ ಸತೀಶ್ ಜಾರಿಕಿಹೊಳಿ ನಿವಾಸದಲ್ಲಿನ ಪಾರ್ಟಿಯ ಕಾರಣ ಗೊಂದಲ ಉಂಟಾಗಿತ್ತು. ಮತ್ತೆ ಗೊಂದಲವಾಗೋದು ಬೇಡ ಅಂತಾ ಹೈಕಮಾಂಡ್ ಸೂಚನೆ ನೀಡಿದೆ. ಆದ್ದರಿಂದ ಡಿನ್ನರ್ ಪಾರ್ಟಿ ಮುಂದೂಡಲಾಗಿದೆ ಎಂದರು.
ಇನ್ನೂ ಡಿ.ಕೆ.ಶಿವಕುಮಾರ್ ರವರಿಗೆ ಬೇಸರವಾಗೋಕೆ ಅವರ ಆಸ್ತಿಯನ್ನು ಯಾರಾದರೂ ಬರೆಸಿಕೊಂಡಿದ್ದಾರಾ, ಪರಿಶಿಷ್ಟ ಜಾತಿ ಅಥವಾ ಪಂಗಡದ ಸಮುದಾಯದವರಿಗೆ ಪ್ರಿಯೂವರ್ಸಿಟಿ ಮಕ್ಕಳಿಗೆ, ಮ್ಯಾನೇಜ್ಮೆಂಟ್ ಕೋಟಾದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ದಾಖಲು ಮಾಡುತ್ತಿದ್ದಾರೆ. ಅವರಿಗೆಲ್ಲಾ ವಿದ್ಯಾರ್ಥಿ ವೇತನ ಸಿಗ್ತಾ ಇಲ್ಲ. ಈ ಸಮಸ್ಯೆಗಳನ್ನು ಚರ್ಚೆ ಮಾಡೋಕೆ ಮೀಟಿಂಗ್ ಕರೆದರೇ ಬೇಡ ಎನ್ನುತ್ತಾರೆ ಎಂದು ಡಿಕೆಶಿ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. ಹೈಕಮಾಂಡ್ ಅಥವಾ ಬೇರೆ ಯಾರೇ ಆಗಲಿ ಈ ರೀತಿ ಮಾಡಿದರೇ ಹೇಗೆ, ಇವರೆಲ್ಲಾ ಪರಿಶಿಷ್ಟ ಸಮುದಾಯಗಳ ವಿರೋಧಿಗಳೇ, ಇದೆಲ್ಲಾ ತುಂಬಾ ದಿನ ನಡೆಯಲ್ಲ. ಈ ರೀತಿಯ ಸಭೆಗಳಿಗೆ ರಾಜಕೀಯ ಮುದ್ರೆ ಹಾಕುವುದು ಸರಿಯಲ್ಲ. ಈ ರೀತಿಯ ಕೆಲಸ ಯಾರು ಮಾಡಿದರೂ ಅವರಿಗೆಲ್ಲಾ ಇದು ಅನ್ವಯವಾಗುತ್ತದೆ ಎಂದು ಆಕ್ರೋಷ ಹೊರಹಾಕಿದ್ದಾರೆ.
Satish Jarkiholi :ಡಿನ್ನರ್ ಪಾರ್ಟಿಗಳು ಹೊಸದು ಏನು ಅಲ್ಲಾ, ಇದರಲ್ಲಿ ಯಾವುದೇ ಮುಸುಕಿನ ಗುದ್ದಾಟವಿಲ್ಲ ಎಂದ ಸತೀಶ್ ಜಾರಕಿಹೊಳಿ
ಡಿನ್ನರ್ ಪಾಲಿಟಿಕ್ಸ್ ಕುರಿತು ಲೋಕೋಪಯೋಗಿ ಇಲಾಖೆಯ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಈ ಕುರಿತು ಮಾತನಾಡಿದ ಅವರು, ಪರಿಶಿಷ್ಟ ಜಾತಿ ಹಾಗೂ ಪಂಗಡದ ಶಾಸಕರ ಡಿನ್ನರ್ ಮೀಟಿಂಗ್ ವಿಚಾರ, ಯಾರು ಕರೆದಿದ್ರು ಅವರನ್ನು ಕೇಳಬೇಕು, ಕರೆದಿದ್ದರೇ ನಾವು ಭಾಗವಹಿಸುತ್ತಿದ್ದೆವು. ನಾವು ಸಭೆಗೆ ಆಹ್ವಾನಿತರಷ್ಟೆ. ಸಭೆಗೆ ನನ್ನನ್ನು ಕರೆದಿದ್ದರು. ಏನು ಚರ್ಚೆಯಾಗಿತ್ತು ನನಗೆ ಗೊತ್ತಿಲ್ಲ. ಪರಮೇಶ್ವರ್ ರವರ ಜೊತೆ ನಾನು ಮಾತನಾಡಿಲ್ಲ. ಪಕ್ಷ ಒಂದೇ ಇದೆ, ಎಲ್ಲರೂ ಒಂದಾಗಿದ್ದೇವೆ. ರಾಜಕೀಯ ಮಾಡಬೇಕಾದ್ರೆ ಶಕ್ತಿ ಇಟ್ಕೊಂಡು ಬರಬೇಕು ಎಂದಿದ್ದಾರೆ.
ನಾವು ಸಭೆಗೆ ಕರೆದವರೂ ಅಲ್ಲ, ಡೆಲ್ಲಿಗೆ ಹೋದವರೂ ಅಲ್ಲ. ಇದರ ಬಗ್ಗೆ ಹೇಳಿದರೇ ಮತ್ತೇ ಬೇರೆ ಏನೋ ಆಗುತ್ತದೆ. ಮತ್ತೆ ಯಾವಾಗ ಮಾಡ್ತಾರೆ ಎಂದು ಕೇಳ್ತೇವೆ. ಡಿನ್ನರ್ ಪಾರ್ಟಿ ಹೊಸದೇನೂ ಅಲ್ಲ. ಇದರಲ್ಲಿ ಮುಸುಕಿನ ಗುದ್ದಾಟವೇನೂ ಇಲ್ಲ. ಹೈಕಮಾಂಡ್ ಅನುಮತಿಯನ್ನು ಗೃಹ ಮಂತ್ರಿಗಳು ತೆಗೆದುಕೊಳ್ಳುತ್ತಾರೆ. ನಂತರ ಸಭೆಯ ಬಗ್ಗೆ ನೋಡೋಣ. ಸಮಸ್ಯೆಯೊಂದು ಹುಟ್ಟಿಕೊಂಡಾಗ ಅದರ ಬಗ್ಗೆ ಕೇಳಬೇಕಲ್ಲವೇ, ಹೈಕಮಾಂಡ್ ಹತ್ತಿರವೇ ಕೇಳೋಣ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.