HomeStateViral Video: ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವೃದ್ದಾಶ್ರಮದ ಮಾತೆಯರು, ವೈರಲ್ ಆದ ವಿಡಿಯೋ….!

Viral Video: ಬಾಲಿವುಡ್ ಹಾಡಿಗೆ ಭರ್ಜರಿ ಸ್ಟೆಪ್ಸ್ ಹಾಕಿದ ವೃದ್ದಾಶ್ರಮದ ಮಾತೆಯರು, ವೈರಲ್ ಆದ ವಿಡಿಯೋ….!

ಸೋಷಿಯಲ್ ಮಿಡಿಯಾದಲ್ಲಿ ಕಿರಿಯರಿಂದ ಹಿರಿಯವರೆಗೂ ರೀಲ್ಸ್ ಮಾಡುತ್ತಿರುತ್ತಾರೆ. ಇದೀಗ ವೃದ್ದಾಶ್ರಮದ ಹಿರಿಯ ಮಾತೆಯರು ರೀಲ್ಸ್ ಒಂದನ್ನು ಮಾಡಿದ್ದು ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ (Viral Video) ಆಗುತ್ತಿದೆ. ಬಾಲಿವುಡ್ ನ ಬಹುನಿರೀಕ್ಷಿತ ಬ್ಯಾಡ್ ನ್ಯೂಜ್ ಸಿನೆಮಾದ ಹಾಡಿಗೆ ಮಾತೆಯರು ರೀಲ್ಸ್ ಮಾಡಿದ್ದಾರೆ. ಬೆಳಗಾವಿಯ ವೃದ್ದಾಶ್ರಮದ ತಾಯಂದಿರು ಬ್ಯಾಡ್ ನ್ಯೂಜ್ ಸಿನೆಮಾದ ತೌಬಾ ತೌಬಾ ಹಾಡಿಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ.

tauba tauba steps old age home

ಬಾಲಿವುಡ್ ನ ಬಹುನಿರೀಕ್ಷಿತ ಬ್ಯಾಡ್ ನ್ಯೂಜ್ ಸಿನೆಮಾದ ಹಾಡುಗಳು ಭಾರಿ ಸದ್ದು ಮಾಡಿದೆ. ಈ ಸಿನೆಮಾದಲ್ಲಿ ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ರವರ ತೌಬಾ ತೌಬಾ ಹಾಡು ತುಂಬಾನೆ ವೈರಲ್ ಆಗಿದೆ. ಈ ಹಾಡಿನಲ್ಲಿ ನಟ ವಿಕ್ಕಿ ಕೌಶಾಲ್ ಸ್ಟೆಪ್ಸ್ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಬಾಲಿವುಡ್ ನ ದೊಡ್ಡ ದೊಡ್ಡ ಸ್ಟಾರ್‍ ಗಳೂ ಸಹ ಹೊಗಳಿದ್ದಾರೆ. ಇದೇ ಹಾಡಿಗೆ ಇದೀಗ ಬೆಳಗಾವಿಯ ಶಾಂತಿ ವೃದ್ದಾಶ್ರಮದ ತಾಯಂದಿರು ಹೆಜ್ಜೆ ಹಾಕಲು ಭರ್ಜರಿ ತಯಾರಿ ಮಾಡಿದ್ದಾರೆ. ಹಸಿರು ಬಾರ್ಡರ್‍ ನ ಪರ್ಪಲ್ ಸೀರೆ ಹಾಗೂ ಮ್ಯಾಚಿಂಗ್ ಹಸಿರು ಬಣ್ಣದ ರವಿಕೆ ಧರಿಸಿದ್ದಾರೆ. ಮಧ್ಯೆ ನಿಂತ ವೃದ್ದೆ ಬ್ಲಾಕ್ ಗಾಗಲ್ಸ್ ಹಾಕಿ ಮಿಂಚಿದ್ದಾರೆ. ಎಲ್ಲರೂ ಸೇರಿ ತೌಬಾ ತೌಬಾ ಹಾಡಿನಲ್ಲಿ ವಿಕ್ಕಿ ಕೌಶಾಲ್ ಸಿಗ್ನೇಚರ್‍ ಕೊಂಚ ಬದಲಿಸಿ ತಮಗೆ ಹೊಂದುವಂತೆ ಮಾಡಿದ್ದಾರೆ. ಈ ಹಾಡಿನ ರೀಲ್ಸ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಈ ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ : https://www.instagram.com/reel/C9SSDThhTqW

ಇನ್ನೂ ತೌಬಾ ತೌಬಾ ಹಾಡಿಗೆ ಹಲವು ವೃತ್ತಿಪರ ಡ್ಯಾನ್ಸರ್‍ ಗೂ ಸಹ ಹೆಜ್ಜೆ ಹಾಕಿದ್ದಾರೆ. ಪುಟಾಣಿಗಳೂ ಸೇರಿದಂತೆ ಕೆಲವು ಸ್ಟಾರ್‍ ಗಳೂ ಸಹ ಸಿಗ್ನೇಚರ್‍ ಕಾಪಿ ಮಾಡಿ ರಿಕ್ರಿಯೇಟ್ ಮಾಡಿದ್ದಾರೆ. ಎಲ್ಲರನ್ನೂ ಮೀರಿಸಿ ಈ ತಾಯಂದಿರ ಡ್ಯಾಣ್ಸ್ ಸೂಪರ್‍ ಆಗಿದೆ ಎನ್ನಲಾಗಿದೆ. ಅನೇಕರು ಈ ವಿಡಿಯೋಗೆ ಪುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಮೆಚ್ಚುಗೆಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಕೆಲವರು ಈ ವಿಡಿಯೋ ಅನ್ನು ವಿಕ್ಕಿ ಕೌಶಾಲ್ ಗೆ ಟ್ಯಾಗ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ರೀಲ್ಸ್ ಗೆ ಲೈಕ್ ಗಳು, ಕಾಮೆಂಟ್ ಗಳು ಹರಿದುಬರುತ್ತಿವೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt