HomeStateCheated News : ಜೆಡಿಎಸ್ ಕಾರ್ಯಾಧ್ಯಕ್ಷೆ ಅಂತಾ ಹೇಳಿ 8 ಜನರೊಂದಿಗೆ ಮದುವೆಯಾಗಿ 38 ಕೋಟಿ...

Cheated News : ಜೆಡಿಎಸ್ ಕಾರ್ಯಾಧ್ಯಕ್ಷೆ ಅಂತಾ ಹೇಳಿ 8 ಜನರೊಂದಿಗೆ ಮದುವೆಯಾಗಿ 38 ಕೋಟಿ ವಂಚಿಸಿದ ಖತರ್ನಾಕ್ ಮಹಿಳೆ…!

ಮದುವೆಯ ಹೆಸರಿನಲ್ಲಿ ಆಗಾಗ ಮೋಸಗಳು (Cheated News) ನಡೆಯುತ್ತಿರುವ ಬಗ್ಗೆ ಕೇಳುತ್ತಲೇ ಇರುತ್ತೇವೆ. ಇಲ್ಲೊಬ್ಬ ಖತರ್ನಾಕ್ ಲೇಡಿ ತನ್ನನ್ನು ಜೆಡಿಎಸ್ ಅಲ್ಪಸಂಖ್ಯಾತರ ರಾಜ್ಯ ಘಟಕದ ಕಾರ್ಯಧ್ಯಕ್ಷೆ ಎಂದು ಹೇಳಿಕೊಂಡು ಬರೊಬ್ಬರಿ ಎಂಟು ಮಂದಿಯೊಂದಿಗೆ ಮದುವೆಯಾಗಿದ್ದಾಳೆ. (Cheated News) ಅವರಿಂದ ಬರೊಬ್ಬರಿ 38 ಕೋಟಿ ವಂಚನೆ ಮಾಡಿರುವ (Cheated News)ಘಟನೆ ಬಯಲಿಗೆ ಬಂದಿದೆ. ವಂಚಕಿ ಮಹಿಳೆ ಮದುವೆಯಾದ ಪುರಷರನ್ನು ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದಳು ಎಂದು ಹೇಳಲಾಗಿದೆ.

ಸಾಲ ಕೊಡಿಸುವುದಾಗಿ ಕೋಟಿ ಕೋಟಿ ವಂಚನೆ:

ಈ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದ್ದು, (Cheated News)ಆರೋಪಿಯನ್ನು ತಬುಸುಮ್ ತಾಜ್ (40)  ಎಂದು ಗುರ್ತಿಸಲಾಗಿದೆ. ಮೂಲತಃ ತಬುಸುಮ್ ಉಡುಪಿ ನಿವಾಸಿಯಾಗಿದ್ದಾಳೆ. ಈ ಐನಾತಿ ಮಹಿಳೆ ಬರೊಬ್ಬರಿ ಎಂಟು ಜನರೊಂದಿಗೆ ಸುಳ್ಳು ಹೇಳಿ ಮದುವೆಯಾಗಿದ್ದಾಳೆ. ಮದುವೆಯಾದ ಬಳಿಕ ಸಾಲ ಕೊಡಿಸುವುದಾಗಿ ನಂಬಿಸಿ 38 (Cheated News) ಕೋಟಿಯಷ್ಟು ಹಣ ವಂಚನೆ ಮಾಡಿದ್ದಾಳೆ. ಈಕೆಯ ವಿರುದ್ದ ತುಮಕೂರು, ಶಿವಮೊಗ್ಗ, ಮಂಗಳೂರು, ಭದ್ರಾವತಿ, ಮಣಿಪಾಲ, ಉಡುಪಿ, ಕಾಪು, ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ, ಹೊಸಪೇಟೆ ಬಡವಾಣೆ, (Cheated News)ಹೊಸಪೇಟೆ ನಗರ ಠಾಣೆ ಗಳಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿದೆ.

Woman Marries 8 Scams 38 Crore 0

ವಂಚಕಿ ತಬುಸುಮ್ (Cheated News)ಸಿಟಿಜನ್ ಲೇಬರ್‍ ವೆಲ್ ಫೇರ್‍ ಅಂಡ್ ಆಂಟಿ ಕರಪ್ಷನ್ ಕಮಿಟಿ ಎಂಬ ಹೆಸರಿನಲ್ಲಿ ಕಚೇರಿ ಮಾಡಿಕೊಂಡಿದ್ದಾಳೆ. ಜೊತೆಗೆ ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯಾಧ್ಯಕ್ಷೆ ಹಾಗೂ ಹೀನಾ ಎಂಟರ್‍ ಪ್ರೈಸಸ್ ಎಂದು ರಾಜ್ಯದ ವಿವಿಧ ಕಡೆ ಆಫೀಸ್ ಸಹ ಮಾಡಿಕೊಂಡಿದ್ದಾರೆ. (Cheated News)ಈ ಖತರ್ನಾಕ್ ವಂಚಕಿ ಮುದ್ರಾ ಲೋನ್, ಸರ್ಕಾರಿ ನೌಕರಿ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಅಲ್ಪಸಂಖ್ಯಾತರ ಸಾಲ ಕೊಡಿಸುವುದಾಗಿ ಹೇಳಿ ವಂಚಿಸುತ್ತಿದ್ದಳು. (Cheated News)ಅದನ್ನೇ ಕಾಯಕ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು ಈ ತಬುಸುಮ್. ಅಷ್ಟೇಅಲ್ಲದೇ ಹಾಲಿ ಸ್ಪೀಕರ್‍ ಯು.ಟಿ.ಖಾದರ್‍ ಹೆಸರನ್ನೂ ಸಹ ಬಳಸಿಕೊಂಡು ಮೋಸ ಮಾಡಿದ್ದಾಳೆ. (Cheated News)ಯು.ಟಿ.ಖಾದರ್‍ ಬಳಿ ಬ್ಲಾಕ್ ಮನಿ ಇದೆ, ಅದನ್ನು ವೈಟ್ ಮಾಡೋದಕ್ಕೆ ಈ ಬ್ಯುಸಿನೆಸ್ ಶುರು ಮಾಡಿದ್ದೇನೆ. ಒಂದು ಕೋಟಿ ಲೋನ್ ಬೇಕಾದರೇ 15 ಲಕ್ಷ ಕೊಡಿ ಸಾಕು, 10 ದಿನದಲ್ಲಿ ಅಲ್ಪಾಸಂಖ್ಯಾತರ ಲೋನ್ ಮಾಡಿಸಿಕೊಡುತ್ತೇನೆ (Cheated News) ಎಂದು ಮುಗ್ದರನ್ನು ಟಾರ್ಗೆಟ್ ಮಾಡಿ ಕೋಟಿ ಕೋಟಿ ವಂಚನೆ ಮಾಡಿದ್ದಾಳೆ.

