BBMP: ರೀಲ್ಸ್ ಪ್ರಿಯರಿಗೆ ಬಂಪರ್ ಆಫರ್ ನೀಡಿದ ಬಿಬಿಎಂಪಿ, ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಿ ಬಹುಮಾನ ಗೆಲ್ಲಿ….!

ರೀಲ್ಸ್ ಪ್ರಿಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಆರೋಗ್ಯ ಇಲಾಖೆ ಬಂಪರ್‍ ಆಫರ್‍ ನೀಡಿದೆ. ರೀಲ್ಸ್ ಮಾಡುವಂತಹವರಿಗೆ ಇದೊಂದು ಒಳ್ಳೆಯ ಆಫರ್‍ ಎಂದೇ ಹೇಳಬಹುದು. ಡೆಂಗ್ಯೂ ಕುರಿತು ಜಾಗೃತಿ ಮೂಡಿಸುವಂತಹ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ ಎಂದು ಬಿಬಿಎಂಪಿ (BBMP) ಸಾರ್ವಜನಿಕ ಪ್ರಕಟನೆ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ…

dengue death in mysore 1

ಸದ್ಯ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ತುಂಬಾನೆ ಇದೆ. ಡೆಂಗ್ಯೂ ಹರಡುವಿಕೆ ಹೆಚ್ಚಾಗುತ್ತಿದೆ ಜೊತೆಗೆ ಸಾವಿನ ಪ್ರಕರಣಗಳೂ ಸಹ ಹೆಚ್ಚಾಗುತ್ತಿವೆ. ಈ ಕುರಿತು ಬಿಬಿಎಂಪಿ (BBMP) ಆರೋಗ್ಯ ಇಲಾಖೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ (BBMP) ಮುಂದಾಗಿದೆ. ರೀಲ್ಸ್ ಮಾಡುವ ಮೂಲಕ ಡೆಂಗ್ಯೂ ವಾರಿಯರ್‍ ಆಗಲು ಬಿಬಿಎಂಪಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದೆ. ಸೋಷಿಯ್ ಮಿಡಿಯಾ ಮೂಲಕ ಡೆಂಗ್ಯೂ ಕುರಿತು ಅರಿವು ಮೂಡಿಸಲು ರೀಲ್ಸ್ ವಿಡಿಯೋಗಳನ್ನು ಆಹ್ವಾನಿಸಿದೆ. ಈ ರೀಲ್ಸ್ ಮಾಡುವವರಿಗೆ ಬಹುಮಾನ ಸಹ ಘೋಷಣೆ ಮಾಡಲಾಗಿದೆ. ಮೊದಲ ಐದು ಉತ್ತಮ ರೀಲ್ಸ್ ಗಳಿಗೆ 25 ಸಾವಿರ ಬಹುಮಾನ ನೀಡಲಾಗುತ್ತದೆ. ಐದು ರೀಲ್ಸ್ ಗಳಿಗೆ ದ್ವಿತೀಯ ಬಹುಮಾನವಾಗಿ ತಲಾ 10 ಸಾವಿರ ಬಹುಮಾನವನ್ನು (BBMP) ಬಿಬಿಎಂಪಿ ಘೋಷಣೆ ಮಾಡುವ ಪ್ರಕಟನೆಯನ್ನು ಹೊರಡಿಸಿದೆ.

