ದೇಶವಾಸಿಗಳು ದೇಶದ ಪ್ರಮುಖ ಪುಣ್ಯಕ್ಷೇತ್ರಗಳಿಗೆ ರಾಜ್ಯದಿಂದ ಮೊದಲ ಬಾರಿಗೆ ತೆರಳುವಂತಹ ಯಾತ್ರಿಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಯಾತ್ರಾರ್ಥಿಗಳಿಗೆ ನೀಡುತ್ತಿರುವ ಸಹಾಯಧನ ವ್ಯವಸ್ಥೆಯನ್ನು ಸರಳಗೊಳಿಸಿ ಮಾರ್ಗಸೂಚಿ ಹೊರಡಿಸಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳಿಗೆ ನೀಡಲಾಗುವ ಸಹಾಯಧನ ಪಾವತಿಯನ್ನು ಮತ್ತಷ್ಟು ಸರಳೀಕೃತ ಮಾಡುವ ನಿಟ್ಟಿನಿಂದ ರಾಜ್ಯ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ.
ರಾಜ್ಯ ಸರ್ಕಾರವು ಪುಣ್ಯಕ್ಷೇತ್ರಗಳ ಯಾತ್ರಾರ್ಥಿಗಳಿಗೆ ಒಂದು ಶುಭ ಸುದ್ದಿ ನೀಡಿದೆ. ಪುಣ್ಯಕ್ಷೇತ್ರಗಳಿಗೆ ಹೋಗುವ ಯಾತ್ರಾರ್ಥಿಗಳು ಇನ್ನು ಮುಂದೆ ಕಚೇರಿಗಳಿಗೆ ಹೋಗುವ ವ್ಯವಸ್ಥೆಗೆ ಬ್ರೇಕ್ ಬೀಳಲಿದೆ. ಈ ಮೊದಲು ಹೊರಡಿಸಿದ್ದ ಮೂರು ಪ್ರತ್ಯೇಕ ಮಾರ್ಗಸೂಚಿಗಳಲ್ಲಿನ ನ್ಯೂನ್ಯತೆಯನ್ನು ಹೋಗಲಾಡಿಸಿ ಸಬ್ಸಿಡಿ ಬಯಸುವ ಯಾತ್ರಾರ್ಥಿಗಳ ಸಮಸ್ಯೆಯನ್ನು ಕೂಡ ಬಗೆಹರಿಸಲಾಗಿದೆ. ಅರ್ಜಿ ಸಲ್ಲಿಕೆ, ಸಹಾಯಧನ ಪಾವತಿ, ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದ್ದು, ಪಾರದರ್ಶಕ ಹಾಗೂ ಸುಲಭವಾಗಿಸಲು ಆನ್ ಲೈನ್ ವ್ಯವಸ್ಥೆ ಜಾರಿಗೊಳಿಸಲಾಗಿದೆ.
ಇನ್ನೂ ಹೊಸ ವಿಧಾನ ಹೇಗೆ ಎಂಬ ವಿಚಾರಕ್ಕೆ ಬಂದರೇ, ಯಾತ್ರಾರ್ಥಿಗಳು ಮಾಡಬೇಕಿರುವುದು ಸುಲಭದ ಕೆಲಸ. ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಿದೆ.
- ಮೊಬೈಲ್ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡು, ಜಿಯೋಲೊಕೇಶನ್ ಮಾಹಿತಿಯನ್ನು ಪೂರ್ಣಗೊಳಿಸಬೇಕು.
- ಸೆಲ್ಫಿ ಒಳಗೊಂಡಿರುವ ಫೋಟೋವನ್ನು ಅಪ್‌ಲೋಡ್ ಮಾಡಿ
- ಈ ಮೂಲಕ ಯಾತ್ರಾ ಸ್ಥಳದಲ್ಲಿ ಯಾತ್ರಾರ್ಥಿಗಳ ಉಪಸ್ಥಿತಿಯನ್ನು ಖಚಿತಪಡಿಸಬೇಕು
- ಫೋಟೋದಲ್ಲಿ ನಿಮ್ಮ ಹಿಂಭಾಗ ದೇವಾಲಯದ ಪ್ರಮುಖ ಸ್ಥಳವನ್ನು ಕಾಣುವಂತೆ ಅಪ್‌ಲೋಡ್ ಮಾಡಿ
ಇನ್ನೂ ಪ್ರವರ್ಗ ಸಿ ದೇವಾಲಯದ ಅರ್ಚಕರು / ನೌಕರರು ಹಾಗೂ ಅವರ ಕುಟುಂಬದ ಒಬ್ಬರಿಗೆ ಒಟ್ಟು 2400 ರೂ. ನಿಗದಿಪಡಿಸಲಾಗಿದೆ. ವರ್ಷದಲ್ಲಿ ಒಂದು ಬಾರಿ ಉಚಿತ ಕಾಶಿ ಯಾತ್ರೆಗೆ ಅವಕಾಶ ನೀಡಲಾಗಿದೆ. ಚಾರ್ ಧಾಮ್ ಯಾತ್ರೆಗೆ ರೂ. 30,000, ಕೈಲಾಸ ಮಾನಸ ಸರೋವರ ಯಾತ್ರೆಗೆ ರೂ 20,000, ಕಾಶಿ ಯಾತ್ರೆಯಲ್ಲಿ ಗಯಾ ಸೇರಿಸಿ ರೂ.5,000. ರೈಲು ಮೂಲಕ ಯಾತ್ರೆ ಕೈಗೊಳುವ ಯಾತ್ರಾರ್ಥಿಗಳಿಗೆ ರೂ.5000 ದಿಂದ ರೂ 7500 ಕ್ಕೆ ಸಹಾಯಧನ ಹೆಚ್ಚಳ ಮಾಡಲಾಗಿದೆ. ಒಟ್ಟು 30000ಕ್ಕೂ ಹೆಚ್ಚು ಯಾತ್ರಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.