Hyderabad – ಪ್ರೀತಿ ನಿರಾಕರಿಸಿದ ಯುವತಿಯೊಬ್ಬಳ ಮೇಲೆ ನಡು ರಸ್ತೆಯಲ್ಲಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆಘಾತಕಾರಿ ಘಟನೆ ನಡೆದಿದೆ. ತೆಲಂಗಾಣದ ಹೈದರಾಬಾದ್ (Hyderabad) ಹುಜೂರ್ನಗರದಲ್ಲಿ ಒಂದು ಭಯಾನಕ ಘಟನೆ ನಡೆದಿದೆ. ಪ್ರೀತಿಗೆ ನಿರಾಕರಿಸಿದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಹಾಡಹಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಈ ದುರಂತದ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಸಿಕ್ಕಿದ್ದು, ವೈರಲ್ ವೀಡಿಯೋ ಆಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Hyderabad – ಕ್ಯಾಮೆರಾದಲ್ಲಿ ಸೆರೆಯಾದ ಘಟನೆಯ ವಿಡಿಯೋ:
ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ, ಬುರ್ಖಾ ಧರಿಸಿದ ಯುವತಿಯೊಬ್ಬಳ ಮೇಲೆ ಯುವಕ ಪೆಟ್ರೋಲ್ ಸುರಿದ ದೃಶ್ಯಗಳು ಕಂಡುಬಂದಿವೆ. ಆತ ಅಲ್ಲದೆ ತನ್ನ ಮೇಲೂ ಪೆಟ್ರೋಲ್ ಸುರಿಸಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಯತ್ನವನ್ನೂ ಮಾಡಿದ್ದಾನೆ. ಈ ನಡುವೆ, ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಈ ಭಯಾನಕ ಘಟನೆಯನ್ನು ಕಂಡು, ತಕ್ಷಣವೇ ಹಸ್ತಕ್ಷೇಪ ಮಾಡಿ ಯುವಕನಿಗೆ ಕಪಾಳಮೋಕ್ಷ ಮಾಡಿದ್ದಾನೆ. ತನ್ನ ಪ್ರೇಮ ನಿವೇದನೆಯನ್ನು ತಿರಸ್ಕಾರ ಮಾಡಿದ್ದ ಹಿನ್ನೆಲೆಯಲ್ಲಿ ಯುವಕ ಪೆಟ್ರೋ ಸುರಿತು ಸಾರ್ವಜನಿಕವಾಗಿಯೇ ಜೀವಂತವಾಗಿ ಸುಟ್ಟು ಹಾಕುವ ಬೆದರಿಕೆ ಹಾಕಿದ್ದಾನೆ.
Hyderabad – Viral Video ಇಲ್ಲಿದೆ ನೋಡಿ: Click Here
ಯುವಕ ಪೆಟ್ರೋಲ್ ಬಾಟಲಿಯನ್ನು ಹಿಡಿದು ಯುವತಿಯ ಬಳಿ ಬಂದಿದ್ದಾನೆ. ನಡುರಸ್ತೆಯಲ್ಲಿಯೇ ಆಕೆಯ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ದಾರಿಹೋಕರು ಅದನ್ನು ಗಮನಿಸಿದ್ದಾರೆ. ಕೂಡಲೇ ಅಲ್ಲಿದ್ದ ಇಬ್ಬರೂ ಯುವತಿಯರನ್ನೂ ದೂರ ತಳ್ಳಿ ಯುವಕನ ಕಪಾಳಕ್ಕೆ ಬಾರಿಸಿದ್ದಾನೆ. ಇನ್ನೂ ವರದಿಗಳ ಪ್ರಕಾರ ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಹೂಜೂರ್ ನಗರದಲ್ಲಿ 23 ವರ್ಷದ ಈ ಯುವತಿ ತನ್ನ ಚಿಕ್ಕಪ್ಪನೊಂದಿಗೆ ವಾಸವಿದ್ದಾಳೆ. ಇನ್ನೂ ತನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಯುವಕನ ವಿರುದ್ದ ಹೂಜೂರ್ ನಗರ ಪೊಲೀಸರಿಗೆ ಯುವತಿ ದೂರು ನೀಡಿದ್ದಾಳೆ ಎಂದು ತಿಳಿದುಬಂದಿದೆ.