HomeSpecialReels : ರೀಲ್ಸ್ ಮಾಡೋಕೆ ಹೋಗಿ ಎಡವಟ್ಟು ಮಾಡ್ಕೊಂಡ ಯುವತಿ, ರೀಲ್ಸ್ ಮಾಡುತ್ತಾ ಮುಗ್ಗರಿಸಿ ಬಿದ್ದ...

Reels : ರೀಲ್ಸ್ ಮಾಡೋಕೆ ಹೋಗಿ ಎಡವಟ್ಟು ಮಾಡ್ಕೊಂಡ ಯುವತಿ, ರೀಲ್ಸ್ ಮಾಡುತ್ತಾ ಮುಗ್ಗರಿಸಿ ಬಿದ್ದ ಯುವತಿ….!

Reels : ರೀಲ್ಸ್ ಹುಚ್ಚು ಇತ್ತೀಚೆಗೆ ಮಿತಿಮೀರಿದೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಎಲ್ಲರೂ ಮೊಬೈಲ್ ಹಿಡಿದು ರೀಲ್ಸ್ ಮಾಡುತ್ತಲೇ ಇರುತ್ತಾರೆ. ಕೆಲವೊಮ್ಮೆ ಈ ಹವ್ಯಾಸ ಪ್ರಾಣಕ್ಕೆ ಅಪಾಯ ತಂದಿದ್ದುಂಟು. ಈಗ ಅಂಥದ್ದೇ ಒಂದು ತಮಾಷೆಯ ಘಟನೆ ನಡೆದಿದೆ. ಮಳೆ ಬಂದು ಹೋದ ನಂತರ ಆ ಖುಷಿಯಲ್ಲಿ ರೀಲ್ಸ್ ಮಾಡಲು ಹೋದ ಯುವತಿಯೊಬ್ಬಳು ಜಾರಿ ಬಿದ್ದಿದ್ದಾಳೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರಿ ವೈರಲ್ ಆಗಿದೆ.

Indian girl in red saree slips while dancing in wet courtyard while making a viral Instagram Reels

Reels – ವಿಡಿಯೋದಲ್ಲಿ ಏನಿದೆ?

@papakiparimampi ಎಂಬ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ, ಯುವತಿಯೊಬ್ಬಳು ರೀಲ್ಸ್ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾಳೆ. ಮಳೆ ಬಂದು ಅಂಗಳ ಒದ್ದೆಯಾಗಿದ್ದರೂ, ವಾತಾವರಣ ಚೆನ್ನಾಗಿದೆ ಎಂದುಕೊಂಡು ರೀಲ್ಸ್ ಮಾಡಲು ಯತ್ನಿಸಿದ್ದಾಳೆ. ಕೆಂಪು ಸೀರೆ ಧರಿಸಿದ್ದ ಯುವತಿ, ಅಂಗಳದ ಕಡೆ ಓಡಿಹೋಗಿ ಡಾನ್ಸ್ ಮಾಡುವ ಭರದಲ್ಲಿ ಕಾಲು ಜಾರಿ ಬಿದ್ದಿದ್ದಾಳೆ. ಈ ದೃಶ್ಯ ನೋಡುಗರ ನಗುವಿಗೆ ಕಾರಣವಾಗಿದೆ.

ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here

Reels – ನೆಟ್ಟಿಗರ ಪ್ರತಿಕ್ರಿಯೆಗಳು

Indian girl in red saree slips while dancing in wet courtyard while making a viral Instagram Reels

ಈ ವಿಡಿಯೋ ಈಗಾಗಲೇ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ನೆಟ್ಟಿಗರು ಇದಕ್ಕೆ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ: Read this also : ಮರದ ತುದಿಯಲ್ಲಿ ನಿಂತು ಡಾನ್ಸ್ ಮಾಡಿದ ಕಾಶ್ಮೀರಿ ಮಹಿಳೆ, ವೈರಲ್ ಆದ ವಿಡಿಯೋ…!

  • “ಈ ವಿಡಿಯೋ ನೋಡಿದ ಮೇಲೆ ನಗು ನಿಲ್ಲಿಸೋಕೆ ಆಗ್ತಿಲ್ಲ,” ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.
  • “ಅದಕ್ಕೆ ಹೇಳೋದು, ಅತಿಯಾದರೆ ಅಮೃತವೂ ವಿಷ,” ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
  • “ಪ್ರೀತಿಯಲ್ಲಿ ಬೀಳೋದು ಅಂದ್ರೆ ಇದೇ ಅನ್ಸುತ್ತೆ,” ಎಂದು ಇನ್ನೊಬ್ಬರು ಹಾಸ್ಯ ಮಾಡಿದ್ದಾರೆ.
by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular