ಜನಸೇನಾನಿ ಪವನ್ ಕಲ್ಯಾಣ್ ಭರ್ಜರಿ ಗೆಲುವು, ಭಾರಿ ಮತಗಳ ಅಂತರದಿಂದ ಗೆದ್ದು ಬೀಗಿದ ನಟ ಪವನ್ ಕಲ್ಯಾಣ್….!

ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಮೊದಲ ಸ್ಥಾನದಲ್ಲಿ ಪಿಠಾಪುರಂ ಕ್ಷೇತ್ರ ಒಂದಾಗಿತ್ತು. ಈ ಕ್ಷೇತ್ರದಿಂದ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪರ್ಧೆ ಮಾಡಿದ್ದರು. ಎನ್.ಡಿ.ಎ ಒಕ್ಕೂಟ ಆಂಧ್ರಪ್ರದೇಶದಲ್ಲಿ ಕಮಾಲ್ ಮಾಡಿದೆ ಎಂದೇ ಹೇಳಬಹುದಾಗಿದೆ. ನಟ ಪವನ್ ಕಲ್ಯಾಣ್ 1,32,725 ಮತಗಳನ್ನು ಪಡೆಯುವ ಮೂಲಕ ಭಾರಿ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರಿಗೆ ಅವರ ಪತ್ನು ಲೆಜಿನೋವಾ ಆರತಿ ಮಾಡಿ ಸ್ವಾಗತಿಸಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರು ಅಭೂತಪೂರ್ವ ಜಯವನ್ನು ಮೆಗಾಸ್ಟಾರ್‍ ಚಿರಂಜೀವಿ, ಅಲ್ಲು ಅರ್ಜುನ್, ಅವರ ಮಾಜಿ ಪತ್ನಿ ರೇಣು ದೇಸಾಯಿ ಸೇರಿದಂತೆ ಅನೇಕರು ಹೊಗಳಿ ಶುಭ ಕೋರುತ್ತಿದ್ದಾರೆ.

Pawan Kalyan won in pitapuram 1

ಆಂಧ್ರಪ್ರದೇಶದಲ್ಲಿ ಮೇ.13 ರಂದು ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ನಡೆಯಿತು. ಈ ಭಾರಿ ಜಗನ್ ಮೋಹನ್ ರೆಡ್ಡಿ ಸರ್ಕಾರವನ್ನು ಉರುಳಿಸಬೇಕೆಂದು ಪಣ ತೊಟ್ಟ ನಟ ಪವನ್ ಕಲ್ಯಾಣ್ ಟಿಡಿಪಿ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡರು. ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾನ್ ಈ ಭಾರಿ ಜಗನ್ ಮೋಹನ್ ರೆಡ್ಡಿ ಪಕ್ಷವನ್ನು ಏನಾದರೂ ಮಾಡಿ ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದರು. ಇನ್ನೂ ಪವನ್ ಕಲ್ಯಾಣ್ ರವರಿಗೆ ತೆಲುಗಿನ ನಟರು, ಕಲಾವಿದರು ಬೆಂಬಲ ನೀಡಿ ಪ್ರಚಾರ ಮಾಡಿದ್ದರು. ಅದರಲ್ಲೂ ಪವನ್ ಕಲ್ಯಾಣ್ ರವರ ಸಹೋದರ ಮೆಗಾಸ್ಟಾರ್‍ ಚಿರಂಜೀವಿ, ಅವರ ಮಗ ರಾಮ್ ಚರಣ್, ಪವನ್ ಕಲ್ಯಾಣ್ ತಾಯಿ ಸೇರಿದಂತೆ ಹಲವು ನಟರು ಬೆಂಬಲಿಸಿದ್ದರು. ರಾಮ್ ಚರಣ್ ಹಾಗೂ ಅವರ ತಾಯಿ ಪಿಠಾಪುರಂ ಕ್ಷೇತ್ರದಲ್ಲಿ ಪ್ರಚಾರ ಸಹ ಮಾಡಿದ್ದರು. ಬರೋಬ್ಬರಿ 1,32,725 ಮತಗಳನ್ನು ಗಳಿಸುವ ಮೂಲಕ ಭರ್ಜರಿ ಜಯ ಗಳಿಸಿದ್ದಾರೆ. ಜೊತೆಗೆ ಅವರ ಪಕ್ಷ ಸಹ 21 ಸ್ಥಾನಗಳಲ್ಲಿ ಜಯ ಗಳಿಸಿದೆ.

