Viral News – ತನ್ನ ಪತಿ ಕುಡಿತಕ್ಕೆ ದಾಸನಾಗಿದ್ದ, ಅತಿಯಾದ ಕುಡಿತದ ಚಟದೊಂದಿಗೆ ಮೈತುಂಬಾ ಸಾಲ ಮಾಡಿಕೊಂಡಿದ್ದ. ಇದರಿಂದ ಪ್ರತಿನಿತ್ಯ ಪತ್ನಿ ನೋವು ಅನುಭವಿಸುತ್ತಿದ್ದಳು. ಇತ್ತ ಸಾಲ ವಸೂಲಾತಿಗೆ ಬರುತ್ತಿದ್ದ ಯುವಕನನ್ನೆ ಆ ಮಹಿಳೆ ಪ್ರೀತಿಸಿ ಮದುವೆಯಾಗಿದ್ದಾಳೆ. ಮೊದಲಿಗೆ ರಿಕವರಿ ಬಾಯ್ ಹಾಗೂ ಗೃಹಿಣಿಯ ನಡುವೆ ರಹಸ್ಯ ಸಂಬಂಧ ಬೆಳೆದಿದ್ದು, ಬಳಿಕ ಇಬ್ಬರೂ ಮದುವೆಯಾಗಿದ್ದಾರೆ. ಈ ಘಟನೆ ಬಿಹಾರದ ಜಮುಯಿ ಜಿಲ್ಲೆಯಲ್ಲಿ ನಡೆದಿದ್ದು, ಈ ಘಟನೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಬಿಹಾರದ ಜಮುಯಿ ಜಿಲ್ಲೆಯ ಇಂದ್ರಕುಮಾರಿ ಎಂಬ ಯುವತಿಗೆ ಕಳೆದ 2022 ರಲ್ಲಿ ನಕುಲ್ ಶರ್ಮಾ ಎಂಬ ಯುವಕನ ಜೊತೆ ಮದುವೆಯಾಗಿತ್ತು. ಆದರೆ ನಕುಲ್ ತುಂಬಾ ಕುಡಿಯುತ್ತಿದ್ದ, ಜೊತೆಗೆ ಪ್ರತಿನಿತ್ಯ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದ. ಮಾನಸಿಕ ಹಾಗೂ ದೈಹಿಕವಾಗಿಯೂ ಪತ್ನಿಯ ಮೇಲೆ ದೌರ್ಜನ್ಯವೆಸಗುತ್ತಿದ್ದ. ಈ ನಡುವೆ ಇಂದ್ರಕುಮಾರಿಗೆ ಲೋನ್ ರಿಕವರಿ ಏಜೆಂಟ್ ಪವನ್ ಕುಮಾರ್ ಎಂಬಾತನ ಪರಿಚಯವಾಗಿದೆ. ಈ ಪವನ್ ಕುಮಾರ್ ಇಂದ್ರಕುಮಾರಿಯ ಮನೆಗೂ ಹಣವನ್ನು ವಸೂಲಿ ಮಾಡಲು ಬರುತ್ತಿದ್ದ. ಈ ಸಮಯದಲ್ಲೇ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ. ನಂತರ ಆಗಾಗ ಇಬ್ಬರೂ ಭೇಟಿಯಾಗುತ್ತಿದ್ದರು. ಮೊದಲಿಗೆ ಸ್ನೇಹಿತರಾದ ಅವರಿಬ್ಬರು ನಂತರ ಪ್ರೇಮಿಗಳಾಗಿ ಬದಲಾಗಿದ್ದಾರೆ.
ಇನ್ನೂ ಆರಂಭದಲ್ಲಿ ತಮ್ಮ ಸಂಬಂಧವನ್ನು ಗೌಪ್ಯವಾಗಿಯೇ ಇರಿಸಿಕೊಂಡಿದ್ದರು. ನಂತರ ಪಶ್ಚಿಮ ಬಂಗಾಳದ ಅಸಾಮೋಲ್ ಗೆ ತೆರಳಿ ಕೆಲಸ ಸಮಯ ಒಟ್ಟಿಗೆ ಕಳೆಯುತ್ತಿದ್ದರು. ಕೆಲವು ದಿನಗಳ ಕಾಲ ಅಲ್ಲಿಯೇ ಇದ್ದ ಈ ಜೋಡಿ ಜಮುಯಿಗೆ ಬಂದಿದೆ. ಫೆ.11 ರಂದು ದೇವಾಲಯವೊಂದರಲ್ಲಿ ಇಬ್ಬರ ವಿವಾಹ ನಡೆದಿದೆ. ಈ ಮದುವೆಯ ಕಾರ್ಯಕ್ರಮ್ಕಕೆ ಹಲವು ಆಗಮಿಸಿದ್ದರು. ಇನ್ನೂ ಪವನ್ ಕುಮಾರ್ ರವರ ಕುಟುಂಬಸ್ಥರು ಈ ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಇಂದ್ರಕುಮಾರಿ ರವರ ಕುಟುಂಬ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಸಂಬಂಧ ಪವನ್ ಕುಮಾರ್ ಯಾದವ್ ವಿರುದ್ದ ಇಂದ್ರಕುಮಾರಿ ಕಡೆಯವರು ಪ್ರಕರಣ ದಾಖಲು ಮಾಡಿದ್ದಾರೆ. ಕುಟುಂಬದವರ ಪ್ರಕಾರ, ಇಂದ್ರಾ ಅಪಹರಣಕ್ಕೆ ಒಳಗಾಗಿದ್ದಾಳೆ ಎಂದು ಹೇಳಿದ್ದಾರೆ. ಆದರೆ, ಇಂದ್ರಾ ತಾನು ಸಂಪೂರ್ಣವಾಗಿ ಸ್ವಂತ ಇಚ್ಛೆಯಿಂದ ಪವನನನ್ನು ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಇಂದ್ರಾ ಮತ್ತು ಪವನ ತಮ್ಮ ಪ್ರಾಣ ಭಯದಿಂದ ಪೊಲೀಸರ ರಕ್ಷಣೆ ಕೋರುತ್ತಿದ್ದಾರೆ. ಸದ್ಯ ಈ ಮದುವೆಯ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.