Viral: ಮಂಗಳಮುಖಿಯಂತೆ ವೇಷ ಧರಿಸಿ ಭಿಕ್ಷಾಟನೆಮಾಡುತ್ತಾ ಸಿಕ್ಕಿಬಿದ್ದು, ಪ್ರಯಾಣಿಕರಿಂದ ಧರ್ಮದೇಟು ತಿಂದ ಯುವಕ….!

ಕೆಲಸ ಮಾಡಲು ದೇಹದಲ್ಲಿ ಶಕ್ತಿಯಿದ್ದರೂ ಸಹ ಅನೇಕರು ಕೆಲಸ ಮಾಡದೇ ಬೇರೆ ಆಯ್ಕೆಗಳನ್ನೆ ಆರಿಸಿಕೊಳ್ಳುತ್ತಾರೆ. ಅದರಲ್ಲೂ ಕೆಲವರಂತೂ ಭಿಕ್ಷಾಟನೆಗೆ ಮುಂದಾಗುತ್ತಾರೆ. ಹಲವು ಯುವಕರು ಅಂಗವಿಕಲರಂತೆ, ಮಂಗಳಮುಖಿಯರಂತೆ ವೇಷ ಧರಿಸಿ ಭಿಕ್ಷೆ ಬೇಡುತ್ತಾ ಸಿಕ್ಕಿಬಿದ್ದಂತಹ ಘಟನೆಗಳನ್ನು ಸಹ ನೋಡಿರುತ್ತೇವೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಯುವಕನೋರ್ವ ಮಂಗಳಮುಖಿಯಂತೆ ವೇಷ ಹಾಕಿಕೊಂಡು ಭಿಕ್ಷಾಟನೆಗೆ ಮುಂದಾಗಿದ್ದಾನೆ. ಆದರೆ ಪ್ರಯಾಣಿಕರ ಕೈಗೆ ಸಿಕ್ಕಿಬಿದ್ದು ಅವರ ಕೈಯಲ್ಲಿ ಸರಿಯಾಗಿಯೇ ಗೂಸ ತಿಂದಿದ್ದಾನೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

fake transgender found in bus 1

ಯುವಕನೋರ್ವ ಮಂಗಳಮುಖಿಯಂತೆ ವೇಷ ಬದಲಿಸಿಕೊಂಡು ಬಸ್ ಒಳಗೆ ಭಿಕ್ಷೆ ಬೇಡಲು ಮುಂದಾಗಿದ್ದಾನೆ. ಈ ಸಮಯದಲ್ಲಿ ಪ್ರಯಾಣಿಕರಿಗೆ ಆ ಯುವಕ ಸಿಕ್ಕಿಬಿದ್ದಿದ್ದಾನೆ. ಕೈ ಕಾಲು ಚೆನ್ನಾಗಿದ್ದರೂ, ಮೈ ಬಗ್ಗಿಸಿ ದುಡಿದು ಬದುಕುವ ಬದಲು ಈ ರೀತಿಯಲ್ಲಿ ಭಿಕ್ಷಾಟನೆ ಮಾಡುತ್ತೀಯಾ ಎಂದು ಬಸ್ ನಲ್ಲಿದ್ದ ಪ್ರಯಾಣಿಕರು ಯುವಕನಿಗೆ ಸರಿಯಾಗಿಯೇ ಗೂಸ ಕೊಟ್ಟು ಬಸ್ ನಿಂದ ಹೊರ ಹಾಕಿದ್ದಾರೆ. ಈ ಸಂಬಂಧ gharkekalesh ಹೆಸರಿನ ಎಕ್ಸ್‌ (ಟ್ವಿಟರ್‍) ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮಂಗಳ ಮುಖಿಯಂತೆ ವೇಷ ಹಾಕಿಕೊಂಡ ಬಸ್ ನಲ್ಲಿ ಭಿಕ್ಷೆ ಬೇಡಲು ಬಂದಾಗ ಸಿಕ್ಕಿಬಿದ್ದ ಯುವಕ ಎಂಬ ಟೈಟಲ್ ಬರೆದು ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ : Click here

ಇನ್ನೂ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬನಿಗೆ ಬಸ್ಸಿನೊಳಗೆ ಪ್ರಯಾಣಿಕರು ಹಿಗ್ಗಾಮುಗ್ಗಾ ಥಳಿಸುತ್ತಿರುವ ದೃಶ್ಯವನ್ನು ಕಾಣಬಹುದು. ಯುವಕನೊಬ್ಬ ಮಂಗಳಮುಖಿಯಂತೆ ವೇಷ ತೊಟ್ಟು ಬಸ್ಸಿನೊಳಗೆ ಭಿಕ್ಷೆ ಬೇಡಲು ಬಂದ ಸಂದರ್ಭದಲ್ಲಿ ಆತನ ಬಣ್ಣ ಬಯಲಾಗಿದೆ. ಮೈ ಬಗ್ಗಿಸಿ ದುಡಿಯುವ ಬದಲು ಈ ರೀತಿ ಸುಳ್ಳು ಹೇಳಿ ಭಿಕ್ಷಾಟನೆ ಮಾಡ್ತಿಯಾ ಮಗ್ನೇ ಎಂದು ಬಸ್ಸಿನಲ್ಲಿದ್ದ ಎಲ್ಲಾ ಪ್ರಯಾಣಿಕರು ಆತನಿಗೆ ಧರ್ಮದೇಟು ನೀಡಿ ಕೊನೆಗೆ ಬಸ್ಸಿನಿಂದ ಒದ್ದು ಹೊರ ಹಾಕಿದ್ದಾರೆ. ಈ ವಿಡಿಯೋ ಕಳೆದ ಸೆ.26 ರಂದು ಹಂಚಿಕೊಂಡಿದ್ದು, ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳು ಹರಿದಾಡುತ್ತಿವೆ.

Leave a Comment

Your email address will not be published. Required fields are marked *

Scroll to Top