Pawan Kalyan won in pitapuram 0

ಇನ್ನೂ ಪವನ್ ಕಲ್ಯಾಣ್ ಗೆಲುವು ಸಾಧಿಸುತ್ತಿದ್ದಂತೆ ಎಲ್ಲರಿಂದಲೂ ಶುಭಾಷಯಗಳು ಹರಿದುಬರುತ್ತಿದೆ. ಈ ಹಾದಿಯಲ್ಲೇ ಮೆಗಾಸ್ಟಾರ್‍ ಚಿರಂಜೀವಿ ತಮ್ಮ ಸಹೋದರ ಪವನ್ ಕಲ್ಯಾಣ್ ರವರಿಗೆ ಶುಭಾಷಯ ತಿಳಿಸುತ್ತಾ ಟ್ವೀಟ್ ಮಾಡಿದ್ದಾರೆ. “ಡಿಯರ್‍ ಕಲ್ಯಾಣ್ ಬಾಬು, ಎಂದು ಆರಂಭಿಸಿ ತೆಲುಗಿನಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಷಯ ಕೋರಿದ್ದಾರೆ. ನಿನ್ನ ಶ್ರಮ, ನಿನ್ನ ಕೃಷಿ, ಜನರ ಕ್ಷೇಮಕ್ಕಾಗಿ ಹಾಗೂ ನಿನ್ನ ಕನಸುಗಳನ್ನು ನೆರವೇರಿಸಿಕೊಳ್ಳಲು ಇಟ್ಟುಕೊಂಡ ಗುರಿ ನಿನ್ನ ಒಳ್ಳೆಯ ಹಾದಿಯಲ್ಲಿ ನಡೆಸುತ್ತೆ ಎಂದು ಆಶಿಸುತ್ತಾ, ಆರ್ಶಿವಾದಿಸುತ್ತೇನೆ ಎಂದು ಶುಭ ಕೋರಿದ್ದಾರೆ.

Pawan Kalyan won in pitapuram 2

ಅದೇ ರೀತಿ ಪವನ್ ಕಲ್ಯಾಣ್ ಗೆಲುವಿನ ಬಗ್ಗೆ ಅವರ ಮಾಜಿ ಪತ್ನಿ ರೇಣು ದೇಸಾಯಿ ಸಹ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಆದ್ಯ ಹಾಗೂ ಅಕಿರಾ ತುಂಬಾ ಸಂತೋಷದಿಂದ ಇದ್ದಾರೆ. ಈ ತೀರ್ಪು ಆಂಧ್ರಪ್ರದೇಶದ ಜನರಿಗೂ ಸಹ ಪ್ರಯೋಜನವಾಗಲಿದೆ ಎಂದು ಮನೆಯಲ್ಲಿ ಆದ್ಯ ಜೊತೆ ಸಂತೋಷದಿಂದ ಇರುವ ಕ್ಷಣಗಳನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಗೆ ನೆಟ್ಟಿಗರು ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳು ರಿಯಾಕ್ಟ್ ಆಗುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ಗುಡಿಬಂಡೆಯಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು

Wed Jun 5 , 2024
ಗುಡಿಬಂಡೆ: ಲೋಕಸಭಾ ಚುನಾವಣೆ 2024 ಯ ಫಲಿತಾಂಶದಲ್ಲಿ ಅತ್ಯಧಿಕ ಸ್ಥಾನಗಳನ್ನು ಬಿಜೆಪಿ ಪಕ್ಷ ಜಯಗಳಿಸಿದ್ದು, ಈ ಸುದ್ದಿ ಹೊರಬರುತ್ತಿದ್ದಂತೆ ಗುಡಿಬಂಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕರ್ನಾಟಕದಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷ ಜೆಡಿಎಸ್ ಪಕ್ಷ ಅತ್ಯಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಈ ಸಂಬಂಧ ಗುಡಿಬಂಡೆ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಇದೇ ಸಮಯದಲ್ಲಿ ಬಿಜೆಪಿ, ಜೆಡಿಎಸ್, ನರೇಂದ್ರ ಮೋದಿಯವರ […]
vijayostava in gbd 0
error: Content is protected !!