Cyber Crime – ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ, ವಿಡಿಯೋ ಹಂಚಿಕೊಳ್ಳೋದು ಎಷ್ಟರ ಮಟ್ಟಿಗೆ ಸುರಕ್ಷಿತ? ಈ ಪ್ರಶ್ನೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಮಾಧ್ಯಮಗಳ ಬಗ್ಗೆ ಪೊಲೀಸರು ಮತ್ತು ಸೈಬರ್ ತಜ್ಞರು ಎಷ್ಟೇ ಜಾಗೃತಿ ಮೂಡಿಸಿದರೂ, ಜನರು ಎಚ್ಚರಿಕೆ ವಹಿಸದಿರುವುದರಿಂದ ಸೈಬರ್ ಅಪರಾಧಿಗಳು ಸುಲಭವಾಗಿ ನಮ್ಮ ಖಾಸಗಿ ಮಾಹಿತಿಗಳನ್ನು ಕದಿಯುತ್ತಾರೆ. ಇದರಿಂದ ಬೆದರಿಕೆ ಮತ್ತು ಬ್ಲ್ಯಾಕ್‌ಮೇಲ್‌ಗಳಿಗೆ ಹೆದರಿ ಅನೇಕ ಮಹಿಳೆಯರು, ಯುವತಿಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.

Cyber Crime – ವಿಶಾಖಪಟ್ಟಣಂನಲ್ಲಿ ನಡೆದ ಘಟನೆ
ಇತ್ತೀಚೆಗೆ ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದ ಘಟನೆ ಇದಕ್ಕೆ ಒಂದು ಉತ್ತಮ ಉದಾಹರಣೆ. ಯುವತಿ ಒಬ್ಬಳು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋ ಮತ್ತು ಸ್ಟೋರಿಗಳನ್ನು ಹಾಕುತ್ತಿದ್ದರು. ಆದರೆ ಒಂದು ದಿನ, ಅವರಿಗೆ ಒಂದು ಮೆಸೇಜ್ ಬಂತು. ಆ ಮೆಸೇಜ್ ನೋಡಿದ ತಕ್ಷಣ ಆಕೆ ಹೃದಯವೇ ನಿಂತು ಹೋದಂತೆ ಭಾಸವಾಯಿತು. ಯಾಕಂದ್ರೆ ಆ ಮೆಸೇಜ್‌ನಲ್ಲಿ ಅವರ ಅಶ್ಲೀಲ ಫೋಟೋ ಇತ್ತು!
Cyber Crime – ಬ್ಲ್ಯಾಕ್‌ಮೇಲ್ ಬೆದರಿಕೆ: ಯುವತಿಗೆ ಸೈಬರ್ ವಂಚಕರ ಬಲೆ
ನಕಲಿ ಫೋಟೋ ನೋಡಿ ದಂಗಾಗಿ ಹೋದ ಯುವತಿಗೆ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಅಷ್ಟರಲ್ಲಿ ಮತ್ತೊಂದು ಮೆಸೇಜ್ ಬಂತು. “ನಾವು ಹೇಳಿದಂತೆ ಕೇಳದೆ ಹೋದ್ರೆ, ಈ ಫೋಟೋಗಳನ್ನು ಎಲ್ಲರಿಗೂ ಶೇರ್ ಮಾಡುತ್ತೇವೆ” ಎಂದು ಬೆದರಿಕೆ ಹಾಕಲಾಗಿತ್ತು. ಆಕೆಗೆ ಮೆಸೇಜ್ ಕಳುಹಿಸಿದ ಖಾತೆಯನ್ನು ಪರಿಶೀಲಿಸಿದಾಗ, ಅದು ನಕಲಿ ಖಾತೆ ಎಂದು ತಿಳಿದುಬಂತು. ನಕಲಿ ಇನ್‌ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಯುವತಿಯ ಫೋಟೋಗಳನ್ನು ಮಾರ್ಫ್ ಮಾಡಿ, ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿದು ಆಕೆ ಮತ್ತಷ್ಟು ಕಂಗಾಲಾದರು. ಈ ಬಗ್ಗೆ ಧೈರ್ಯ ಮಾಡಿ ವಿಶಾಖಪಟ್ಟಣಂನ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದರು.
