Dr Sudhakar – ಕಳೆದೆರಡು ದಿನಗಳಿಂದ ಚಿಕ್ಕಬಳ್ಳಾಪುರದಲ್ಲಿ ಸಂದೀಪ್ ರೆಡ್ಡಿ ಹಾಗೂ ಸಂಸದ ಡಾ.ಕೆ.ಸುಧಾಕರ್ ನಡುವೆ ವಾಕ್ಸಮರ ಜೋರಾಗಿದೆ. ಚಿಕ್ಕಬಳ್ಳಾಪುರದ ಬಿಜೆಪಿ ಜಿಲ್ಲಾಧ್ಯಕ್ಷರನ್ನಾಗಿ ಸಂದೀಪ್ ರೆಡ್ಡಿ ಆಯ್ಕೆ ವಿರುದ್ದ ಸಂಸದ ಡಾ.ಕೆ.ಸುಧಾಕರ್ ವಿರೋಧಿಸಿದ್ದರು. ನಂತರ ಈ ನೇಮಕಾತಿಗೆ ತಡೆ ತರುವಲ್ಲಿಯೂ ಯಶಸ್ವಿಯಾಗಿದ್ದರು. ಬಳಿಕ ಸಂದೀಪ್ ರೆಡ್ಡಿ ಪತ್ರಿಕಾಗೋಷ್ಟಿ ಕರೆದು, ಏಕವಚನದಲ್ಲಿ ಸಂಬೋಧಿಸಿ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಡಾ.ಕೆ.ಸುಧಾಕರ್ ತಮ್ಮ ವಿರುದ್ದ ಮಾಡಿದ ಆರೋಪಗಳನ್ನು ಸಾಬೀತು ಮಾಡಿದರೇ ರಾಜಕೀಯಕ್ಕೆ ಗುಡ್ ಬೈ ಹೇಳುತ್ತೇನೆ ಎಂದು ಸವಾಲು ಹಾಕಿದ್ದಾರೆ.

ಚಿಕ್ಕಬಳ್ಳಾಪುರದ ಬಿಜೆಪಿ ನಾಯಕ ಸಂದೀಪ್ ರೆಡ್ಡಿ ಕಳೆದೆರಡು ದಿನಗಳ ಹಿಂದೆ ನಡೆಸಿದ ಸುದ್ದಿಗೋಷ್ಟಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ವಿರುದ್ದ ಕೆಲವೊಂದು ಆರೋಪಗಳನ್ನು ಮಾಡಿದ್ದರು. ಕೋವಿಡ್ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಸಂಬಂಧ ಡಾ.ಕೆ.ಸುಧಾಕರ್ ರಿಯಾಕ್ಟ್ ಆಗಿದ್ದು, ಕೋವಿಡ್ ಹಣ ಅಕ್ರಮದ ಆರೋಪ ಸಾಬೀತು ಮಾಡಲಿ ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಸಂಸದ ಡಾ.ಕೆ.ಸುಧಾರಕ್ ಕೋವಿಡ್ ಸಮಯದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ್ದಾಗಿ ಆರೋಪ ಮಾಡಿದ್ದಾರೆ. ಈ ಆರೋಪ ಸಾಬೀತು ಮಾಡಲಿ, ಆರೋಪ ಸಾಬೀತು ಮಾಡಿದರೇ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಕೌಂಟರ್ ಕೊಟ್ಟಿದ್ದಾರೆ. ತಮ್ಮ ಬಳಿ ದಾಖಲೆಗಳು ಇರುವುದಾಗಿ ಅವುಗಳನ್ನು ನ್ಯಾ.ಮೈಕಲ್ ಕುನ್ನಾರವರಿಗೆ ಕೊಡುವುದಾಗಿ ಹೇಳಿದ್ದೀರಿ. ಅವರಿಗೂ ಕೊಡಿ, ಲೋಕಾಯುಕ್ತ ಹಾಗೂ ಇ.ಡಿ. ಗೆ ನನ್ನ ವಿರುದ್ದ ದೂರು ನೀಡಿ. 6 ತಿಂಗಳೊಳಗೆ ಆರೋಪ ಸಾಬೀತು ಮಾಡಿ ಎಂದು ಸಂದೀಪ್ ರೆಡ್ಡಿಗೆ ಸವಾಲೆಸೆದಿದ್ದಾರೆ.
ಇನ್ನೂ ನನ್ನ ವಿರುದ್ದ ಮಾಡಿರುವಂತಹ ಆರೋಪಗಳನ್ನು ಸಾಬೀತು ಮಾಡಿದರೇ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಒಂದು ವೇಳೆ ಆರೋಪಗಳನ್ನು ಸಾಬೀತು ಮಾಡದೇ ಇದ್ದರೇ ಬಹಿರಂಗವಾಗಿ ಬೇಷರತ್ ಕ್ಷಮೆ ಕೇಳಬೇಕು. ಸೌಜನ್ಯ, ಮನುಷ್ಯತ್ವ, ಪಟೇಲ್ ತನ ಅವರಲ್ಲಿದ್ದರೇ ಕ್ಷಮೆ ಕೇಳಬೇಕು ಎಂದು ಸವಾಲು ಹಾಕಿದ್ದಾರೆ. ಎರಡು ದಿನಗಳ ಹಿಂದೆಯಷ್ಟೆ ಸುದ್ದಿಗೋಷ್ಟಿಯಲ್ಲಿ ಸಂದೀಪ್ ರೆಡ್ಡಿ ಸುಧಾಕರ್ ವಿರುದ್ದ ಗುಡುಗಿದ್ದರು. ಏಕವಚನದಲ್ಲಿಯೇ ಹಲವು ಆರೋಪಗಳನ್ನು ಮಾಡಿದ್ದರು. ಇದೀಗ ಈ ಎಲ್ಲಾ ಆರೋಪಗಳಿಗೆ ಸಂಸದ ಡಾ.ಕೆ.ಸುಧಾಕರ್ ರವರು ಇದೀಗ ಕೌಂಟರ್ ಕೊಟ್ಟಿದ್ದಾರೆ.