Crime – ಮಹಾರಾಷ್ಟ್ರದ ಪುಣೆಯಲ್ಲಿ ನಡುರಾತ್ರಿ ದಾರುಣ ಘಟನೆ ನಡೆದಿದೆ. ಯುವತಿಯ ಸ್ನೇಹಿತನಿಂದಲೇ ಅತ್ಯಾಚಾರ ನಡೆಸಿ, ಅದನ್ನು ವಿಡಿಯೋ ಮಾಡಿ ನಂತರ ತಾವೂ ಅತ್ಯಾಚಾರ ಎಸಗಿದ ಇಬ್ಬರು ಅಪರಾಧಿಗಳು ಚಿನ್ನಾಭರಣ ದರೋಡೆ ಮಾಡಿ ಪರಾರಿಯಾದ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಆರೋಪಿಗಳು ಆಕೆ ಮತ್ತು ಆಕೆಯ ಸಂಬಂಧಿ ಅಶ್ಲೀಲ ಕೃತ್ಯದಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಿ ಅದನ್ನು ವಿಡಿಯೋ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ ಎನ್ನಲಾಗಿದೆ.

Crime – ಘಟನೆಯ ವಿವರ:
ಶನಿವಾರ ರಾತ್ರಿ ಪುಣೆಯ ಶಿರೂರ್ ತಹಸಿಲ್ ಪ್ರದೇಶದಲ್ಲಿ ಯುವತಿ ಮತ್ತು ಆಕೆಯ ಸ್ನೇಹಿತ ಏಕಾಂತ ಸ್ಥಳದಲ್ಲಿ ಕುಳಿತಿದ್ದರು. ಆ ಸಮಯದಲ್ಲಿ ಇಬ್ಬರು ಅಪರಾಧಿಗಳು ಮೋಟಾರ್ ಬೈಕ್ ನಲ್ಲಿ ಬಂದು, ಚಾಕು ತೋರಿಸಿ ಅವರನ್ನು ಬೆದರಿಸಿದರು. ಆರೋಪಿಗಳು ಯುವತಿಯ ಸ್ನೇಹಿತನನ್ನು ಆಕೆಯ ಮೇಲೆ ಅತ್ಯಾಚಾರ ಮಾಡುವಂತೆ ಒತ್ತಾಯಿಸಿದರು ಮತ್ತು ಅದನ್ನು ವೀಡಿಯೊ ಮಾಡಿದರು. ನಂತರ, ಇಬ್ಬರು ಆರೋಪಿಗಳು ಸರದಿಯಂತೆ ಯುವತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎನ್ನಲಾಗಿದೆ. ಅತ್ಯಾಚಾರದ ನಂತರ, ಆರೋಪಿಗಳು ಯುವತಿಯ ಚಿನ್ನದ ಮೂಗುತಿ ಮತ್ತು ಪೆಂಡೆಂಟ್ ಸೇರಿದಂತೆ ಆಭರಣಗಳನ್ನು ದೋಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ರಂಜನ್ ಗಾಂವ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಮಹಾದೇವ್ ವಾಘ್ಮೋಡೆ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದ್ದಾರೆ.

Crime – ಪೊಲೀಸರ ತ್ವರಿತ ಕಾರ್ಯಾಚರಣೆ, ಆರೋಪಿ ಬಂಧನ
ಇನ್ನೂ ಈ ಘಟನೆಯ ಬಳಿಕ ಯುವತಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಯುವತಿಯ ಹೇಳಿಕೆಯಂತೆ ಇಬ್ಬರೂ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ 112 ಸಂಖ್ಯೆಗೆ ಯುವತಿ ಕರೆ ಮಾಡುತ್ತಿದ್ದಮತೆ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಮಾಹಿತಿ ಸಂಗ್ರಹಿಸಿ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.