Saturday, July 5, 2025
HomeNationalಮದುವೆಯಲ್ಲೊಂದು ವಿಚಿತ್ರ ಘಟನೆ, ವಧುವಿಗೆ ಗಿಫ್ಟ್ ನೀಡಿ ವರನ ಮೇಲೆ ಚಾಕುವಿನಿಂದ ಧಾಳಿ ಮಾಡಿದ ಯುವಕ,...

ಮದುವೆಯಲ್ಲೊಂದು ವಿಚಿತ್ರ ಘಟನೆ, ವಧುವಿಗೆ ಗಿಫ್ಟ್ ನೀಡಿ ವರನ ಮೇಲೆ ಚಾಕುವಿನಿಂದ ಧಾಳಿ ಮಾಡಿದ ಯುವಕ, ಏಕೆ ಗೊತ್ತಾ?

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಮದುವೆಗೆ ಸಂಬಂಧಿಸಿದ ಕೆಲವೊಂದು ಫನ್ನಿ ವಿಡಿಯೋಗಳು, ನೃತ್ಯದ ವಿಡಿಯೋಗಳು ಸೇರಿದಂತೆ ವಿವಿಧ ರೀತಿಯ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಮದುವೆಯೊಂದರಲ್ಲಿ ಯುವಕನೋರ್ವ ಬಂದು ವಧುವಿಗೆ ಗಿಫ್ಟ್ ಕೊಟ್ಟು ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆಯೊಂದು ನಡೆದಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆ ಯುವಕ ವರನ ಮೇಲೆ ಹಲ್ಲೆ ಮಾಡಲು ಕಾರಣವಾದರೂ ಏನು ಎಂಬ ವಿಚಾರಕ್ಕೆ ಬಂದರೇ,

Brides Ex Boyfriend attacks Groom at wedding 1

ರಾಜಸ್ಥಾನದ ಬಿಲ್ವಾರದಲ್ಲಿ ನಡೆದ ಮದುವೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮದುವೆಯಲ್ಲಿ ವಧು ವರರು ನಿಂತಿದ್ದು, ಅಲ್ಲಿಗೆ ತೆರಳಿದ ಯುವಕ ಮೊದಲಿಗೆ ವಧುವಿಗೆ ಗಿಫ್ಟ್ ಕೊಟ್ಟಿದ್ದಾನೆ. ಬಳಿಕ ವರನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಇನ್ನೂ ಮಧುಮಗನ ಜೀವ ಉಳಿದಿದೆ. ಗಂಭೀರ ಗಾಯಗಳಿಂದ ಮಧುಮಗ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಇನ್ನೂ ವರನ ಮೇಲೆ ಹಲ್ಲೆ ಮಾಡಿದ ವ್ಯಕ್ತಿ ಬೇರೆಯಾರು ಅಲ್ಲ ವಧುವಿನ ಎಕ್ಸ್ ಬಾಯ್ ಫ್ರೆಂಡ್ ಅಂತೆ. ಹೌದು ವಧುವಿನ ಮಾಜಿ ಗೆಳೆಯ ವರನ ಮೇಲೆ ಹಲ್ಲೆ ಮಾಡಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿರುವಂತೆ ನವಜೋಡಿ ಸ್ಟೇಜ್ ಮೇಲೆ ನಿಂತಿದ್ದಾರೆ. ಈ ವೇಳೆ ಭಗ್ನ ಪ್ರೇಮಿ ಹೋಗಿ ವಧುವಿಗೆ ಉಡುಗೊರೆಯನ್ನು ನೀಡಿದ್ದಾನೆ. ಬಳಿಕ ವರನ ಬಳಿ ತಿರುಗಿ ಆತನಿಗೆ ಹಿಗ್ಗಾಮುಗ್ಗಾ ಥಳಿಸುತ್ತಾನೆ, ಬಳಿಕ ಚಾಕುವಿನಿಂದ ಹಲ್ಲೆ ಮಾಡುತ್ತಾನೆ. ಆದರೆ ಅದೃಷ್ಟವಶಾತ್ ಆತ ಪೇಟ ಧರಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಈ ವೇಳೆ ವಧು ಈ ಯುವಕನನ್ನು ತಡೆಯಲು ಪ್ರಯತ್ನಿಸುತ್ತಿರುತ್ತಾಳೆ. ಹಲ್ಲೆ ಮಾಡಿದ ಬಳಿಕ ಆತ ಅಲ್ಲಿಂದ ಪರಾರಿಯಾಗಿದ್ದಾನೆ. ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತನ ಬೆನ್ನಟ್ಟಿ ಓಡಿದ್ದಾರೆ. ಆದರೆ ಆತ ಪರಾರಿಯಾಗಿದ್ದಾನೆ.  ಈ ವಿಡಿಯೋ ಮದುವೆಯಲ್ಲಿ ವಿಡಿಯೋ ಮಾಡುತ್ತಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

Brides Ex Boyfriend attacks Groom at wedding

ಇನ್ನೂ ವರನ ಮೇಲೆ ಧಾಳಿ ಮಾಡಿದ ಯುವಕನನ್ನು ಶಂಕರ್‍ ಲಾಲ್ ಭಾರ್ತಿ ಎಂದು ಗುರ್ತಿಸಲಾಗಿದ್ದು, ಈತ ವಧುವಿನ ಊರಿನವನಾಗಿದ್ದಾನೆ. ಎರಡು ವರ್ಷಗಳ ಹಿಂದೆ ಇಬ್ಬರೂ ಒಂದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಮೊದಲಿನಿಂದಲೂ ಪರಿಚಯವಿತ್ತು. ಘಟನೆಗೆ ಸಂಬಂಧಿಸಿದಂತೆ ವಧು ಸಹೋದರ ವಿಶಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಲು ಬಲೆ ಬೀಸಿದ್ದಾರೆ ಎಂದು ತಿಳಿದುಬಂದಿದೆ.

by Adminhttp://ismkannadanews.com
Welcome to ISM Kannada News, if you want to contact us, then feel free to say anything about www.ismkannadanews.com
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular