Sunday, August 31, 2025
HomeSpecialBank Holidays : ಜನವರಿ 2025 ಮಾಹೆಯಲ್ಲಿವೆ 15 ಬ್ಯಾಂಕ್ ರಜಾ ದಿನಗಳು, ಪಟ್ಟಿ ಇಲ್ಲಿದೆ...

Bank Holidays : ಜನವರಿ 2025 ಮಾಹೆಯಲ್ಲಿವೆ 15 ಬ್ಯಾಂಕ್ ರಜಾ ದಿನಗಳು, ಪಟ್ಟಿ ಇಲ್ಲಿದೆ ನೋಡಿ…!

Bank Holidays – ಹಣಕಾಸಿನ ವ್ಯವಹಾರಗಳ ನಡೆಸಲು ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅತ್ಯವಶ್ಯಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದೇ ಇದ್ದ ಸಮಯದಲ್ಲಿ ಬ್ಯಾಂಕ್ ಗಳಿಗೆ ರಜೆಯಿದ್ದರೇ ಬ್ಯಾಂಕ್ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ತುಂಬಾನೆ ಕಷ್ಟ ಪಡುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಬಳಿಕ ಬ್ಯಾಂಕ್ ರಜೆಯಿದ್ದರೂ ಹಣಕಾಸಿನ ವ್ಯವಹಾರ ನಡೆಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದೇ ಹೇಳಬಹುದಾಗಿದೆ.

November bank holidays

ಇದೀಗ ಆರ್‍.ಬಿ.ಐ ಕ್ಯಾಲೆಂಡರ್‍ ಪ್ರಕಾರ ಜನವರಿ 2025 ರ ಮಾಹೆಯಲ್ಲಿ ಬ್ಯಾಂಕ್ ಗಳಿಗೆ ಒಟ್ಟು 15 ದಿನ ರಜೆ ಇರಲಿದೆ. ಈ ರಜೆಗಳಲ್ಲಿ ಭಾನುವಾರ ಹಾಗೂ ಎರಡು ಶನಿವಾರದ ರಜೆಗಳೂ ಸಹ ಸೇರಿದೆ. ಸಂಕ್ರಾಂತಿ, ಗುರುಗೋವಿಂದ್ ಜಯಂತಿ, ಸುಭಾಷ್ ಚಂದ್ರ ಬೋಸ್ ಜಯಂತಿ, ಜನವರಿ 11ರಿಂದ 16ರವರೆಗೆ ಸತತವಾಗಿ ರಜೆ ಇದೆ. ಇನ್ನೂ ಕರ್ನಾಟಕದಲ್ಲಿ ಎಂಟು ದಿನ ಬ್ಯಾಂಕ್ ಗಳು ಬಂದ್ ಆಗಿರುತ್ತವೆ. ಇದರಲ್ಲಿ ಜನವರಿ 1ರಂದು ಹೊಸ ವರ್ಷಾಚರಣೆ ಮತ್ತು ಜನವರಿ 15ರಂದು ಸಂಕ್ರಾಂತಿ ಹಬ್ಬಕ್ಕೆ ಬಿಟ್ಟರೆ ಉಳಿದ ರಜೆಗಳು ಶನಿವಾರ ಮತ್ತು ಭಾನುವಾರದ ದಿನಗಳಿದ್ದು, ರಜಾದಿನಗಳ ಪಟ್ಟಿ ಈ ಕೆಳಕಂಡತಿದೆ.

Bank Holidays – ಕರ್ನಾಟಕದಲ್ಲಿ ಜನವರಿಯಲ್ಲಿನ ಬ್ಯಾಂಕ್ ರಜಾದಿನಗಳು :

  • 2025ರ ಜನವರಿಯಲ್ಲಿ ಕರ್ನಾಟಕದಲ್ಲಿ ಬ್ಯಾಂಕ್ ರಜಾದಿನಗಳು
  • ಜನವರಿ 1, ಬುಧವಾರ: ಹೊಸ ವರ್ಷ
  • ಜನವರಿ 5: ಭಾನುವಾರದ ರಜೆ
  • ಜನವರಿ 11: ಎರಡನೇ ಶನಿವಾರ
  • ಜನವರಿ 12: ಭಾನುವಾರದ ರಜೆ
  • ಜನವರಿ 14, ಮಂಗಳವಾರ: ಸಂಕ್ರಾಂತಿ ಹಬ್ಬ
  • ಜನವರಿ 19: ಭಾನುವಾರದ ರಜೆ
  • ಜನವರಿ 25: ನಾಲ್ಕನೇ ಶನಿವಾರದ ರಜೆ
  • ಜನವರಿ 26: ಭಾನುವಾರದ ರಜೆ

Bank Holidays – 2025ರ ಜನವರಿ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳು:

  • ಜನವರಿ 1, ಬುಧವಾರ: ಹೊಸ ವರ್ಷ
  • ಜನವರಿ 2, ಗುರುವಾರ: ಹೊಸ ವರ್ಷ (ಮಿಜೋರಾಮ್ ರಾಜ್ಯದಲ್ಲಿ ರಜೆ)
  • ಜನವರಿ 5: ಭಾನುವಾರದ ರಜೆ
  • ಜನವರಿ 6, ಸೋಮವಾರ: ಗುರು ಗೋವಿಂದ್ ಜಯಂತಿ (ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ರಜೆ)
  • ಜನವರಿ 11: ಎರಡನೇ ಶನಿವಾರ
  • ಜನವರಿ 12: ಭಾನುವಾರದ ರಜೆ
  • ಜನವರಿ 13, ಸೋಮವಾರ: ಲೋಹ್ರಿ ಹಬ್ಬ (ಪಂಜಾಬ್ ಮೊದಲಾದ ಕೆಲ ರಾಜ್ಯಗಳಲ್ಲಿ ರಜೆ)
  • ಜನವರಿ 14, ಮಂಗಳವಾರ: ಸಂಕ್ರಾಂತಿ, ಪೊಂಗಲ್ ಹಬ್ಬ (ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ರಜೆ)
  • ಜನವರಿ 15, ಬುಧವಾರ: ತಿರುವಳ್ಳುವರ್ ದಿನ, ಮಾಘ ಬಿಹು (ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಮ್​ನಲ್ಲಿ ರಜೆ)
  • ಜನವರಿ 16, ಗುರುವಾರ: ಕಾಣುಮಾ ಪಂಡುಗ (ಅರುಣಾಚಲ ಪ್ರದೇಶದಲ್ಲಿ ರಜೆ)
  • ಜನವರಿ 19: ಭಾನುವಾರದ ರಜೆ
  • ಜನವರಿ 23, ಗುರುವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ (ಹಲವು ರಾಜ್ಯಗಳಲ್ಲಿ ರಜೆ)
  • ಜನವರಿ 25: ನಾಲ್ಕನೇ ಶನಿವಾರದ ರಜೆ
  • ಜನವರಿ 26: ಭಾನುವಾರದ ರಜೆ
  • ಜನವರಿ 30, ಗುರುವಾರ: ಸೋನಮ್ ಲೋಸರ್ ಹಬ್ಬ (ಸಿಕ್ಕಿಂನಲ್ಲಿ ರಜೆ)
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular