Horror – ಉತ್ತರ ಪ್ರದೇಶದ ಸೀತಾಪುರದಲ್ಲಿ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ತಂದೆಯೋರ್ವ ತನ್ನ 5 ವರ್ಷದ ಮಗಳನ್ನು ಉಸಿರುಗಟ್ಟಿಸಿ ಕೊಂದ ನಂತರ, ಆಕೆಯ ದೇಹವನ್ನು ನಾಲ್ಕು ತುಂಡುಗಳಾಗಿ ಕತ್ತರಿಸಿದ್ದಾನೆ. ಈ ಘಟನೆಯು ಸ್ಥಳೀಯರಲ್ಲಿ ಆಘಾತ ಮತ್ತು ಆಕ್ರೋಷವನ್ನು ಉಂಟುಮಾಡಿದೆ. ಆರೋಪಿಯನ್ನು ಮೋಹಿತ್ ಎಂದು ಗುರುತಿಸಲಾಗಿದ್ದು, ಅವನು ತನ್ನ ಮಗಳು ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕೆ ಕೋಪಗೊಂಡು ಈ ಭೀಕರ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ.

Horror -ಘಟನೆಯ ಹಿನ್ನೆಲೆ:
ಫೆಬ್ರವರಿ 25ರ ಸಂಜೆ, 5 ವರ್ಷದ ತಾನಿ ಎಂಬ ಬಾಲಕಿ ನಾಪತ್ತೆಯಾದಳು. ಅವಳ ಕುಟುಂಬವು ಅವಳನ್ನು ಹುಡುಕಲು ಪ್ರಾರಂಭಿಸಿತು. ಒಂದು ದಿನದ ನಂತರ, ಹೊಲದಲ್ಲಿ ಬಾಲಕಿಯ ಕತ್ತರಿಸಿದ ಕಾಲು ಪತ್ತೆಯಾಯಿತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಆರಂಭದಲ್ಲಿ, ಪೊಲೀಸರು ಇದನ್ನು ಕಾಡು ಪ್ರಾಣಿಯ ದಾಳಿ ಎಂದು ಭಾವಿಸಿದ್ದರು. ಆದರೆ, ಕುಟುಂಬದ ಒತ್ತಾಯದ ನಂತರ, ಪೊಲೀಸರು ವಿಸ್ತೃತ ತನಿಖೆ ಪ್ರಾರಂಭಿಸಿದರು. ಡ್ರೋನ್ ಕ್ಯಾಮರಾ ಮತ್ತು ಇತರ ತಂತ್ರಜ್ಞಾನದ ಸಹಾಯದಿಂದ, ಪೊಲೀಸರು ಫೆಬ್ರವರಿ 27ರಂದು ಮಗುವಿನ ದೇಹದ ಇತರ ಭಾಗಗಳನ್ನು ಪತ್ತೆಹಚ್ಚಿದರು. ಮರಣೋತ್ತರ ಪರೀಕ್ಷೆಯಲ್ಲಿ, ಬಾಲಕಿಯನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ತಿಳಿದುಬಂದಿದೆ.
Horror -ಕೊಲೆ ಮಾಡಿ ಪರಾರಿಯಾಗಿದ್ದ ತಂದೆ
ಇನ್ನೂ ಮಗಳನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ತಂದೆ ತನ್ನ ಮೊಬೈಲ್ ಅನ್ನು ಹೆಂಡತಿಗೆ ಕೊಟ್ಟು ಎಸ್ಕೇಪ್ ಆಗಿದ್ದ. ತನಿಖೆಯಿಂದ ದೂರ ಸರಿದಿದ್ದ. ಆದರೆ, ಪೊಲೀಸರು ಅವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ, ಅವನು ತಾನೇ ತನ್ನ ಮಗಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಮೋಹಿತ್ ತನ್ನ ಮಗಳು ನೆರೆಹೊರೆಯವರೊಂದಿಗೆ ಮಾತನಾಡಿದ್ದಕ್ಕೆ ಕೋಪಗೊಂಡು ಈ ಕ್ರೂರ ಕೃತ್ಯವನ್ನು ಮಾಡಿದ್ದಾನೆ ಎಂದು ಹೇಳಲಾಗಿದೆ. ಅವನು ತನ್ನ ಮಗಳನ್ನು ಬೈಕ್ ಮೇಲೆ ಕೂರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಟ್ಟೆಗಳಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ನಂತರ, ಅವಳ ದೇಹವನ್ನು ಸಾಸಿವೆ ಹೊಲದಲ್ಲಿ ಎಸೆದಿದ್ದಾನೆ ಎಂದು ತನಿಖೆಯ ವೇಳೆ ಬಾಯ್ಬಿಟ್ಟಿದ್ದಾನೆ.
Horror -ಕುಟುಂಬಗಳ ನಡುವಣ ವೈಮನಸ್ಸು ಕೊಲೆಗೆ ಕಾರಣವಾಯ್ತಾ?
ಇನ್ನೂ ಆರೋಪಿ ಮೋಹಿತ್ ಕುಟುಂಬ ಹಾಗೂ ನೆರೆಯ ರಾಮು ಎಂಬುವವರ ಕುಟುಂಬ ಮೊದಲು ತುಂಬಾನೆ ಆತ್ಮೀಯರಾಗಿದ್ದರು. ಮೊದಲಿಗೆ ಎರಡೂ ಕುಟುಂಬಗಳು ಅನ್ಯೋನ್ಯವಾಗಿದ್ದರು. ಆದರೆ ಕೆಲವು ದಿನಗಳ ಹಿಂದೆಯಷ್ಟೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಇದರಿಂದ ಇಬ್ಬರೂ ತಮ್ಮ ಸ್ನೇಹ ಸಂಬಂಧವನ್ನು ಕಡಿದುಕೊಂಡಿದ್ದರಂತೆ. ಆದರೆ ಆರೋಪಿ ಮೋಹಿತ್ ತನ್ನ ಮಗಳಿಗೆ ರಾಮುವಿನ ಮನೆಗೆ ಹೋಗಬೇಡ ಎಂದು ಹೇಳುತ್ತಿದ್ದನಂತೆ. ಆದರೆ ಮಗಳು ಅಲ್ಲಿಗೆ ಹೋಗಿ ಆಟವಾಡುತ್ತಿದ್ದಳಂತೆ. ಹೀಗೆ ಒಂದು ದಿನ ಮಗಳು ರಾಮು ಮನೆಯಿಂದ ಹೊರಬರುತ್ತಿದ್ದನ್ನು ಕಂಡಿದ್ದಾನೆ. ಇದರಿಂದ ಕೋಪಗೊಂಡ ಆರೋಪಿ ತನ್ನ ಬೈಕ್ ಮೇಲೆ ಮಗಳನ್ನು ಕೂರಿಸಿಕೊಂಡು ಹೋಗಿ, ನಿರ್ಜನ ಸ್ಥಳದಲ್ಲಿ ನಿಲ್ಲಿಸಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ತನಿಖೆಯ ವೇಳೆ ತಿಳಿಸಿದ್ದಾನೆ ಎನ್ನಲಾಗಿದೆ.