HomeNationalCrime News: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಅಪ್ರಾಪ್ತ ಬಾಲಕರು, ಪ್ರಕರಣ ದಾಖಲು….!

Crime News: 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಅಪ್ರಾಪ್ತ ಬಾಲಕರು, ಪ್ರಕರಣ ದಾಖಲು….!

Crime News – ಸಮಾಜದಲ್ಲಿ ಆಗಾಗ ಕೆಲವೊಂದು ಘಟನೆಗಳು ಎಲ್ಲರನ್ನೂ ಶಾಕ್ ಆಗುವಂತೆ ಮಾಡುತ್ತವೆ. ಛತ್ತೀಸ್ ಗಢದ ನಾರಾಯಣಪುರ ಎಂಬಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಘಟನೆ ನಡೆದಿದೆ. ಬಾಲಕಿಯನ್ನು ಆಟ ಆಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿ ಇಬ್ಬರು ಬಾಲಕರು ಈ ಕೃತ್ಯವೆಸಗಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಕೋತ್ವಾಲಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

minor girl abused by minor boys 1

ಛತ್ತೀಸ್ ಗಢದ ನಾರಾಯಣಪುರದಲ್ಲಿ ಈ ಕೃತ್ಯ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದಂತೆ 10 ಹಾಗೂ 13 ವರ್ಷದ ಇಬ್ಬರು ಬಾಲಾಪರಾಧಿಗಳನ್ನು ಜ.10 ರಂದು ಕೊತ್ವಾಲಿ ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಕಳೆದ ಭಾನುವಾರ ಬಾಲಕಿಯನ್ನು ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ಈ ಘಟನೆ ಬೆಳಿಕೆ ಬಂದಿದೆ ಎನ್ನಲಾಗಿದೆ. ಸದ್ಯ ಬಾಲಕಿಯ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಆರೋಪಿಗಳಲ್ಲಿ ಒಬ್ಬನ ಕುಟುಂಬ ಬಾಲಕಿಯ ಕುಟುಂಬದ ಬಾಡಿಗೆದಾರರು ಹಾಗೂ ಮತ್ತೋರ್ವ ಆಕೆಯ ನೆರೆಯವನು ಎಂದು ಹೇಳಲಾಗಿದೆ.

ಭಾನುವಾರ ರಜೆಯಿದ್ದ ಕಾರಣ ಪೋಷಕರು ಮಕ್ಕಳನ್ನು ಆಟವಾಡುವುದಕ್ಕೆ ಹೊರಗೆ ಬಿಟ್ಟಿದ್ದಾರೆ. ಈ ಸಮಯದಲ್ಲಿ 5 ಹಾಗೂ 8ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕರು 4 ವರ್ಷದ ಬಾಲಕಿಯನ್ನು ಆಟವಾಡಲು ಬಾ ಎಂದು ಕರೆದುಕೊಂಡು ಹೋಗಿದ್ದಾರೆ. ಮೈದಾನದಲ್ಲಿ ಆಟವಾಡುತ್ತಿದ್ದನ್ನು ಬಾಲಕಿಯ ಅಮ್ಮ ನೋಡಿದ್ದಾರೆ. ಬಳಿಕ ಬಾಲಕಿಯನ್ನು ಹೊಲದ ಬಳಿ ಆಟವಾಡಲು ಇಬ್ಬರೂ ಬಾಲಾಪರಾಧಿಗಳು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಬಾಲಕಿಯ ಮೇಲೆ ಇಬ್ಬರೂ ಬಾಲಕರು ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ.

minor girl abused by minor boys 2

ಇನ್ನೂ ಬಾಲಕಿ ಅಳುತ್ತಾ ಮನೆಗೆ ಬಂದಿದ್ದಾಳೆ. ಬಾಲಕಿಯ ಖಾಸಗಿ ಭಾಗದಲ್ಲಿ ನೋವು ಉಂಟಾಗಿದ್ದು, ಏನಾದರು ತಗಲಿ ಗಾಯವಾಗಿರಬಹುದು ಎಂದು ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಾಗ ವೈದ್ಯರು ಏನಾಗಿದೆ ಎಂದು ವಿಚಾರಿಸಿದ್ದಾರೆ. ಪೋಷಕರು ಈ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ನಂತರ ಪರೀಕ್ಷೆ ನಡೆಸಿದ ವೈದ್ಯರಿಗೆ ಸತ್ಯಾಂಶ ತಿಳಿದಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದ್ದು, ಆಸ್ಪತ್ರೆಯವರೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ. ವೈದ್ಯರ ಪರೀಕ್ಷಾ ವರದಿಯ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸುದಾರಿಸಿಕೊಂಡ ಬಾಲಕಿಯನ್ನು ವಿಚಾರಣೆ ಮಾಡಿದಾಗ ಘಟನೆಯ ಬಗ್ಗೆ ಹಾಗೂ ಬಾಲಕರ ಕುರಿತು ಹೇಳಿದ್ದಾರೆ.  ಗ್ರಾಮಕ್ಕೆ ತೆರಳಿದ ಪೊಲೀಸರು ಇಬ್ಬರೂ ಬಾಲಕರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular