Aadhar – PanCard Link – ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಲಿಂಕ್ ಮಾಡದಂತಹ ತೆರಿಗೆ ಪಾವತಿದಾರರು ಹೆಚ್ಚು ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಮೇ.31ರೊಳಗೆ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೇ ಅಂತಹ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯ ಗೊಳ್ಳುತ್ತವೆ ಎಂದು ಹೇಳಲಾಗಿತ್ತು. ಇದೀಗ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ವಿಚಾರವೊಂದನ್ನು ತಿಳಿಸಿದ್ದಾರೆ ಅದರಂತೆ ಆಧಾರ್ ಹಾಗೂ ಪ್ಯಾನ್ ಲಿಂಕ್ (Aadhar – PanCard Link) ಆಗದ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ನೊಟೀಸ್ ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
2023 ಮಾರ್ಚ್ 28 ಹಾಗೂ 2024ರ ಏಪ್ರಿಲ್ 23ರಂದು ಸಿಬಿಡಿಟಿ ಈ ಸಂಬಂಧ ಒಂದು ಸುತ್ತೋಲೆ ಹೊರಡಿಸಿತ್ತು. (Aadhar – PanCard Link) ಅದರಂತೆ ಸೆಕ್ಷನ್ 206AA ಅಡಿಯಲ್ಲಿ ಇನ್ ಆಪರೇಟಿವ್ ಪ್ಯಾನ್ ಬಳಸಿದಂತಹ ತೆರಿಗೆ ದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ನೊಟೀಸ್ ಕೊಡಲಾಗುತ್ತದೆ ಎಂದು ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ತಿಳಿಸಿದ್ದಾರೆ. ವರ್ಷಕ್ಕೆ 2.5 ಲಕ್ಷ ಒಳಗೆ ಸಂಬಳ ಇರುವಂತವರಿಗೆ ವಿನಾಯಿತಿ ಇದ್ದು, ಅಂತಹರ ಪ್ಯಾನ್ ನಿಷ್ಕ್ರಿಯಗೊಂಡಿದ್ದರೂ ಅವರರನ್ನು ಟ್ಯಾಖ್ಸ್ ಡಿಮ್ಯಾಂಗ್ ಗೆ ಪರಿಗಣಿಸಲ್ಲ. ಆದರೆ ವಿನಾಯಿತಿಗಿಂತ ಹೆಚ್ಚಿನ ಆದಾಯ ಇರುವಂತಹವರು ಆಧಾರ್-ಪ್ಯಾನ್ ಲಿಂಕ್ ಮಾಡದೇ ಇದ್ದರೇ ಕ್ರಮ ಎದುರಿಸಬೇಕಾಗುತ್ತದೆ.
ಇನ್ ಆಪರೇಟೀವ್ ಅಥವಾ ಆಧಾರ್ ಗೆ ಲಿಂಕ್ ಆಗದಂತಹ ಪ್ಯಾನ್ (Aadhar – PanCard Link) ಯಾರಾದರೂ ಬಳಸುತ್ತಿದ್ದರೇ, ಅಂತಹವರಿಗೆ ಶೇ.20 ರಷ್ಟು ಟಿಡಿಎಸ್ ತೆರಿಗೆ ಮುರಿದುಕೊಳ್ಳಲಾಗುತ್ತದೆ. ಜೊತೆ ತೆರಿಗೆ ಪಾವತಿದಾರರಿಗೆ ಟ್ಯಾಕ್ಸ್ ಡಿಮ್ಯಾಂಡ್ ಜಾರಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಮಾರ್ಚ್ 31 2024 ರವರೆಗೂ ಪ್ಯಾನ್ ಹಾಗೂ ಆಧಾರ್ ಲಿಂಕ್ ಮಾಡಲು ಗಡುವು ಕೊಡಲಾಗಿತ್ತು. ಲಿಂಕ್ ಆಗದಂತಹ ಪ್ಯಾನ್ ನಂಬರ್ ಗಳು ಇನ್ ಆಪರೇಟೀವ್ ಆಗಿತ್ತು. ಬಳಿಕ ಮೇ.31 ರವರೆಗೂ ಗಡುವು ಕೊಡಲಾಗಿತ್ತು. ಆದರೂ ಅನೇಕರು ಇನ್ನೂ ಆಧಾರ್ ಪ್ಯಾನ್ ಲಿಂಕ್ (Aadhar – PanCard Link) ಮಾಡಿಲ್ಲ. ಅಂತಹವರು ಇದೀಗ ಹೆಚ್ಚುವರಿ ತೆರಿಗೆ ಕಟ್ಟಬೇಕಾದ ಅನಿವಾರ್ಯತೆ ಇದೆ ಎಂದು ಹೇಳಲಾಗುತ್ತಿದೆ.