0.9 C
New York
Sunday, February 16, 2025

Buy now

Junior NTR : ಉಡುಪಿ ಕೃಷ್ಣನ ಮಠಕ್ಕೆ ಭೇಟಿಕೊಟ್ಟ ಜೂನಿಯರ್ ಎನ್.ಟಿ.ಆರ್ ಕುಟುಂಬ, ಸಾಥ್ ಕೊಟ್ಟ ರಿಷಭ್ ಶೆಟ್ಟಿ….!

ಪ್ಯಾನ್ ಇಂಡಿಯಾ ಸ್ಟಾರ್‍ ಜೂನಿಯರ್‍ ಎನ್.ಟಿ.ಆರ್‍, (Junior NTR) ಅವರ ಪತ್ನಿ ಹಾಗೂ ತಾಯಿಯೊಂದಿಗೆ ಕರ್ನಾಟಕದ ಉಡುಪಿ ಶ್ರೀಕೃಷ್ಣ ದರ್ಶನ ಪಡೆದಿದ್ದಾರೆ. ಈ ಸಮಯದಲ್ಲಿ (Junior NTR) ಕನ್ನಡದ ಪ್ಯಾನ್ ಇಂಡಿಯಾ ಸ್ಟಾರ್‍ ರಿಷಭ್ ಶೆಟ್ಟಿ ಸಾಥ್ ನೀಡಿದ್ದಾರೆ. ಉಡುಪಿಗೆ ಜೂನಿಯರ್‍ ಎನ್.ಟಿ.ಆರ್‍ ರನ್ನು ರಿಷಭ್ ಶೆಟ್ಟಿ ಕರೆತಂದಿರುವುದು ವಿಶೇಷ (Junior NTR)ಎನ್ನಬಹುದಾಗಿದೆ. ಈ ಸಮಯದಲ್ಲಿ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ ಸಹ ಹಾಜರಿದ್ದರು. (Junior NTR) ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿವೆ.

Junior NTR family visit udupi 0

ಪ್ರಸಿದ್ದ ಉಡುಪಿಯ ಕ್ಷೇತ್ರಕ್ಕೆ ಭೇಟಿ ನೀಡಿದ ಸ್ಟಾರ್‍ ನಟ :

ಕರ್ನಾಟಕ ಪ್ರಸಿದ್ದ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಉಡುಪಿ ಕೃಷ್ಣ ಮಠಕ್ಕೆ ಅನೇಕ ರಾಜಕಾರಣಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಭೇಟಿ ನೀಡುತ್ತಿರುತ್ತಾರೆ.  ಇದೀಗ ತೆಲುಗು ನಟ ಜೂನಿಯರ್‍ ಎನ್.ಟಿ.ಆರ್‍ (Junior NTR) ಸಹ ಭೇಟಿ ನೀಡಿದ್ದಾರೆ. ಜೂನಿಯರ್‍ ಎನ್.ಟಿ.ಆರ್‍ (Junior NTR)ರವರ ತಾಯಿ ಉಡುಪಿ ಮೂಲದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜೂನಿಯರ್‍ ಎನ್.ಟಿ.ಆರ್‍ (Junior NTR)ರವರಿಗೆ ಕರ್ನಾಕಟದೊಂದಿಗೆ ವಿಶೇಷ ಸಂಬಂಧೌಇದೆ. ಜೊತೆಗೆ ಅವರು ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ ಜೊತೆಗೆ ಅರ್ಥ ಸಹ ಮಾಡಿಕೊಳ್ಳುತ್ತಾರೆ. ಈ ಹಿಂದೆ ಕಾಂತಾರ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದರು. (Rishab Shetty) ರಿಷಭ್ ಜೊತೆಗೆ ಕನ್ನಡದಲ್ಲಿ ಮಾತನಾಡಿ ಮೆಚ್ಚುಗೆ ತಿಳಿಸಿದ್ದರು. ಈ ಸಿನೆಮಾದ ಬಳಿಕ ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಏರ್ಪಟ್ಟಿತ್ತು ಎಂದು ಹೇಳಬಹುದಾಗಿದೆ.

Junior NTR family visit udupi 2

ತಾಯಿಯ ಹುಟ್ಟುಹಬ್ಬಕ್ಕಾಗಿ ‌ಅವರ ಆಸೆ ಈಡೇರಿಸಿದ ಜೂನಿಯರ್‍ ಎನ್.ಟಿ.ಆರ್:

ಟಾಲಿವುಡ್ ಯಂಗ್ ಟೈಗರ್‍ ಎನ್.ಟಿ.ಆರ್‍ (Junior NTR) ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದು, ಈ ಸಂಬಂಧ ಸೋಷಿಯಲ್ ಮಿಡಿಯಾದಲ್ಲಿ ಸ್ಪೇಷಲ್ ಪೋಸ್ಟ್ ಹಂಚಿಕೊಂಡಿದ್ದಾರೆ. (Junior NTR)ನಮ್ಮ ತಾಯಿಯ ಹುಟ್ಟುಹಬ್ಬ ಇನ್ನೇನು ಎರಡು ದಿನಗಳು ಬಾಕಿಯಿದೆ. ಈ ಸಮಯದಲ್ಲಿ ಆಕೆಗೆ ನಾನು ನೀಡಿದ ಈ ಗಿಫ್ಟ್ ಅತ್ಯುತ್ತಮವಾದ ಬಹುಮಾನವಾಗಿದೆ. ನನ್ನನ್ನು ತನ್ನ ಸ್ವಗ್ರಾಮ ಕುಂದಾಪುರಕ್ಕೆ ಕರೆದುಕೊಂಡು ಬಂದು (Udupi SriKrishna)ಉಡುಪಿ ಶ್ರಿಕೃಷ್ಣನ ದರ್ಶನ ಮಾಡಿಕೊಳ್ಳಬೇಕೆಂಬುದು ನಮ್ಮ ತಾಯಿಯ ಕನಸು, ಅದು ಈಗ ನೆರವೇರಿದೆ. ಸೆ.2 ರಂದು ನಮ್ಮ ತಾಯಿಯ ಹುಟ್ಟುಹಬ್ಬವಾಗಿದ್ದು, ಅದಕ್ಕೂ ಮುಂಚೆ ಇದು ನಮ್ಮ ತಾಯಿಗೆ ನೀಡಿದ ಉತ್ತಮವಾದ ಬಹುಮಾನ ಎಂದು ಸೋಷಿಯಲ್ ಮಿಡಿಯಾದಲ್ಲಿ ಬರೆದುಕೊಂಡಿದ್ದಾರೆ. (Junior NTR) ಈ ಪೋಸ್ಟ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Junior NTR family visit udupi 3

ಜೂನಿಯರ್‍ ಎನ್.ಟಿ.ಆರ್ ಪೋಸ್ಟ್ : https://x.com/tarak9999/status/1829829672521138279

ಸದ್ಯ ಜೂನಿಯರ್‍ (Junior NTR) ಎನ್.ಟಿ.ಆರ್ ದೇವರ (Devara) ಎಂಬ ಸಿನೆಮಾದಲ್ಲಿ ನಟಿಸಿದ್ದು, ಶೀಘ್ರದಲ್ಲೇ ಈ ಸಿನೆಮಾ ಬಿಡುಗಡೆಯಾಗಲಿದೆ. ಇನ್ನೂ ಸ್ಟಾರ್‍ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ನಿರ್ದೇಶನದಲ್ಲಿ ಮೂಡಿಬರಲಿರುವ ಡ್ಯ್ರಾಗನ್ ಸಿನೆಮಾದ್ಲಿ ಜೂನಿಯರ್‍ ಎನ್.ಟಿ.ಆರ್‍ (Junior NTR)ನಟಿಸಲಿದ್ದಾರೆ. ಈ ಸಿನೆಮಾದ ಶೂಟಿಂಗ್ ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಇದರ ಜೊತೆಗೆ ಹಿಂದಿಯಲ್ಲಿ ಹೃತಿಕ್ ರೋಷನ್ ಜೊತೆಗೆ ವಾರ್‍ (War) ಎಂಬ ಸಿನೆಮಾದಲ್ಲೂ ಸಹ ನಟಿಸಿದ್ದಾರೆ.

by Admin
by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com

Related Articles

LEAVE A REPLY

Please enter your comment!
Please enter your name here

Stay Connected

0FansLike
0FollowersFollow
0SubscribersSubscribe

Latest Articles