ಇಂದಿನ ಕಾಲದಲ್ಲಿ ಎಷ್ಟು ಬೇಗ ಪ್ರೀತಿ ಹುಟ್ಟುತ್ತೋ ಅಷ್ಟೇ ಬೇಗ ಬ್ರೇಕಪ್ ಸಹ ಆಗುತ್ತಿರುತ್ತದೆ. ಬೆಳಿಗ್ಗೆ ಪ್ರಪೋಸ್, ಮದ್ಯಾಹ್ನ ಶಿಕಾರು ಸಂಜೆ ವೇಳೆಗೆ ಬ್ರೇಕಪ್ ಹೀಗೆ ಶೀಘ್ರವಾಗಿ ಬ್ರೇಕಪ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಆದರೆ ಇಲ್ಲೊಂದು ಕ್ರೈಂ ಥ್ರಿಲ್ಲರ್ ಲವ್ ಸ್ಟೋರಿ ನಡೆದಿದೆ ಎನ್ನಬಹುದು. ಬ್ರೇಕಪ್ ಮಾಡಿಕೊಳ್ಳಲು (Love Breakup) ತನ್ನ ಪ್ರಿಯಕರನ ಮೇಲೆ ರಾಬರಿ ಮಾಡಿಸಿದ್ದ ಸಾಫ್ಟ್‌ವೇರ್ ಯುವತಿ ಸೇರಿ ಐವರು ಆರೋಪಿಗಳನ್ನು ಬೆಂಗಳೂರಿನ ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಬೆಂಗಳೂರಿನಲ್ಲಿ ಕೆಲಸ ಮಾಡುವ ಟೆಕ್ಕಿ ಶ್ರುತಿ ಸೇರಿ ಆರೋಪಿಗಳಾದ ಸುರೇಶ್ ಅಂಡ್ ಗ್ಯಾಂಗ್ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ವಂಶಿಕೃಷ್ಣ ಒಡಿಶಾ ಮೂಲದವನಾಗಿದ್ದು ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಶ್ರುತಿ ಹಾಗೂ ವಂಶಿಕೃಷ್ಣ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಸರ್ಜಾಪುರದ ಐಟಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. (Love Breakup) ಈ ವೇಳೆ ಇಬ್ಬರ ಮಧ್ಯೆ ಪರಿಚಯ ಬೆಳೆದು, ಪರಿಚಯ ಸ್ನೇಹವಾಗಿ ತಿರುಗಿ, ಸ್ನೇಹ ಪ್ರೀತಿಯಾಗಿ ಮಾರ್ಪಟ್ಟಿತ್ತು. ಮದುವೆಗಾಗಿ ಈ ಪ್ರೀತಿಯನ್ನು ಯುವಕ ಎರಡು ಮನೆಯವರಿಗೆ ಹೇಳಿದ್ದ. ಇನ್ನೇನು ಮದುವೆ ದಿನಾಂಕ ಗೊತ್ತು ಮಾಡಬೇಕು ಅಷ್ಟರಲ್ಲೇ ಪ್ರೀತಿ ಬ್ರೇಕ್ ಅಪ್ (Love Breakup) ಆಗಿದೆ. ಈ ಬ್ರೇಕಪ್ ಗಾಗಿಯೇ ಯುವತಿ ಖತರ್ನಾಕ್ ಪ್ಲಾನ್ ಮಾಡಿದ್ದಾಳೆ.

ಕೆಲವು ವರ್ಷಗಳಿಂದ ವಂಶಿಕೃಷ್ಣ ಹಾಗೂ ಶ್ರುತಿ ಪರಸ್ಪರ ಪ್ರೀತಿಸಿಕೊಳ್ಳುತ್ತಿದ್ದರು. ಆದರೆ ಶ್ರುತಿಯ ಹೇಳೆ ಲವ್ ಸ್ಟೋರಿಯ ಹಿನ್ನೆಲೆಯಲ್ಲಿ ಇಬ್ಬರ ನಡುವೆ ಬ್ರೇಕಪ್ ಆಗಿತ್ತು. (Love Breakup) ಬ್ರೇಕಪ್ ಮಾಡಿಕೊಳ್ಳುವುದಕ್ಕೂ ಮುನ್ನಾ ಮೊಬೈಲ್ ನಲ್ಲಿರುವ ಪೊಟೋಗಳನ್ನು ಡಿಲೀಟ್ ಮಾಡಿಸಲು ಟೆಕ್ಕಿ ಶ್ರುತಿ ಖತರ್ನಾಕ್ ಪ್ಲಾನ್ ಮಾಡಿದ್ದಳು. (Love Breakup) ಯುವತಿ ತನ್ನ ಸ್ನೇಹಿತರ ಜೊತೆ ಸೇರಿಕೊಂಡು ಮೊಬೈಲ್ ಕಸಿಯುವ ಪ್ಲಾನ್ ಮಾಡಿದ್ದರು. ಅದರಂತೆ ಕೆಲವು ದಿನಗಳ ಹಿಂದೆ ಇಬ್ಬರೂ ಬೋಗನಹಳ್ಳಿ ಕಡೆಗೆ ಬೈಕ್ ನಲ್ಲಿ ಹೋಗುತ್ತಿದ್ದರು. ಈ ಸಮಯದಲ್ಲಿ ಎದುರಿನಲ್ಲಿ ಬಂದ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಾರಿನಿಂದ ಇಳಿದ ನಾಲ್ವರು ಯುವಕರು ಏಕಾಏಕಿ ವಂಶಿಕೃಷ್ಣ ಮೇಲೆ ಹಲ್ಲೆ ಮಾಡಿದ್ದಾರೆ. ವಂಶಿಕೃಷ್ಣ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಿದ್ದರು.
ಈ ಸಮಯದಲ್ಲಿ ಯುವತಿ ಮೊಬೈಲ್ ಅಷ್ಟೆ ತಾನೆ ಹೋದರೇ ಹೋಗಲಿ ಬಾ ಅಂತಾ ವಂಶಿಕೃಷ್ಣನನ್ನು ಅಲ್ಲಿಂದ ಕರೆದುಕೊಂಡು ಹೋಗಿದ್ದಳು. ಆದರೆ ವಂಶಿಕೃಷ್ಣ ಮಾತ್ರ ಬೆಳ್ಳಂದೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುರೇಶ್, ಮನೋಜ್, ವೆಂಕಟೇಶ್ ಹಾಗೂ ಹೊನ್ನಪ್ಪ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ಯುವತಿಯ ಖತರ್ನಾಕ್ ಪ್ಲಾನ್ (Love Breakup) ಹೊರಬಂದಿದೆ. ಬಳಿಕ ಯುವತಿಯನ್ನು ವಿಚಾರಿಸಿದಾಗ ಯುವಕನ ಮೊಬೈಲ್ ನಲ್ಲಿದ್ದ ಪೊಟೋಗಳನ್ನು ಡಿಲೀಟ್ ಮಾಡಲು ಈ ಪ್ಲಾನ್ ಮಾಡಿದ್ವಿ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನೂ ವಂಶಿಕೃಷ್ಣ ತನ್ನ ಪ್ರೇಯಸಿಯ ಪ್ಲಾನ್ ಕೇಳಿ ದಂಗಾಗಿದ್ದಾನೆ ಎನ್ನಲಾಗಿದೆ.