Reels – ಇಂದಿನ ಡಿಜಿಟಲ್ ಯುಗದಲ್ಲಿ ರೀಲ್ಸ್ (reels) ಮಾಡುವುದು ಯುವಕರಿಗೆ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಲೈಕ್ಸ್ ಮತ್ತು ವೀವ್ಸ್ ಗಾಗಿ ಯುವ ಸಮುದಾಯವು ಎಂತಹ ಸಾಹಸಕ್ಕೂ ಸಿದ್ಧವಿರುವುದನ್ನು ಕಾಣಬಹುದು. ರೀಲ್ಸ್ ಹೆಸರಿನಲ್ಲಿ ಕೆಲವರು ತಮ್ಮ ಜೀವಕ್ಕೂ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಒಂದು ವಿಡಿಯೋದಲ್ಲಿ ಕಾಶ್ಮೀರಿ ಮಹಿಳೆ (Kashmiri women) ಯೊಬ್ಬರು ಮರದ ತುತ್ತ ತುದಿಯಲ್ಲಿ ನಿಂತು ಡಾನ್ಸ್ ಮಾಡಿರುವ ದೃಶ್ಯ ನೆಟ್ಟಿಗರನ್ನು ಬೆರಗಾಗಿಸಿದೆ.
Reels – ಹಿಂದಿ ಹಾಡಿಗೆ ರೀಲ್ಸ್ ಮಾಡಿದ ಮಹಿಳೆ
ಉಷಾ ನಾಗವಂಶಿ ಎಂಬ ಮಹಿಳೆ ತಮ್ಮ @ushanagavamshi31 ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಮರದ ತುದಿಯಲ್ಲಿ ಸಮತೋಲನ ಸಾಧಿಸಿಕೊಂಡು ಬಾಲಿವುಡ್ ನ ಜನಪ್ರಿಯ ಹಾಡು “ಝಲ್ಲಾ ವಲ್ಲಾಹ್” ಗೆ ಸ್ಟೆಪ್ ಹಾಕುತ್ತಿರುವುದನ್ನು ಕಾಣಬಹುದು. ಆಕೆಯ ಹಿಂಬದಿಯಲ್ಲಿ ಕಡಿದಾದ ಇಳಿಜಾರು ಪ್ರದೇಶ ಕಾಣಿಸುತ್ತದೆ. ಸ್ವಲ್ಪವೇ ಬ್ಯಾಲೆನ್ಸ್ ತಪ್ಪಿದರೂ ಆಕೆ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ದರೂ, ಆಕೆಯ ಮುಖದಲ್ಲಿ ಯಾವುದೇ ಭಯವಿಲ್ಲ. ಬದಲಾಗಿ, ಅತ್ಯಂತ ಧೈರ್ಯದಿಂದ ಡಾನ್ಸ್ ಮಾಡಿದ್ದಾಳೆ. Read this also : Reels : ರೀಲ್ಸ್ ಮಾಡುತ್ತಿದ್ದ ಯುವತಿಯ ಕೂದಲು ಎಳೆದಾಡಿದ ಕೋತಿ, ವೈರಲ್ ಆದ ವೀಡಿಯೋ …!
ವೈರಲ್ ವಿಡಿಯೋ ಇಲ್ಲಿದೆ ನೋಡಿ : Click here
ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ
ಈ ವೈರಲ್ ರೀಲ್ಸ್ ವಿಡಿಯೋ ಈಗಾಗಲೇ 23 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಗಳಿಸಿದ್ದು, ನೆಟಿಜನ್ಗಳಿಂದ ವಿವಿಧ ಪ್ರತಿಕ್ರಿಯೆಗಳು ಬಂದಿವೆ. ಕೆಲವರು ಈ ಮಹಿಳೆಯ ಸಾಹಸಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ರೀಲ್ಸ್ ಹುಚ್ಚಿಗೆ ಇಂತಹ ಅಪಾಯಕಾರಿ ಕೆಲಸ ಮಾಡಬೇಡಿ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ಇದು ರೀತಿಯಾದರೆ ಐಫೆಲ್ ಟವರ್ನಂತೆ!” ಎಂದು ಲೇವಡಿ ಮಾಡಿದ್ದಾರೆ. ಮತ್ತೊಬ್ಬರು, “ಈ ವಿಡಿಯೋ ನೋಡುವಾಗ ಎದೆಬಡಿತ ಹೆಚ್ಚಾಗುತ್ತದೆ, ಸ್ವಲ್ಪ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ಖಚಿತ” ಎಂದು ಬರೆದಿದ್ದಾರೆ. ಆದರೆ ಕೆಲವರು ಈ ಮಹಿಳೆಯ ಧೈರ್ಯವನ್ನು ಶ್ಲಾಘಿಸಿದ್ದಾರೆ.
Reels – ರೀಲ್ಸ್‌ಗಾಗಿ ಜೀವದ ಜೊತೆಗೆ ಆಟ ಸರಿಯೇ?
ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುವ ಆಸೆಯಲ್ಲಿ ಯುವಕರು ಇಂತಹ ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿರುವುದು ಇದೇ ಮೊದಲೇನಲ್ಲ. ಕಾಶ್ಮೀರದಂತಹ ಸ್ಥಳಗಳು ಸೌಂದರ್ಯದಿಂದ ಕೂಡಿರುವುದರಿಂದ, ರೀಲ್ಸ್ ತಯಾರಿಕೆಗೆ ಇಂತಹ ಸ್ಥಳಗಳು ಸೂಕ್ತ ಎನಿಸಿಕೊಳ್ಳುತ್ತವೆ. ಆದರೆ, ಇಂತಹ ಸಾಹಸಗಳು ಕೆಲವೊಮ್ಮೆ ದುರಂತಕ್ಕೆ ಕಾರಣವಾಗಬಹುದು ಎಂಬುದನ್ನು ಮರೆಯಬಾರದು.