Bank Holidays: ಆಗಸ್ಟ್ ಮಾಹೆಯಲ್ಲಿದೆ 13 ದಿನ ಬ್ಯಾಂಕ್ ಗಳಿಗೆ ರಜೆ, ಬ್ಯಾಂಕ್ ನಲ್ಲಿ ಕೆಲಸ ಇರೋರು ಇತ್ತ ನೋಡಿ….!

ಇಂದಿನ ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಪ್ರಾಮುಖ್ಯತೆ ಹಾಗೂ ಅತ್ಯವಶ್ಯಕ ಸೇವೆಯಾಗಿದೆ. ಬ್ಯಾಂಕ್ ಒಂದು ದಿನ ರಜೆ ಇದ್ದರೇ ಅದೆಷ್ಟೋ ಹಣಕಾಸಿನ ಸಮಸ್ಯೆಗಳು ಉದ್ಬವಿಸುತ್ತವೆ ಎಂದು ಹೇಳಬಹುದು. ಇದೀಗ ಬ್ಯಾಂಕ್ ಗಳಿಗೆ ಆಗಸ್ಟ್ ಮಾಹೆಯಲ್ಲಿ 13 ದಿನ ರಜೆಗಳಿವೆ. ಆರ್‍.ಬಿ.ಐ ಪ್ರಕಟಿಸಿ (Bank Holidays) ಪ್ರಸಕ್ತ ವರ್ಷದ ಕ್ಯಾಲಂಡರ್‍ ಪ್ರಕಾರ ಆಗಸ್ಟ್ ಮಾಹೆಯಲ್ಲಿ 13 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ.

ಆರ್‍.ಬಿ.ಐ ಪ್ರಕಟಿಸಿದ ಕ್ಯಾಲಂಡರ್‍ ನಂತೆ ಆಗಸ್ಟ್ ಮಾಹೆಯಲ್ಲಿ ಒಟ್ಟು 13 ದಿನ ಬ್ಯಾಂಕ್ ಗಳಿಗೆ ರಜೆ ಇರಲಿದೆ. ಇದರಲ್ಲಿ ಎರಡು ಶನಿವಾರ ಹಾಗೂ ನಾಲ್ಕು ಭಾನುವಾರದ ರಜೆಗಳಿವೆ. ಇದರ ಜೊತೆಗೆ ಆಗಸ್ಟ್ ತಿಂಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ, ಕೃಷ್ಣ ಜನ್ಮಾಷ್ಟಮಿ, ರಾಖಿ ಹಬ್ಬಗಳೂ ಇವೆ. ಹೆಚ್ಚಿನ ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಮತ್ತು ರಾಖಿ ಹಬ್ಬಕ್ಕೆ ರಜೆ ಇದೆ. ಕರ್ನಾಟಕದಲ್ಲಿ ಈ ಮೂರು ದಿನಗಳಲ್ಲೂ ಬ್ಯಾಂಕುಗಳಿಗೆ ರಜೆ ಇರುತ್ತದೆ. ಆಗಸ್ಟ್ 24ರಿಂದ 26ರವರೆಗೆ ಸತತ ಮೂರು ದಿನಗಳ ಕಾಲ ಬ್ಯಾಂಕ್ ಬಂದ್ ಆಗಲಿದೆ. ಈ ಹಿನ್ನೆಲೆಯಲ್ಲಿ. ಬ್ಯಾಂಕ್​ನಲ್ಲಿ ಕೆಲಸ ಇರುವವರು ರಜಾ ದಿನಗಳ ಪಟ್ಟಿಯನ್ನು ಗಮನಿಸುವುದು ಸೂಕ್ತ ಎಂದು ಹೇಳಲಾಗುತ್ತಿದೆ. ಆದರೆ ರಜಾ ದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಮಾತ್ರ ