BJP : ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ನಾನು ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದೆ, ಅಂದು ನನಗೆ ಡಾ.ಕೆ.ಸುಧಾಕರ್ ರವರು ಬೆಂಬಲ ನೀಡಿದ್ದರೇ ನಾನು ಬಾಗೇಪಲ್ಲಿ ಕ್ಷೇತ್ರದ ಶಾಸಕನಾಗುತ್ತಿದ್ದೆ ಎಂದು ಸಮಾಜ ಸೇವಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಮುನಿರಾಜು ತಿಳಿಸಿದರು.

ತಾಲ್ಲೂಕು ಎಲ್ಲೋಡು ಲಕ್ಷ್ಮೀ ಆದಿನಾರಾಯಣಸ್ವಾಮಿ ಜಾತ್ರೆಯಲ್ಲಿ ಸಮಾಜ ಸೇವಕ ಹಾಗೂ ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ ಮುನಿರಾಜು ರವರು ಜಾತ್ರೆಗೆ ಬಂದ ಭಕ್ತಾಧಿಗಳಿಗೆ ತಟ್ಟೆಇಡ್ಲಿ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲೋಡು ಲಕ್ಷ್ಮೀ ಆದಿನಾರಾಯಣ ಸ್ವಾಮಿ ಜಾತ್ರೆ ದೇವರ ಪಲ್ಲಿಕ್ಕಿ ಸೋಮವಾರ ರಾತ್ರಿಯ ವೇಳೆಯಲ್ಲಿ ಜರುಗಿಸುತ್ತಾರೆ. ಜಾತ್ರೆಗೆ ಬರುವಂತಹ ಭಕ್ತಾಧಿಗಳು ಹಸಿವಿನಿಂದ ಇರದೇ ಬಿಸಿಬಿಸಿ ತಟ್ಟೆ ಇಡ್ಲಿಗಳನ್ನು ತಿಂದು ಜಾತ್ರೆಯಲ್ಲಿ ಖುಷಿಯಿಂದ ಸಂಭ್ರಮಿಸಲಿ. ಪ್ರತಿ ವರ್ಷವೂ ಈ ರೀತಿಯ ಜನರ ಹಸಿವು ನೀಗಿಸಲು ತಟ್ಟೆ ಇಡ್ಲಿಯನ್ನು ವ್ಯವಸ್ಥೆ ಮಾಡಿದ್ದೇನೆ. ದೇವರ ಸೇವೆ ಮಾಡಿದವರೂ ಸೋತ ಉದಾಹರಣೆಗಳೇ ಇಲ್ಲ. ಯಾರೆಲ್ಲಾ ದೇವರ ಸೇವೆ ಮಾಡುತ್ತಾರೆ ಅವರೆಲ್ಲಾ ಒಂದಲ್ಲ ಒಂದು ದಿನ ಜಯಗಳಿಸುತ್ತಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸುವಂತಹ ಕೆಲಸ ಮಾಡುತ್ತಿದ್ದು, ಅದೇ ರೀತಿ ನಾವು ಸಹ ಈ ಭಾಗದಲ್ಲಿ ಈ ಕೆಲಸ ಮಾಡುತ್ತಾ ಸಂಪ್ರದಾಯ ಉಳಿಸುವಂತಹ ಕೆಲಸ ಮಾಡುತ್ತಿದ್ದೇವೆ ಎಂದರು.
BJP – ಡಾ.ಕೆ.ಸುಧಾಕರ್ ಬೆಂಬಲಿಸಿದ್ದರೇ ನಾನು ಶಾಸಕನಾಗುತ್ತಿದ್ದೆ
ಇನ್ನೂ ಇದೇ ಸಮಯದಲ್ಲಿ ಕಳೆದ ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಗ್ಗೆ ಮಾತನಾಡಿ, ನನಗೆ ಕಳೆದ ಚುನಾವಣೆಯಲ್ಲಿ ಹಾಲಿ ಸಂಸದರಾದ ಡಾ.ಕೆ.ಸುಧಾಕರ್ ರವರು ಬೆಂಬಲ ಕೊಟ್ಟಿದ್ದರೇ, ಇಂದು ನಾನು ಶಾಸಕನಾಗಿರುತ್ತಿದ್ದೆ. 5 ಸಾವಿರ ಮತಗಳಿದ್ದ ಬಿಜೆಪಿ ಇದೀಗ 60 ಸಾವಿರದ ತನಕ ಹೋಗಿದೆ. ಈ ಭಾಗದಲ್ಲಿ ಬಿಜೆಪಿ ಶಾಸಕ ಬೇಕು ಎಂದು ಜನರು ತೀರ್ಮಾನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗಕ್ಕೆ ಬಿಜೆಪಿ ಶಾಸಕ ಬರೋದು ಖಚಿತವಾಗಿದೆ.

BJP – ಜಿಲ್ಲಾ-ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಸ್ಪರ್ಧೆ
ಇನ್ನೂ ಶೀಘ್ರದಲ್ಲೇ ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳ ಚುನಾವಣೆ ನಡೆಯಲಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಬಿಜೆಪಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಜಿಲ್ಲಾ ಹಾಗೂ ತಾಲೂಕು ಪಂಚಾಯತಿಗಳು ಎಂ.ಎಲ್.ಎ ಹಾಗೂ ಎಂಪಿ ಗಳಿಗಿಂದ ಜನರ ಸೇವೆ ಮಾಡಲು ಒಳ್ಳೆಯ ಸ್ಥಾನಗಳು. ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಅವಿರಥವಾಗಿ ಶ್ರಮಿಸುವುದಾಗಿ ತಿಳಿಸಿದರು.
ಇನ್ನೂ ಇದೇ ಸಮಯದಲ್ಲಿ ಸ್ಥಳೀಯ ಶಾಸಕರ ವಿರುದ್ದ ಹಲವು ಆರೋಪಗಳನ್ನು ಮಾಡಿ ಎಲ್ಲದಕ್ಕೂ ಶೀಘ್ರದಲ್ಲಿಯೇ ಉತ್ತರ ನೀಡುತ್ತೇನೆ. ಸಾವಿರಾರು ಎಕರೆಗಳ ಜಮೀನು ಮಾಡುತ್ತಿದ್ದಾರೆ. ಸದ್ಯ ಅವರದ್ದೇ ಸರ್ಕಾರವಿರುವುದರಿಂದ ಎಲ್ಲರನ್ನೂ ಬೆದರಿಸಿ ಜಮೀನು ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಸದ್ಯ ಬಿಜೆಪಿ ಜಿಲ್ಲಾಧ್ಯಕ್ಷ ಹುದ್ದೆಗೆ ತಾತ್ಕಲಿಕ ತಡೆ ನೀಡಲಾಗಿದೆ. ಶೀಘ್ರದಲ್ಲೇ ಬಿಜೆಪಿ ಹಿರಿಯ ನಾಯಕರು ಆಗಮಿಸಿ ಕಾರ್ಯಕರ್ತರ ಅಭಿಪ್ರಾಯ ಪಡೆದು ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೆ. ಅಂದು ಸಂದೀಪ್ ರೆಡ್ಡಿ ಮರು ಆಯ್ಕೆಯಾದರೂ, ಅಥವಾ ಬೇರೆ ನಾಯಕ ಆಯ್ಕೆಯಾದರೂ ನಾನು ಬಿಜೆಪಿ ಪಕ್ಷದ ಪರ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಅಧ್ಯಕ್ಷರಾದ ಗಂಗಿರೆಡ್ಡಿ, ಪ್ರತಾಪ್, ಮುಖಂಡರಾದ ಮದ್ದಲಪಲ್ಲಿ ರಾಜರೆಡ್ಡಿ, ಚಿನ್ನಪೂಜಪ್ಪ, ನಾಗಭೂಷನ್ ರೆಡ್ಡಿ, ವೆಂಕಟೇಶ್, ಚಿನ್ನೀ, ಅಮರೇಶ್, ಪ್ರೆಸ್ ಶಿವಪ್ಪ, ಮದನ್ ಮೋಹನ್ ರೆಡ್ಡಿ, ಚಲಪತಿ, ಶಿವಶಂಕರರೆಡ್ಡಿ, ಮುತ್ಯಾಲು, ವೆಂಕಟರೆಡ್ಡಿ ಚಾಕವೇಲು, ನರೇಶ್, ರಾಮಕೃಷ್ಣ, ಶಿವಾರೆಡ್ಡಿ, ಸೇರಿದ್ದಂತೆ ಇನ್ನೀತರರು ಉಪಸ್ಥಿತರಿದ್ದರು.