Kerala – ಶಾಲಾ ಕಾಲೇಜುಗಳಲ್ಲಿ Ragging ನಡೆಯುತ್ತಿರುತ್ತದೆ. Ragging ಕಾರಣದಿಂದ ಅನೇಕರು ಕಾಲೇಜು ಬಿಟ್ಟಿರುವುದು ಸೇರಿದಂತೆ ಹಲವು ರೀತಿಯ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಇದೀಗ ಕೇರಳದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಕಿರಿಯ ವಿದ್ಯಾರ್ಥಿಗಳನ್ನು ಮೂರನೇ ವರ್ಷದ ಸೀನಿಯರ್ ವಿದ್ಯಾರ್ಥಿಗಳು ಬೆತ್ತಲೆ ಮಾಡಿ, ಮರ್ಮಾಂಗಕ್ಕೆ ಡಂಬಲ್ಸ್ ನೇತು ಹಾಕಿ ಟಾರ್ಚರ್ ನೀಡಿದ್ದಾರೆ. ಈ ಸಂಬಂಧ ಕಿರುಕುಳ ನೀಡಿದ ಆರೋಪದ ಮೇರೆಗೆ ಪೊಲೀಸರು ಆರೋಪಿ ವಿದ್ಯಾರ್ಥಿಗಳಾದ ಸ್ಯಾಮುಯೆಲ್ ಜಾನ್ಸನ್, ಎನ್ ಎಸ್ ಜೀವಾ, ಕೆಪಿ ರಾಹುಲ್ ರಾಜ್, ರಿಜಿಲ್ ಜಿತ್, ವಿವೇಕ್‌ನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Kerala : ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಘಟನೆ
ಕೇರಳದ ಕೊಟ್ಟಾಯಂನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನ ಕಿರಿಯ ವಿದ್ಯಾರ್ಥಿಗಳನ್ನು ಸೀನಿಯರ್ ವಿದ್ಯಾರ್ಥಿಗಳು ದೈಹಿಕವಾಗಿ ಕಿರುಕುಳ ನೀಡಿದ್ದಾರೆ. ರ್ಯಾಗಿಂಗ್‌ಗೆ ಸಂಬಂಧಿಸಿದಂತೆ ಬಂಧಿತ ವಿದ್ಯಾರ್ಥಿಗಳ ವಿರುದ್ಧ ಕಾಲೇಜಿನ ಮೂವರು ಜೂನಿಯರ್ ನರ್ಸಿಂಗ್ ವಿದ್ಯಾರ್ಥಿಗಳು ದೂರು ಸಲ್ಲಿಸಿದ್ದಾರೆ. ಜೂನಿಯರ್ ಗಳ ಬಟ್ಟೆ ಬಿಚ್ಚಿ ಅವರ ಗುಪ್ತಾಂಗಕ್ಕೆ ಡಂಬ್ ಬೆಲ್ ಕಟ್ಟಿ ಚಿತ್ರ ಹಿಂಸೆ ನೀಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದೆ ಎನ್ನಲಾಗಿದೆ. ವೇಟ್‌ಲಿಫ್ಟಿಂಗ್‌ಗಾಗಿ ಬಳಸಲಾಗುವ ಡಂಬ್ಬೆಲ್ಗಳನ್ನು ಗುಪ್ತಾಂಗಕ್ಕೆ ಕಟ್ಟಿ, ಬೆತ್ತಲೆಯಾಗಿ ನಿಲ್ಲುವಂತೆ ಮಾಡಲಾಗಿದೆ. ನಂತರ ಚಿತ್ರಹಿಂಸೆ ನೀಡಲಾಗಿದೆ ಎಂದು ಸಂತ್ರಸ್ತ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಇನ್ನೂ ಹಿರಿಯ ವಿದ್ಯಾರ್ಥಿಗಳು ಮದ್ಯ ಖರೀದಿ ಮಾಡಲು ತಮ್ಮಿಂದ ಹಣವನ್ನು ಸಹ ಸುಲಿಗೆ ಮಾಡುತ್ತಿದ್ದರು ಎಂದು ಸಂತ್ರಸ್ತ ಕಿರಿಯ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ. ಕಳೆದ ವರ್ಷದ ಡಿಸೆಂಬರ್ ಮಾಹೆಯಿಂದ ಇದೇ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ. ಈ ಕುರಿತು ನಮ್ಮ ಕುಟುಂಬಗಳ ಸದಸ್ಯರಿಗೆ ತಮಗಾದ ಕೆಟ್ಟ ಅನುಭವವನ್ನು ವಿವರಣೆ ನೀಡಿದ್ದು, ಸಂತ್ರಸ್ತ ವಿದ್ಯಾರ್ಥಿಗಳ ಕುಟುಂಬಸ್ಥರು ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದರು. ಬಳಿಕ ಈ ಸಂಬಂಧ ಪ್ರಾಥಮಿಕ ತನಿಖೆ ನಡೆಸಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇನ್ನೂ ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋವನ್ನು ಸಹ ಹಿರಿಯ ವಿದ್ಯಾರ್ಥಿಗಳು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಯಾರಿಗಾದರೂ ಹೇಳಿದ್ರೆ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಸಹ ಹಾಕಿ ಕಿರಿಯ ವಿದ್ಯಾರ್ಥಿಗಳ ಬಾಯಿ ಮುಚ್ಚಿಸಿದ್ದರಂತೆ. ಆದರೆ ಹಿರಿಯ ವಿದ್ಯಾರ್ಥಿಗಳ ಧೀರ್ಘ ಕಾಲದ ಕಿರುಕುಳ ತಾಳಲಾರದೆ ಮೂರು ಮಂದಿ ವಿದ್ಯಾರ್ಥಿಗಳು ಕೊಟ್ಟಾಯಂ ಗಾಂಧಿನಗರ ಪೊಲೀಸರಿಗೆ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ.