ಇತ್ತೀಚೆಗೆ ಕ್ಷುಲ್ಲಕ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುವಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಅದೇ ರೀತಿಯ ಪ್ರಕರಣವೊಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡಬೇಡ (Chikkaballapura News) ಎಂದು ಹೇಳಿದಕ್ಕೆ ಮನನೊಂದ ಯುವಕ ಮನೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಗ್ರಾಮದ ಗಿರೀಶ್ (21] ಆತ್ಮಹತ್ಯೆ ಮಾಡಿಕೊಂಡ ಯುವಕ ಎಂದು ಗುರ್ತಿಸಲಾಗಿದೆ. ಗ್ರಾಮದ ಮಂಜುನಾಥ ಹಾಗೂ ಲಕ್ಷ್ಮಿನರಸಿಂಹಮಮ್ಮ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದು ಗ್ರಾಮದಲ್ಲಿ ಗಣೇಶನ ಉತ್ಸವವನ್ನು ಬಹಳಷ್ಟು ವಿಜೃಂಭಣೆಯಿಂದ ಆಚರಣೆ ಮಾಡಿದ್ದರು. ಆದರೆ ಕಳೆದ ರಾತ್ರಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮಾಡುವ ವೇಳೆ ಗಿರೀಶ್ ಡ್ಯಾನ್ಸ್ ಮಾಡಿದ್ದು ಇದನ್ನು ಗಮನಿಸಿದ ಅಣ್ಣ ಈ ರೀತಿಯಾಗಿ ಡ್ಯಾನ್ಸ್ ಮಾಡಬೇಡ ಎಂದು ಬುದ್ದಿವಾದ ಹೇಳಿದ್ದ ಎನ್ನಲಾಗಿದೆ.
ಇನ್ನೂ ಬುದ್ದಿ ವಾದ ಹೇಳಿದಕ್ಕೆ ಕೋಪಗೊಂಡ ಯುವಕ ಗಿರೀಶ್ ಮನೆಗೆ ಹೋಗಿ ತಾಯಿಯ ಸೀರೆಯನ್ನು ತಗೆದುಕೊಂಡು ಮನೆಯ ಸಮೀಪವೇ ಇರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನೂ ಮನೆಯಲ್ಲಿ ಎಲ್ಲೋ ಹೋಗಿರಬಹುದು ಎಂದು ಸುಮ್ಮನಾಗಿದ್ದರು. ಆದರೆ ಇಂದು (ಸೆ.11) ಗ್ರಾಮದ ವ್ಯಕ್ತಿಯೊಬ್ಬರು ಮೂತ್ರ ವಿಸರ್ಜನೆಗೆ ಹೋಗಿದ್ದ ವೇಳೆ ಗಿರೀಶ್ ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.