Cyber Crime – ಪೊಲೀಸರ ಕಾರ್ಯಾಚರಣೆ: ಬಂಧನ
ದೂರು ದಾಖಲಿಸಿಕೊಂಡ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದರು. ತಂತ್ರಜ್ಞಾನದ ಸಹಾಯದಿಂದ, ಸೈಬರ್ ಕ್ರೈಮ್ ಪೊಲೀಸರು ಇನ್‌ಸ್ಟಾಗ್ರಾಮ್‌ನಿಂದ ಯುವತಿಯ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಆನ್‌ಲೈನ್ ಅಪ್ಲಿಕೇಶನ್‌ಗಳ ಮೂಲಕ ಫೋಟೋಗಳನ್ನು ಅಶ್ಲೀಲವಾಗಿ ಮಾರ್ಫ್ ಮಾಡಿರುವುದು ಕಂಡುಬಂದಿದೆ. ಪೊಲೀಸರ ತನಿಖೆ ನಂತರ ಆರೋಪಿ ನಂದ್ಯಾಲ ಜಿಲ್ಲೆಯ ಗುರುನಾಥ್ ಎಂದು ಗುರುತಿಸಲಾಗಿದೆ. ಈ ಬಗ್ಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Cyber Crime – ಸೈಬರ್ ಅಪರಾಧಗಳಿಂದ ಸುರಕ್ಷಿತವಾಗಿರಿ: ಪೊಲೀಸರ ಸಲಹೆಗಳು
- ಅಪರಿಚಿತರಿಗೆ ಜಾಗೃತವಾಗಿರಿ: ಸಾಮಾಜಿಕ ಮಾಧ್ಯಮಗಳಲ್ಲಿ ಅಪರಿಚಿತರ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಒಪ್ಪಿಕೊಳ್ಳಬೇಡಿ.
- ಖಾತೆಯನ್ನು ಖಾಸಗಿಯಾಗಿಡಿ (Private): ನಿಮ್ಮ ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಮತ್ತು ಇತರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ‘ಪ್ರೈವೇಟ್’ ಆಗಿ ಇರಿಸಿ. ಇದರಿಂದ ನಿಮ್ಮ ಪೋಸ್ಟ್‌ಗಳನ್ನು ನಿಮ್ಮ ಫಾಲೋವರ್‌ಗಳು ಮಾತ್ರ ನೋಡಲು ಸಾಧ್ಯವಾಗುತ್ತದೆ. Read this also : Cyber Fraud : ಎಚ್ಚರ! ಹೊಸ ರೀತಿಯ ಸೈಬರ್ ವಂಚನೆ: OTP ಇಲ್ಲದೆ ಖಾತೆ ಖಾಲಿ….!
- ನಕಲಿ ಲಿಂಕ್ಗಳ ಬಗ್ಗೆ ಜಾಗರೂಕರಾಗಿರಿ: ಅಪರಿಚಿತರಿಂದ ಬರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಸೈಬರ್ ಅಪರಾಧಗಳ ಕುರಿತು ದೂರು ನೀಡಲು, www.cybercrime.gov.in ಪೋರ್ಟಲ್‌ಗೆ ಭೇಟಿ ನೀಡಿ ಅಥವಾ 1930 ಟೋಲ್-ಫ್ರೀ ಸಂಖ್ಯೆಗೆ ಕರೆ ಮಾಡಿ. ಹೆಚ್ಚಿನ ಮಾಹಿತಿಗಾಗಿ, ಪೊಲೀಸ್ ಆಯುಕ್ತರ ಕಚೇರಿ ಸಂಖ್ಯೆ 7995095799 ಗೆ ಸಂಪರ್ಕಿಸಬಹುದು.
