Viral : ರೀಲ್ಸ್ ಹುಚ್ಚು: ಕುದುರೆಯಿಂದ ಒದೆ ತಿಂದ ಯುವತಿ, ವೈರಲ್  ಆದ ವಿಡಿಯೋ…!

Viral – ಇತ್ತೀಚೆಗೆ ರೀಲ್ಸ್ (Reels) ಮಾಡುವುದು ಒಂದು ಕ್ರೇಜ್ ಆಗಿಬಿಟ್ಟಿದೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ರೀಲ್ಸ್ ಮಾಡಲು ಮುಂದಾಗುತ್ತಾರೆ. ಅದ್ರಲ್ಲೂ ಕೆಲವರು ಎಲ್ಲಿ ಸಿಕ್ಕರೂ ಅಲ್ಲಿ ರೀಲ್ಸ್ ಮಾಡಿಬಿಡುತ್ತಾರೆ. ಹೀಗೆ ರೀಲ್ಸ್ ಮಾಡುವ ಹುಚ್ಚಿನಲ್ಲಿ ತೊಂದರೆಗೆ ಸಿಲುಕಿದವರ ಕಥೆಗಳನ್ನು ನೀವು ಕೇಳಿರುತ್ತೀರಿ. ಈಗ ಅಂತಹದ್ದೇ ಒಂದು ಘಟನೆ ನಡೆದಿದ್ದು, ಇಲ್ಲೊಬ್ಬಳು ಯುವತಿ ಕುದುರೆಯ ಬಳಿ ರೀಲ್ಸ್ ಮಾಡಲು ಹೋಗಿ ಒದೆ ತಿಂದಿದ್ದಾಳೆ.

A young woman standing near a horse in a grassy field getting unexpectedly kicked while filming an Instagram Reel

Viral – ಕುದುರೆಗೆ ಸಿಟ್ಟು ಬಂತು!

ರೀಲ್ಸ್ ಮಾಡುವುದು ಈಗಿನ ಟ್ರೆಂಡ್. ಆದ್ರೆ, ಈ ಟ್ರೆಂಡ್ ಕೆಲವೊಮ್ಮೆ ಅಪಾಯವನ್ನೂ ತಂದೊಡ್ಡಬಹುದು ಅನ್ನೋದಕ್ಕೆ ಈ ಘಟನೆ ಸಾಕ್ಷಿ. ವಿಡಿಯೋದಲ್ಲಿ ಕಾಣಿಸುವಂತೆ, ಒಂದು ಕುದುರೆ ತನ್ನ ಪಾಡಿಗೆ ಹುಲ್ಲು ಮೇಯುತ್ತಾ ನಿಂತಿತ್ತು. ಈ ಸಮಯದಲ್ಲಿ, ಯುವತಿಯೊಬ್ಬಳು ಅದರ ಪಕ್ಕದಲ್ಲಿ ನಿಂತು ರೀಲ್ಸ್ ಮಾಡಲು ಶುರುಮಾಡಿದ್ದಾಳೆ. ಬಹುಶಃ ಕುದುರೆಗೆ ಇದು ಇಷ್ಟವಾಗಿಲ್ಲ ಅನಿಸುತ್ತೆ, ಇದ್ದಕ್ಕಿದ್ದಂತೆ ಕೋಪಗೊಂಡು ಆ ಯುವತಿಗೆ ಒದೆ ಹಾಕಿದೆ. ಈ ದೃಶ್ಯ ನೋಡಿ ಎಲ್ಲರೂ ಅಚ್ಚರಿಪಟ್ಟಿದ್ದಾರೆ.

 Viral – ವೈರಲ್ ಆದ ವಿಡಿಯೋ: ರೀಲ್ಸ್ ಮಾಡುವಾಗ ಜಾಗ್ರತೆ!

ಈ ವಿಡಿಯೋವನ್ನು ಅವಿಪ್ಸಾ ಖನಲ್ (Avipsa Akhnal) ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ (Instagram Account) ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಯುವತಿ ಕುದುರೆಯ ಪಕ್ಕದಲ್ಲಿ ನಿಂತು ರೀಲ್ಸ್ ಮಾಡುತ್ತಿದ್ದಾಗ, ಕುದುರೆ ಅನಿರೀಕ್ಷಿತವಾಗಿ ಒದೆಯುವುದು ಕಾಣಿಸಿದೆ. Read this also : ಮದ್ಯದ ಅಮಲಿನಲ್ಲಿ ಮಹಿಳೆಯ ರಂಪಾಟ: ಡೆಹ್ರಾಡೂನ್‌ನಲ್ಲಿ ನಡೆದ ಘಟನೆ ವೈರಲ್…!

A young woman standing near a horse in a grassy field getting unexpectedly kicked while filming an Instagram Reel

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ:

 Viral – ಸಾಮಾಜಿಕ ಜಾಲತಾಣಗಳಲ್ಲಿ ನಗೆ ಬುಗ್ಗೆ: ನೆಟ್ಟಿಗರ ಪ್ರತಿಕ್ರಿಯೆಗಳು

ಜೂನ್ 5 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಈಗಾಗಲೇ 20.4 ಮಿಲಿಯನ್ (2.04 ಕೋಟಿ) ವೀಕ್ಷಣೆಗಳನ್ನು ಪಡೆದುಕೊಂಡಿದೆ. ಅಲ್ಲದೆ, ಇದಕ್ಕೆ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ಕೆಲವರು, “ಈ ದೃಶ್ಯ ತುಂಬಾನೇ ಫನ್ನಿಯಾಗಿದೆ” ಅಂದ್ರೆ, ಇನ್ನೂ ಕೆಲವರು, “ಕುದುರೆ ಅಟ್ಯಾಕ್ ಮಾಡಲು ಬಂದಾಗ ಓಡಿ ಹೋಗಬೇಕಿತ್ತು ತಾನೇ” ಎಂದಿದ್ದಾರೆ. ಮತ್ತೊಬ್ಬರು, “ಇದು ತುಂಬಾನೇ ಮಜವಾಗಿದೆ” ಅಂತಾ ಕಾಮೆಂಟ್ ಮಾಡಿದ್ದಾರೆ.

Leave a Comment

Your email address will not be published. Required fields are marked *

Scroll to Top