BBMP annouced prize to dengue reels 0

ಇನ್ನೂ ವಿದ್ಯಾರ್ಥಿಗಳಿಗೆ ಬಂಪರ್‍ ಬಹುಮಾನ ಘೋಷಣೆ ಮಾಡಿದೆ. ಉತ್ತಮ ರೀತಿಯಲ್ಲಿ ಹೆಚ್ಚು ವಿದ್ಯಾರ್ಥಿಗಳನ್ನು ಬಳಸಿಕೊಂಡು ರೀಲ್ಸ್ ಮಾಡಿಸುವ ಶಾಲೆಗೆ ಬರೋಬ್ಬರಿ ಒಂದು ಲಕ್ಷ ಬಹುಮಾನ ಘೋಷಣೆ ಮಾಡಿದೆ. ಜೊತೆಗೆ ಮಕ್ಕಳಿಗೆ ಜಾಗೃತಿ ಮೂಡಿಸುವ ವಿಡಿಯೋ ಮಾಡಲು ಉತ್ತೇಜನ ನೀಡುವ ಶಿಕ್ಷಕರಿಗೂ 35 ಸಾವಿರ ಬಹುಮಾನ ಘೋಷಣೆ ಮಾಡಿದೆ. ಇನ್ನೂ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ರೀಲ್ಸ್ ಮಾಡಿ ಅದನ್ನು ಬಿಬಿಎಂಪಿ (BBMP) ಆರೋಗ್ಯ ಇಲಾಖೆಯ ಫೇಸ್ ಬುಕ್ ಹಾಘೂ ಎಕ್ಸ್ (ಟ್ವಿಟರ್‍) ಖಾತೆಗೆ ಟ್ಯಾಗ್ ಮಾಡಬೇಕು. ಡೆಂಗ್ಯೂ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಹೆಚ್ಚು ವೀಕ್ಷಣೆ ಪಡೆಯುವ ರೀಲ್ಸ್ ಗಳಿಗೆ ಬಹುಮಾನ ನೀಡಲಾಗುತ್ತದೆ ಜೊತೆಗೆ ರೀಲ್ಸ್ ಹಂಚಿಕೊಳ್ಳುವ ಪ್ರತಿಯೊಬ್ಬರಿಗೂ ಡೆಂಗ್ಯೂ ವಾರಿಯರ್‍ ಎಂಬ ಬಿರುದನ್ನು ಸಹ ಪಾಲಿಕೆ ಆರೋಗ್ಯ ವಿಭಾಗ ನೀಡಲಿದೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *

Next Post

Mobile Tips: ಮಳೆಯಿಂದಾಗಿ ನಿಮ್ಮ ಮೊಬೈಲ್ ಒದ್ದೆಯಾಗುತ್ತಾ? ಹಾಗಾದರೇ ಈ ಟಿಪ್ಸ್ ಫಾಲೋ ಮಾಡಿ…..!

Sat Jul 20 , 2024
ಸದ್ಯ ದೇಶದಾದ್ಯಂತ ಮುಂಗಾರು ಮಳೆಯ ಅಬ್ಬರ ಜೋರಾಗಿದೆ. ಕೆಲವೊಂದು ಕಡೆಯಂತೂ ಮಳೆಯ ಆರ್ಭಟ ಜೋರಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ. ಕೆಲವೊಂದು ಪ್ರದೇಶಗಳು ಜಲಾವೃತಗೊಂಡಿದೆ. ಆದರೂ ಸಹ ಕೆಲವರು ಕೆಲಸಗಳ ನಿಮಿತ್ತ ಹೊರಗೆ ಹೋಗಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ ಮಳೆಯಲ್ಲಿ ತಮ್ಮ ಮೊಬೈಲ್ ನೀರಿಗೆ ಒದ್ದೆಯಾಗದಂತೆ ನೋಡಿಕೊಳ್ಳುವುದು ತುಂಬಾನೆ ಕಷ್ಟಕರವಾಗಿರುತ್ತದೆ. ತಮ್ಮ ಮೊಬೈಲ್ ನೀರಿನಲ್ಲಿ ಒದ್ದೆಯಾದರೆ ನೀವು ಈ (Mobile Tips) ಟ್ರಿಕ್ಸ್ ಫಾಲೋ ಮಾಡಬಹುದಾಗಿದೆ. ಮಳೆಯಿರಲಿ ಅಥವಾ ಬೇರೆ ಎಂದತಹುದೇ […]
Mobile tips in rain 1
error: Content is protected !!