Saturday, July 5, 2025
HomeNationalCrime News: ಲೋ ವಯಸ್ಸಾಯ್ತು, ಯಾವಾಗ ಮದುವೆ ಆಗ್ತೀಯಾ ಅಂತ ರೇಗಿಸಿದ ಅತ್ತಿಗೆಯನ್ನೇ ಕೊಂದ ಭೂಪ…!

Crime News: ಲೋ ವಯಸ್ಸಾಯ್ತು, ಯಾವಾಗ ಮದುವೆ ಆಗ್ತೀಯಾ ಅಂತ ರೇಗಿಸಿದ ಅತ್ತಿಗೆಯನ್ನೇ ಕೊಂದ ಭೂಪ…!

ಇತ್ತೀಚಿಗೆ ಕೆಲವೊಂದು ಘಟನೆಗಳಲ್ಲಿ ಕ್ಷುಲ್ಲಕ ಕಾರಣಗಳಿಂದ ಕೊಲೆಯಂತಹ ಘಟನೆಗಳು ನಡೆದಿರುತ್ತವೆ. ಅಂತಹ ಕಾರಣಗಳಿಗೂ ಕೊಲೆಗಳು ನಡೆಯುತ್ತಾ ಎಂಬ ಪ್ರಶ್ನೆಯೂ ಉದ್ಬವಿಸುತ್ತದೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಅತ್ತಿಗೆಯೊಬ್ಬರು ಲೋ ವಯಸ್ಸಾಯ್ತು, ಮತ್ತೆ ಯಾವಾಗ ನೀನು ಮದುವೆಯಾಗೋದು ಎಂದು ಪದೇ ಪದೇ ತಮಾಷೆ ಮಾಡಿದ್ದಕ್ಕೆ ಮನನೊಂದ ಮೈದುನ ಆಕೆಯನ್ನು (Crime News) ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಈ ಘಟನೆ ಉತ್ತರಪ್ರದೇಶದ ಬಂದಾ ಪಟ್ಟಣದಲ್ಲಿ ನಡೆದಿದ್ದು, ಆರೋಪಿಯನ್ನು ಸುನೀಲ್ ಎಂದು ಕೊಲೆಯಾದ ಮಹಿಳೆಯನ್ನು ಆಶಾದೇವಿ ಎಂದು ಗುರ್ತಿಸಲಾಗಿದೆ. ಮೃತ ಆಶಾದೇವಿ ಆಗಾಗ ಮುದವೆಯ ವಿಚಾರಕ್ಕಾಗಿ ಮೈದುನನಾದ ಸುನೀಲ್ ಜೊತೆಗೆ ತಮಾಷೆ ಮಾಡುತ್ತಿದ್ದಳು. ಇದರಿಂದ ಸುನೀಲ್ ತುಂಬಾನೆ ಮನನೊಂದಿದ್ದ ಎನ್ನಲಾಗಿದೆ. ಮೂಲಗಳ ಪ್ರಕಾರ ಕೊಲೆಯಾದ ಮಹಿಳೆ ಹಾಗೂ ಆಕೆಯ ಮೈದುನಾ ಉತ್ತರ ಪ್ರದೇಶದ ಬಂದಾ ಪಟ್ಟಣದ ನಿವಾಸಿಗಳಾಗಿದ್ದರು. ಆಶಾ ದೇವಿ ಮದುವೆ ವಿಚಾರವಾಗಿ ಸುನೀಲ್ ನನ್ನು ರೇಗಿಸುತ್ತಿದ್ದಳು, ಜೊತೆಗೆ ಆಗಾಗ ಹಣ ಕೊಡುತ್ತಿದ್ದ ಎಂದು ಸುನೀಲ್ ತಾಯಿಯ ಬಳಿ ಹೇಳಿದ್ದಳಂತೆ. ಈ ಕಾರಣದಿಂದ ಸುನೀಲ್ ತಾಯಿ ಸಹ ಅಸಮಧಾನಗೊಂಡಿದ್ದರಂತೆ. ಅನೇಕ ಬಾರಿ ಸುನೀಲ್ ತಮಾಷೆ ಮಾಡೋದನ್ನು ನಿಲ್ಲಿಸು ಎಂದು ಆಶಾದೇವಿಗೆ ಹೇಳಿದ್ದನಂತೆ, ಆದರೂ ಸಹ ಆಶಾದೇವಿ ಅದನ್ನು ಬಿಟ್ಟಿರಲಿಲ್ಲವಂತೆ. ಈ ಕಾರಣದಿಂದ ಬೇಸತ್ತ ಸುನೀಲ್ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

Brother in law killed bhabi in up 0

ಇನ್ನೂ ಕಳೆದ ನವೆಂಬರ್‍ 3ರ ರಾತ್ರಿ ಸಮಯದಲ್ಲಿ ಸುನೀಲ್ ಮನೆಯ ಟೆರೇಸ್ ಮೇಲಿಂದ ತನ್ನ ಅತ್ತಿಗೆ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಆ ಸಮಯದಲ್ಲಿ ಆಶಾದೇವಿ ನಿದ್ದೆ ಮಾಡುತ್ತಿರುತ್ತಾಳೆ. ಆಶಾದೇವಿಯ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಪ್ರಜ್ಞೆ ತಪ್ಪುವಂತೆ ಮಾಡಿದ್ದಾನೆ. ಬಳಿಕ ಆಕೆಯನ್ನು ಹೊರಗೆ ಎಳೆದುತಂದು, ಇಟ್ಟಿಗೆಯಿಂದ ತಲೆಯನ್ನು ಜಜ್ಜಿ, ಕಾಲಿನಿಂದ ಚೆನ್ನಾಗಿ ತುಳಿದು ಕೊಲೆ ಮಾಡಿದ್ದಾನೆ. ಬಳಿಕ ಕಸದ ರಾಶಿಯಿಂದ ಆಕೆಯ ದೇಹವನ್ನು ಮುಚ್ಚಿದ್ದಾನೆ. ಯಾರಿಗೂ ತಿಳಿಯಂದತೆ ಮನೆಗೆ ವಾಪಸ್ಸಾಗಿದ್ದಾನೆ. ನಂತರದ ದಿನ ಆಶಾದೇವಿಯ ಮಗು ಮನೆಯಲ್ಲಿ ಅಳುತ್ತಿದ್ದಳು. ಅದನ್ನು ಕಂಡ ಮನೆಯವರು ಗಾಬರಿಯಾಗಿ ಆಶಾದೇವಿಯನ್ನು ಹುಡುಕಲು ಶುರು ಮಾಡಿದ್ದಾರೆ. ನಂತರ ಮನೆಯಿಂದ ಕೊಂಚ ದೂರವಿರುವ ಕಸದ ಗುಡ್ಡೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ನಂತರ ಈ ಸಂಬಂಧ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular