Independence day 2024- ಪ್ರತಿಯೊಂದು ಧರ್ಮದವರಿಗೂ ತಮ್ಮದೇ ಆದ ಹಬ್ಬಗಳು ಇರುತ್ತವೆ, ಅವುಗಳನ್ನು ಅದ್ದೂರಿಯಾಗಿ, ಸಂಭ್ರಮ ಹಾಗೂ ಸಡಗರದಿಂದ ಆಚರಿಸುತ್ತೇವೆ. ಆದರೆ (Independence day 2024) ಸ್ವತಂತ್ರ ದಿನಾಚರಣೆ ಸೇರಿದಂತೆ ರಾಷ್ಟ್ರೀಯ ಹಬ್ಬಗಳನ್ನು ಆಚರಣೆ ಮಾಡುವಲ್ಲಿ ನಿರ್ಲಕ್ಷ್ಯ ತೋರುತ್ತಿದ್ದೇವೆ. ಎಲ್ಲಾ ಹಬ್ಬಗಳಂತೆ ರಾಷ್ಟ್ರೀಯ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸಬೇಕು ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮನವಿ ಮಾಡಿದರು.
ಚಿಕ್ಕಬಳ್ಳಾಪುರದ ಗುಡಿಬಂಡೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮಿನಿ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ 78 ನೇ ಸ್ವಾತಂತ್ಯ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, (Independence day 2024) ಸ್ವಾತಂತ್ಯ್ರ ದಿನಾಚರಣೆ ಅನ್ನೋದು ಕೇವಲ ಒಂದು ಧರ್ಮಕ್ಕಾಗಲಿ, ಒಂದು ವರ್ಗಕ್ಕಾಗಲಿ, ಸರ್ಕಾರಿ ಇಲಾಖೆಗಳಿಗಾಗಲೀ ಸೀಮಿತವಲ್ಲ, ದೇಶದ ಪ್ರತಿಯೊಬ್ಬರೂ ಆಚರಿಸಬೇಕಾದ ಹಬ್ಬವಾಗಿದೆ. (Independence day 2024) ನೇತಾಜಿ, ಭಗತ್ ಸಿಂಗ್ ಸೇರಿದಂತೆ ಅನೇಕ ಮಹನೀಯರ ಪ್ರಾಣತ್ಯಾಗದಿಂದ ನಾವೆಲ್ಲರೂ ಸ್ವಾತಂತ್ಯ್ರವನ್ನು ಅನುಭವಿಸುತ್ತಿದ್ದೇವೆ. ಆದರೆ ಅವರ ನೆನಪಿನಲ್ಲಿ ಆಚರಿಸುವಂತಹ ದಿನಾಚರಣೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದೇವೆ. ಜೊತೆಗೆ ಜನವರಿ 1 ಹೊಸ ವರ್ಷದ ಆಚರಣೆಯನ್ನು ನಡು ರಾತ್ರಿ 12 ಗಂಟೆಗೆ ವಿಜೃಂಭಣೆಯಿಂದ ಪಟಾಕಿ ಸಿಡಿಸಿ, ಲಕ್ಷಾಂತರ ಮಂದಿ ಕೇಕ್ ಎಲ್ಲಾ ಕತ್ತರಿಸಿ ಆಚರಣೆ ಮಾಡುತ್ತಾರೆ. ಆದರೆ ಅಷ್ಟೊಂದು ಅದ್ದೂರಿಯಾಗಿ, ಸಂಭ್ರಮಿಸುವಂತಹ ಅವಕಾಶವನ್ನು ಕೊಟ್ಟಂತಹ (Independence day 2024) ಸ್ವಾತಂತ್ಯ್ರ ದಿನಾಚರಣೆಯನ್ನು ಮಾತ್ರ ಆಚರಿಸಲು ನಿರ್ಲಕ್ಷ್ಯ ಏಕೆ ತೋರುತ್ತಾರೆ ಎಂಬುದು ಗೊತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರು ಎಲ್ಲಾ ಹಬ್ಬಗಳಿಗಿಂತ ಸ್ವಾತಂತ್ಯ್ರ ದಿನಾಚರಣೆಯನ್ನು ಅದ್ದೂರಿಯಾಗಿ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಮುಂದಾಗೋಣ ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ.