Viral Video : ಮದ್ಯದ ಅಮಲಿನಲ್ಲಿ ಮಹಿಳೆಯ ರಂಪಾಟ: ಡೆಹ್ರಾಡೂನ್‌ನಲ್ಲಿ ನಡೆದ ಘಟನೆ ವೈರಲ್…!

Viral Video – ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ವೈರಲ್ ಆಗಿದ್ದು, ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು ರಸ್ತೆ ಮಧ್ಯೆ ಕುಳಿತು ರಂಪಾಟ ಮಾಡಿರುವ ಘಟನೆ ಎಲ್ಲರ ಗಮನ ಸೆಳೆದಿದೆ. ಡೆಹ್ರಾಡೂನ್‌ ನ ರಾಯ್‌ಪುರದಲ್ಲಿ ನಡೆದ ಈ ಘಟನೆ ವಾಹನ ಸವಾರರಿಗೆ ತೀವ್ರ ತೊಂದರೆಯುಂಟು ಮಾಡಿದೆ.

Woman in black sleeveless top sitting in the middle of a busy road in Dehradun, causing traffic disruption due to drunken behavior – viral video

Viral Video – ರಸ್ತೆ ಮಧ್ಯೆ ಮಹಿಳೆ ಹೈಡ್ರಾಮಾ!

ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ಕಪ್ಪು ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಡೆನಿಮ್ ಪ್ಯಾಂಟ್ ಧರಿಸಿ ರಸ್ತೆಯ ಮಧ್ಯೆ ಕುಳಿತಿರುವುದು ಕಾಣುತ್ತದೆ. ಸಂಪೂರ್ಣ ಮಧ್ಯದ ಅಮಲಿನಲ್ಲಿ ತೂಗಾಡುತ್ತಿದ್ದ ಅವರು, ತಮ್ಮ ಚಪ್ಪಲಿಯನ್ನು ಸರಿಪಡಿಸಿಕೊಳ್ಳುವ ನೆಪದಲ್ಲಿ ರಸ್ತೆಗೆ ಅಡ್ಡಲಾಗಿ ಕುಳಿತಿದ್ದಾರೆ. ಅವರ ಈ ಅಸಭ್ಯ ವರ್ತನೆಯಿಂದಾಗಿ ಜನನಿಬಿಡ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯುಂಟಾಗಿದೆ.

Read this video : ಕುಡಿದ ಅಮಲಿನಲ್ಲಿ ಮಹಿಳೆಯ ರಾದ್ದಾಂತ, ಹೆದ್ದಾರಿಯಲ್ಲಿ ವಾಹನಗಳನ್ನು ತಡೆದು ಗಲಾಟೆ, ವೈರಲ್ ಆದ ವಿಡಿಯೋ…!

Viral Video –  ಪೊಲೀಸರಿಗೂ ಮಣಿಯದ ಮಹಿಳೆ!

ಪೊಲೀಸರು ಮಹಿಳೆಯನ್ನು ರಸ್ತೆಯಿಂದ ತೆರವುಗೊಳಿಸಲು ಪ್ರಯತ್ನಿಸಿದರೂ, ಅವರು ಅಲ್ಲಿಂದ ಕದಲುವುದಕ್ಕೆ ನಿರಾಕರಿಸಿದ್ದಾರೆ. ಇದರಿಂದಾಗಿ ರಸ್ತೆಯುದ್ದಕ್ಕೂ ವಾಹನಗಳು ನಿಂತು ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಒಂದು ಕಾರು ಮತ್ತು ಹಲವು ದ್ವಿಚಕ್ರ ವಾಹನಗಳು ಮಹಿಳೆ ರಸ್ತೆಯಿಂದ ಸರಿಯುವವರೆಗೂ ಕಾಯಬೇಕಾಯಿತು. ಆಶ್ಚರ್ಯಕರ ಸಂಗತಿ ಎಂದರೆ, ಮಹಿಳೆಗೆ ಸಹಾಯ ಮಾಡಲು ಯಾರೂ ಮುಂದೆ ಬಾರದೆ, ಎಲ್ಲರೂ ನೋಡಿಕೊಂಡು ಹೋದರು.

Woman in black sleeveless top sitting in the middle of a busy road in Dehradun, causing traffic disruption due to drunken behavior – viral video

ವೈರಲ್ ವಿಡಿಯೋ ಇಲ್ಲಿದೆ ನೋಡಿ: Click here 

Viral Video – ಭದ್ರತಾ ಸಿಬ್ಬಂದಿಯಿಂದ ತೆರವು!

ಕೆಲವು ನಿಮಿಷಗಳ ನಂತರ, ಇಬ್ಬರು ಭದ್ರತಾ ಸಿಬ್ಬಂದಿ ಸೇರಿದಂತೆ ಕೆಲವರು ಮಹಿಳೆಯ ಬಳಿ ಹೋಗಿ ಅವರನ್ನು ರಸ್ತೆಯಿಂದ ಹೊರಗೆ ಕರೆತಂದರು. ಇದರಿಂದಾಗಿ ಮತ್ತೆ ವಾಹನ ಸಂಚಾರ ಸುಗಮವಾಯಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಪೊಲೀಸರು ಯಾವುದೇ ಕ್ರಮ ಕೈಗೊಂಡ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ.

Leave a Comment

Your email address will not be published. Required fields are marked *

Scroll to Top