Crime – ಚಾಮರಾಜನಗರ ಜಿಲ್ಲೆಯ ಸಂತೇಮರಹಳ್ಳಿಯಲ್ಲಿ ನಡೆದ ಘಟನೆಯೊಂದು ಜನರನ್ನು ಬೆಚ್ಚಿಬೀಳಿಸಿದೆ. ಗ್ಯಾಸ್ ಡೆಲಿವರಿ ನೀಡಲು ಬಂದಿದ್ದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Crime – ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ವಿರುದ್ಧ ಆರೋಪ
ಘಟನೆ ಮೇ 21 ರಂದು ನಡೆದಿದ್ದು, ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ಯಾಸ್ ಏಜೆನ್ಸಿಯ ಡೆಲಿವರಿ ಬಾಯ್ ಆಗಿರುವ ಮಹೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಮಹೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Crime – ದೂರಿನಲ್ಲಿ ಏನಿದೆ?
ಮೇ 21 ರಂದು ಮಹಿಳೆ ಅನಾರೋಗ್ಯದಿಂದ ಮೈಸೂರಿಗೆ ತೆರಳಲು ಸಿದ್ಧವಾಗುತ್ತಿದ್ದರು. ಮಧ್ಯಾಹ್ನ 12:30 ರ ಸುಮಾರಿಗೆ, ಗ್ಯಾಸ್ ಡೆಲಿವರಿ ಬಾಯ್ ಮಹೇಶ್ ಅವರ ಮನೆಗೆ ಬಾಗಿಲು ತಟ್ಟಿದ್ದಾನೆ. ಮಹಿಳೆ “ಯಾರು?” ಎಂದು ಕೇಳಿದಾಗ, “ಗ್ಯಾಸ್ ಡೆಲಿವರಿ ಮಾಡುವವನು” ಎಂದು ಮಹೇಶ್ ಉತ್ತರಿಸಿದ್ದಾನೆ. ತಾನು ಗ್ಯಾಸ್ ಬುಕ್ ಮಾಡಿಲ್ಲ ಎಂದು ಮಹಿಳೆ ಹೇಳಿದರೂ, ಮಹೇಶ್ “ಬುಕ್ ಮಾಡದಿದ್ದರೂ ಕೊಡುತ್ತೇವೆ, ಖಾಲಿ ಇದ್ದರೆ ತೆಗೆದುಕೊಳ್ಳಿ” ಎಂದು ಹೇಳಿದ್ದಾನೆ.
Crime -KYC ನೆಪದಲ್ಲಿ ಫೋಟೋ: ಕುತಂತ್ರದ ಮೊದಲ ಹೆಜ್ಜೆ
ಗ್ಯಾಸ್ ಬೆಲೆ ₹920 ಎಂದು ಹೇಳಿ ಹಣ ಪಡೆದ ನಂತರ, ಮಹೇಶ್ ಹೊಸ ನಾಟಕ ಶುರು ಮಾಡಿದ್ದಾನೆ. “ಗ್ಯಾಸ್ ಕಂಪನಿಯಿಂದ KYC ಮಾಡಬೇಕು, ಹೀಗಾಗಿ ಮನೆಯ ಫೋಟೋ ತೆಗೆದು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕು” ಎಂದು ಹೇಳಿ ಮಹಿಳೆಯನ್ನು ಗ್ಯಾಸ್ ಸಿಲಿಂಡರ್ ಪಕ್ಕ ನಿಲ್ಲಿಸಿ ಫೋಟೋ ತೆಗೆದಿದ್ದಾನೆ. ಇದೇ ವೇಳೆ, ಮಹೇಶ್ “ಕೇಂದ್ರ ಸರ್ಕಾರದ ಆದೇಶವಿದೆ, ನಿಮ್ಮ ಅಡುಗೆಮನೆಯಲ್ಲಿ ಗಾಳಿ, ಬೆಳಕು ಸರಿಯಾಗಿ ಬರುತ್ತದೆಯೋ ಇಲ್ಲವೋ ಪರಿಶೀಲಿಸಿ, ಫೋಟೋ ತೆಗೆಯಬೇಕು” ಎಂದು ಹೇಳಿದ್ದಾನೆ. ಅವನ ಮಾತನ್ನು ನಂಬಿದ ಮಹಿಳೆ ಮಹೇಶ್‌ನನ್ನು ಮನೆಯೊಳಗೆ ಬಿಟ್ಟುಕೊಂಡಿದ್ದಾರೆ. ಇದೇ ಅವನ ದುಸ್ಸಾಹಸಕ್ಕೆ ಅವಕಾಶ ಮಾಡಿಕೊಟ್ಟಿದೆ.
Read this also : ಪುಣೆಯಲ್ಲಿ ಯುವತಿಯ ಮೇಲೆ ಸ್ನೇಹಿತನಿಂದಲೇ ಅತ್ಯಾಚಾರ, ವಿಡಿಯೋ ಮಾಡಿ ಪರಾರಿ, ಆರೋಪಿಗಳ ಬಂಧನ…!
Crime – ಅತ್ಯಾಚಾರ ಯತ್ನ ಮತ್ತು ಚಾಕುವಿನಿಂದ ಇರಿತ
ಮಹೇಶ್ ಮನೆಯೊಳಗೆ ಬಂದ ಕೂಡಲೇ ಮಹಿಳೆಯನ್ನು ತಳ್ಳಿದ್ದಾನೆ. ನಂತರ ಚಾಕು ತೋರಿಸಿ, “ಕಿರುಚಿದರೆ ನಿನ್ನನ್ನು ಇಲ್ಲೇ ಮುಗಿಸಿಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಮಹಿಳೆ ಪ್ರತಿರೋಧ ತೋರಿದಾಗ, ಆಕೆಯ ಮುಖಕ್ಕೆ ಹೊಡೆದು, ಎಳೆದಾಡಿ ಕಿರುಕುಳ ನೀಡಿದ್ದಾನೆ. ಅಷ್ಟೇ ಅಲ್ಲದೆ, ಮಹಿಳೆಯ ಎದೆ ಮತ್ತು ಮುಖಕ್ಕೆ ಚಾಕುವಿನಿಂದ ಇರಿದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಘಟನೆಯ ತೀವ್ರತೆಯನ್ನು ಅರಿತ ಸಂತೇಮರಹಳ್ಳಿ ಪೊಲೀಸರು ತಕ್ಷಣವೇ ತನಿಖೆ ನಡೆಸಿ, ಆರೋಪಿ ಮಹೇಶ್‌ನನ್ನು ಬಂಧಿಸಿದ್ದಾರೆ.