ಮದುವೆಯಾದ ಮುಸ್ಲೀಂ ಪುರುಷರೇ ಆಕೆಗೆ ಟಾರ್ಗೆಟ್:

ಇನ್ನೂ ಈ ವಂಚಕಿ (Cheated News)ತಬುಸುಮ್ ಮದುವೆಯಾಗಿದ್ದ ಮುಸ್ಲೀಂ ಪುರುಷರನ್ನು ಟಾರ್ಗೆಟ್ ಮಾಡುತ್ತಿದ್ದಳಂತೆ. ಮದುವೆಯಾದ ಮುಸ್ಲೀಂ ಪುರುಷರನ್ನು ಬಲೆಗೆ ಹಾಕಿಕೊಂಡು ಅವರನ್ನು ವಂಚಿಸುತ್ತಿದ್ದಳು. (Cheated News)ಮದುವೆಗೂ ಮುಂಚೆ ತಾನು ತುಂಬಾ ಮುಗ್ದಳಂತೆ ವರ್ತನೆ ಮಾಡುತ್ತಿದ್ದಳು. ಆಕೆಯ ಮಾತಿಗೆ ಮರುಳಾಗಿ ಮದುವೆಯಾದರೇ ಸಾಕು ಬಳಿಕ ಅವನ ಪಾಡು ಆ ದೇವರೇ ಬಲ್ಲ. ಮದುವೆಯಾದ ಆರು ತಿಂಗಳಿಗೆ ಆಕೆ ತನ್ನ ಅಸಲೀ ಆಟ ಶುರು ಮಾಡುತ್ತಿದ್ದಳಂತೆ. (Cheated News)ಮದುವೆಯಾದ ಪುರುಷರನ್ನು ಟಾರ್ಗೆಟ್ ಮಾಡಿ,(Cheated News) ನಮ್ಮ ಮನೆಗೆ ಬನ್ನಿ ನನ್ನ ಬಳಿ ಇರಿ ಎಂದು ಎಂದು ನಾಟಕ ಮಾಡೋದು, 2 ತಿಂಗಳಿಗೊಮ್ಮೆ ನನ್ನ ಹತ್ರ ಬನ್ನಿ ಸಾಕು ಎಂದು ಹೇಳಿ ಮದುವೆಗೆ ಒಪ್ಪಿಸೋದು, (Cheated News) ಬಳಿಕ ತಾನು ಗರ್ಭಿಣಿ ಅಂತಾ ಕಥೆ ಕಟ್ಟಿ ಹಣ ವಸೂಲಿ ಮಾಡೋದೆ ಆಕೆಯ ಕಾಯಕವಾಗಿದೆ.

ಈ ರೀತಿಯಾಗಿ ತಬುಸುಮ್ 10 ಕ್ಕೂ ಹೆಚ್ಚು ಮಂದಿಗೆ ಮಕ್ಮಲ್ ಟೋಪಿ (Cheated News)ಹಾಕಿದ್ದಾಳೆ. ಆರು ತಿಂಗಳಿಗೊಮ್ಮೆ ಒಬ್ಬರಂತೆ ಮದುವೆಯಾಗಿ ಅವರ ಬಳಿ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದಾಳೆ ಎಂದು ಹೇಳಲಾಗಿದೆ. (Cheated News) ವಂಚಕಿ ತಬುಸುಮ್ ಉಡುಪಿಯಲ್ಲಿ ಇಬ್ಬರನ್ನ ಮದುವೆಯಾಗಿದ್ರೆ, ಶಿವಮೊಗ್ಗ, ಬೆಂಗಳೂರು, ತುಮಕೂರು, ಹೊಸಪೇಟೆ, ಕೋಲಾರ, ಹಾವೇರಿಯಲ್ಲಿ ತಲಾ ಒಬ್ಬರನ್ನ ಬಲೆ ಹಾಕೊಂಡು ಮದುವೆಯಾಗಿದ್ದಾಳೆ ಎಂದು ತಿಳಿದುಬಂದಿದೆ.

by Baluhttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular