Friday, August 29, 2025
HomeStateCrime : ಕೋಲಾರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ: ಪತಿಯೇ ಒಳ್ಳೆಯವನೆಂದು ಡೆತ್ ನೋಟ್ ….!

Crime : ಕೋಲಾರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಯುವತಿ ಬಲಿ: ಪತಿಯೇ ಒಳ್ಳೆಯವನೆಂದು ಡೆತ್ ನೋಟ್ ….!

Crime – ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕಾಡದೇನಹಳ್ಳಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ರಶ್ಮಿ (25) ಎಂಬ ಯುವತಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ರಶ್ಮಿ ಅವರು ತಾನು ಬರೆದ ಡೆತ್ ನೋಟ್ ನಲ್ಲಿ ತನ್ನ ಪತಿ ಒಳ್ಳೆಯವನಾಗಿದ್ದರೂ, ಅತ್ತೆ-ಮಾವ ಮತ್ತು ಇತರ ಕುಟುಂಬಸ್ಥರ ಕಿರುಕುಳ ತಾಳಲಾರದೆ ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

Crime – ಡೆತ್ ನೋಟ್ ನಲ್ಲಿ ಬರೆದಿದ್ದು?

ಒಂದು ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ರಶ್ಮಿ ಮತ್ತು ದಿನೇಶ್ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ರಶ್ಮಿ ತನ್ನ ಡೆತ್ ನೋಟ್ ನಲ್ಲಿ, “ರೀ ಸಾರಿ ನಿಮ್ಮ ಅಮ್ಮ, ದೊಡ್ಡಮ್ಮನ ಕಾಟ ತಡೆಯೋಕೆ ಆಗುತ್ತಿಲ್ಲ. ಮದುವೆಯಾಗಿ ಬಂದಾಗಿನಿಂದ ನೆಮ್ಮದಿಯೇ ಇಲ್ಲ. ನನ್ನಿಂದ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ನನ್ನ ಗಂಡ ಒಳ್ಳೆಯವನೇ, ಆದರೆ ಮನೆಯವರು ಒಳ್ಳೆಯವರಲ್ಲ. ಅದಕ್ಕೆ ನೀವು ಬರುವಷ್ಟರಲ್ಲೇ ಸಾಯುತ್ತಿದ್ದೇನೆ, ಬೈ” ಎಂದು ಬರೆದುಕೊಂಡಿದ್ದಾರೆ.

Crime - Kolar Woman Commits Suicide Due to Dowry Harassment

Crime – ತಾಯಿಗೆ ತಿಳಿಸಿದ್ದು ನೋವಿನ ನುಡಿ

ತನ್ನ ತಂದೆ ತಾಯಿಗೂ ಕ್ಷಮೆ ಕೇಳಿರುವ ರಶ್ಮಿ, “ಅಮ್ಮ ಇಷ್ಟು ದಿನ ಇಲ್ಲಿನ ಕಷ್ಟ ಸಹಿಸಿಕೊಂಡೆ. ಇಲ್ಲಿಯವರು ಒಳ್ಳೆಯವರಲ್ಲ. ವರದಕ್ಷಿಣೆ ತಂದಿಲ್ಲ ಎಂದು ಹೊಡೆಯುತ್ತಾರೆ” ಎಂದು ನೋವಿನಿಂದ ನುಡಿದಿದ್ದಾರೆ. ಕೇವಲ ಮೂರು ತಿಂಗಳ ಹಿಂದೆಯಷ್ಟೇ ರಶ್ಮಿ ಗರ್ಭಪಾತಕ್ಕೆ ಒಳಗಾಗಿದ್ದರು. ಇದರ ಬೆನ್ನಲ್ಲೇ ವರದಕ್ಷಿಣೆ ತಂದಿಲ್ಲ ಹಾಗೂ ಮಗು ಆಗಿಲ್ಲ ಎಂಬ ಕಾರಣಕ್ಕೆ ಆಕೆಗೆ ನಿರಂತರವಾಗಿ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಹೇಳಲಾಗಿದೆ. Read this also : Newlywed Woman – ನವವಿವಾಹಿತೆ ಆತ್ಮಹತ್ಯೆ: ಅತ್ತೆ-ಭಾವನಿಂದ ವರ್ಣಭೇದ ಕಿರುಕುಳ, ಡೆತ್ ನೋಟ್‌ನಲ್ಲಿ ಸತ್ಯ ಬಯಲು

ಪ್ರಕರಣದ ಆರೋಪಿಗಳಾದ ಪತಿ ದಿನೇಶ್ ಗೌಡ, ಮಾವ ಅಪ್ಪಾಜಿ ಗೌಡ, ಅತ್ತೆ ಸರೋಜಮ್ಮ, ದೊಡ್ಡತ್ತೆ ರತ್ನಮ್ಮರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular