Pawan Kalyan: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಹತ್ಯೆಗೆ ಪ್ಲಾನ್, ಗುಪ್ತಚರ ಇಲಾಖೆಗಳ ಎಚ್ಚರಿಕೆ?

ಆಂಧ್ರಪ್ರದೇಶದ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ (Pawan Kalyan) ರವರ ಹತ್ಯೆಗೆ ಪ್ಲಾನ್ ಮಾಡಿರುವುದಾಗಿ ಗುಪ್ತಚರ ಇಲಾಖೆಗಳು ಎಚ್ಚರಿಕೆ ನೀಡಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಆಂಧ್ರದ ಡಿಸಿಎಂ ನಟ ಪವನ್ ಕಲ್ಯಾಣ್ (Pawan Kalyan)  ಜನಸೇನಾ ಪಕ್ಷದಿಂದ ಪಿಠಾಪುರಂ ಎಂಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅವರು ಮಾತ್ರವಲ್ಲದೇ ಜನಸೇನಾ ಪಕ್ಷದಿಂದ ಗೆದ್ದಂತಹ ಎಲ್ಲಾ ಅಭ್ಯರ್ಥಿಗಳು ಗೆಲ್ಲುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಸದ್ಯ ಆಂಧ್ರ ಪ್ರದೇಶ ಸರ್ಕಾರದ ಡಿಸಿಎಂ ಆಗಿರುವ ನಟ ಪವನ್ ಕಲ್ಯಾಣ್ (Pawan Kalyan) ಜೀವಕ್ಕೆ ಅಪಾಯವಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

threat for pawan kalyan

ಕೆಲವು ತಿಂಗಳ ಹಿಂದೆಯಷ್ಟೆ ಆಂಧ್ರಪ್ರದೇಶದಲ್ಲಿ ವಿಧಾನಸಭೆ ಹಾಗೂ ಲೋಕಸಭಾ ಚುವಾವಣೆ ನಡೆದಿತ್ತು. ಕಳೆದ ಸಾಲಿನಲ್ಲಿ ಆಡಳಿತ ನಡೆಸುತ್ತಿದ್ದ ವೈ.ಎಸ್.ಆರ್‍.ಪಿ ಸರ್ಕಾರದ ವಿರುದ್ದ ಟಿಡಿಪಿ, ಜನಸೇನಾ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಂಡು ಭರ್ಜರಿ ಗೆಲುವು ಸಾಧಿಸಿತ್ತು. ವೈ.ಎಸ್.ಆರ್‍.ಪಿ ಪಕ್ಷವನ್ನು ಧೂಳಿಪಟ ಮಾಡಿತ್ತು. ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ಜನಸೇನಾ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಎಲ್ಲಾ ಅಭ್ಯರ್ಥಿಗಳು ಜಯಗಳಿಸಿ ದಾಖಲೆ ನಿರ್ಮಾಣ ಮಾಡಿದರು. ಇನ್ನೂ ಪಿಠಾಪುರಂ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಂತಹ ನಟ ಪವನ್ ಕಲ್ಯಾಣ್ (Pawan Kalyan) ರವರು ಸಹ ಭಾರಿ ಮತಗಳ ಅಂತರದಿಂದ ಜಯ ಗಳಿಸಿದ್ದರು. ಇದೀಗ ಪವನ್ ಕಲ್ಯಾಣ್ (Pawan Kalyan) ರವರ ಹತ್ಯೆಗೆ ಕೆಲ ಕಿಡಿಗೇಡಿಗಳು ಸ್ಕೆಚ್ ಹಾಕಿದ್ದಾರೆ. ಅವರು ಎಲ್ಲಿಗೆ ಹೋದರು ಹೆಚ್ಚಿನ ಭದ್ರತೆ ನೀಡಬೇಕು ಜೊತೆಗೆ ಅವರು ತುಂಬಾ ಎ‌ಚ್ಚರದಿಂದ ಇರಬೇಕು ಎಂದು ಗುಪ್ತಚರ ಇಲಾಖೆ ಆಂಧ್ರ ಸರ್ಕಾರಕ್ಕೆ ಮಾಹಿತಿ ನೀಡಿದೆ ಎಂದು ಖ್ಯಾತ ಮಾದ್ಯಮ ಸಂಸ್ಥೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ ಎನ್ನಲಾಗಿದೆ.

ಇನ್ನೂ ಈ ವಿಚಾರವನ್ನು ಜನಸೇನಾ ಪಕ್ಷ ಸಹ ಖಚಿತಪಡಿಸಿದೆ ಎನ್ನಲಾಗಿದೆ. ಪವನ್ ಕಲ್ಯಾಣ್ (Pawan Kalyan) ರವರಿಗೆ z plus ಭದ್ರತೆ ನೀಡಬೇಕೆಂದು ಸರ್ಕಾರಕ್ಕೆ ಜನಸೇನಾ ಪಕ್ಷ ಬೇಡಿಕೆಯಿಟ್ಟಿದೆ ಎನ್ನಲಾಗಿದೆ. ಈ ಹಿಂದೆ ಪವನ್ ಕಲ್ಯಾಣ್ ರವರೂ ಸಹ ತಮ್ಮ ಪ್ರಾಣಕ್ಕೆ ಅಪಾಯವಿದೆ ಎಂದು ಪ್ರಚಾರದ ಸಮಯದಲ್ಲಿ ಹೇಳಿದ್ದರು. ಇದೀಗ ಗುಪ್ತಚರ ಇಲಾಖೆಗೂ ಈ ಕುರಿತು ಮಾಹಿತಿ ಬಂದಿದ್ದು, ಪವನ್ ಕಲ್ಯಾಣ್ (Pawan Kalyan) ರವರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದೆ. ನಟ ಪವನ್ ಕಲ್ಯಾಣ್ (Pawan Kalyan)  ರವರು ರಾಜಕೀಯ ರಂಗದಲ್ಲಿ ಭಾರಿ ಏಳಿಗೆಯನ್ನು ಸಾಧನೆ ಮಾಡಿದ್ದಾರೆ ಅದರ ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದೊಂದಿಗೂ ಸಹ ಒಳ್ಳೆಯ ಬಾಂಧವ್ಯವನ್ನು ಸಾಧಿಸಿದ್ದಾರೆ. ಈ ಕಾರಣಗಳಿಂದ ಅವರ ವಿರೋಧಿಗಳು ಪವನ್ ಕಲ್ಯಾಣ್ (Pawan Kalyan) ರವರನ್ನು ಕೊಲೆ ಮಾಡಲು ಪ್ಲಾನ್ ಮಾಡಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಈ ಸುದ್ದಿ ಆಂಧ್ರ ನಾಡಲ್ಲಿ ಭಾರಿ ಸದ್ದು ಮಾಡುತ್ತಿದೆ.

Leave a Reply

Your email address will not be published. Required fields are marked *

Next Post

TTD News: ತಿರುಮಲ ಲಡ್ಡುಗಳ ಕಳಪೆ ತುಪ್ಪ ಪೂರೈಕೆ ಮಾಡಿದ ಎರಡು ಕಂಪನಿಗಳಿಗೆ ನೊಟೀಸ್….!

Thu Jul 25 , 2024
TTD News, ದೇಶದ ಪ್ರಸಿದ್ದ ದೇವಾಲಯಗಳಲ್ಲಿ ಒಂದಾದ ತಿರುಮಲ ತಿರುಪತಿ ದೇವಾಲಯಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿರುತ್ತಾರೆ. ತಿರುಪತಿ ಎಷ್ಟು ಪ್ರಸಿದ್ದಿ ಪಡೆದಿದೆಯೋ ಅಲ್ಲಿನ ಪ್ರಸಾದ ಲಡ್ಡು ಸಹ ಅಷ್ಟೇ ಪ್ರಸಿದ್ದಿ ಪಡೆದಿದೆ. ಆದರೆ ಕೆಲವು ದಿನಗಳಿಂದ ತಿರುಪತಿ ಲಡ್ಡು ಗುಣಮಟ್ಟದಲ್ಲಿ ಲೋಪ ಕಂಡು ಬಂದಿದೆ ಎಂಬ ಆರೋಪ ಕೇಳಿಬಂದಿದ್ದು, ಇದೀಗ ಟಿಟಿಡಿ (TTD News) ಇ.ಒ ಜೆ.ಶ್ಯಾಮಲಾ ರಾವ್  ಕಳಪೆ ಗುಣಮಟ್ಟದ ತುಪ್ಪ ಪೂರೈಕೆ ಮಾಡುತ್ತಿದ್ದ […]
TTD Laddu news
error: Content is protected !!