ನಯಾಜ್ ಮಾತನಾಡಿ, ಹಿಂದೂಗಳಿಗೆ ದಸರಾ, ಮುಸ್ಲೀಂರಿಗೆ ರಂಜಾನ್, ಕ್ರಿಶ್ಚಿಯನ್ನರಿಗೆ ಕ್ರಿಸ್ ಮಸ್ ಹೀಗೆ ಪ್ರತಿಯೊಂದು ಧರ್ಮಕ್ಕೂ ಒಂದೊಂದು ಹಬ್ಬವಿರುತ್ತದೆ. ಆದರೆ ಇಡೀ ಭಾರತದ ಜನರು ಆಚರಿಸುವಂತಹ ಏಕೈಕ ಹಬ್ಬ (Independence day 2024) ಸ್ವಾತಂತ್ರ ದಿನಾಚರಣೆ, ಗಣರಾಜ್ಯೋತ್ಸವ ಆಗಿದೆ. ಆದರೆ ಈ ರೀತಿಯ ಹಬ್ಬಗಳು ಎಂದರೇ ಕೇವಲ(Independence day 2024) ಸರ್ಕಾರಿ ಅಧಿಕಾರಿಗಳು, ಶಾಲಾ ಕಾಲೇಜುಗಳಿಗೆ ಮಾತ್ರ ಸೀಮಿತ ಎಂಬಂತಾಗಿದೆ. ಇದು ನಮ್ಮ ದೇಶಕ್ಕಾಗಿ ಪ್ರಾಣಕೊಟ್ಟಂತಹ ಮಹನೀಯರಿಗೆ ಮಾಡುವಂತಹ ಅವಮಾನ ಎಂದೇ ಹೇಳಬಹುದಾಗಿದೆ. ಜೊತೆಗೆ (Independence day 2024) ಯಾರಾದರೂ ಒಂದು ಜಾತಿಯ ಬಗ್ಗೆ ಮಾತನಾಡಿದರೇ ಸಾಕು ರಕ್ತಪಾತಗಳೇ ನಡೆಯುತ್ತವೆ. ಅದೇ ದೇಶದ ಬಗ್ಗೆ ಮಾತನಾಡಿದರೂ ಯಾರೂ ತಲೆಗೆಡಿಸಿಕೊಳ್ಳುವುದಿಲ್ಲ. ಕಡಿಮೆ ಜನರು ದೇಶದ ಬಗ್ಗೆ ಯಾರಾದರೂ ಕೆಟ್ಟದಾಗಿ ಮಾತನಾಡಿದರೇ ಪ್ರತಿಕ್ರಿಯೆ ನೀಡುತ್ತಾರೆ. ಇದೆಲ್ಲವನ್ನೂ (Independence day 2024) ಬಿಟ್ಟು ಅಂದರೇ, ಜಾತಿ ಧರ್ಮ ಎಲ್ಲವನ್ನೂ ಬಿಟ್ಟು ನಾವೆಲ್ಲರೂ ಭಾರತೀಯರು ಎಂಬ ಮನೋಭಾವ ಬೆಳೆಸಿಕೊಂಡಾಗ ನಿಜವಾದ ಸ್ವಾತಂತ್ಯ್ರ ದಿನಾಚರಣೆ ಆಚರಿಸಿದಂತಾಗುತ್ತದೆ ಎಂದರು.
ಇನ್ನೂ ಕಾರ್ಯಕ್ರಮಕ್ಕೂ (Independence day 2024) ಮುನ್ನಾ ಪಟ್ಟಣದ ಮುಖ್ಯ ಬೀದಿಯಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಜಾಥ ನಡೆಸಿದರು. ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಪಥಸಂಚಲನ, ಬ್ಯಾಂಡ್ ಸೆಟ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ದೇಶಭಕ್ತಿ ಗೀತೆಗಳಿಗೆ ನೃತ್ಯ ರೂಪಕಗಳನ್ನು ಪ್ರದರ್ಶನ ಮಾಡಿದ್ದು (Independence day 2024) ಕಾರ್ಯಕ್ರಮಕ್ಕೆ ಮತಷ್ಟು ಮೆರಗು ತಂದಿತ್ತು. ಈ ವೇಳೆ ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಹಲವರು ಇದ್ದರು.
ಇನ್ನೂ ಕಾರ್ಯಕ್ರಮದಲ್ಲಿ (Independence day 2024) ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರು ಹಾಜರಿಯಾಗಿದ್ದರು, ಕೇವಲ ಸ್ವಾತಂತ್ಯ್ರ ದಿನಾಚರಣೆ ಮಾತ್ರವಲ್ಲ, ಪ್ರತಿಯೊಂದು ಸರ್ಕಾರಿ ದಿನಾಚರಣೆಗಳಲ್ಲೂ ಅಧಿಕಾರಿಗಳು ಗೈರು ಹಾಜರಿಯಾಗುತ್ತಾರೆ. ಅವರಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಬೇಕು ಎಂದು ಕೆಡಿಪಿ ಸದಸ್ಯ ರಿಯಾಜ್ ಪಾಷ ಆಗ್ರಹಿಸಿದ್ದಾರೆ.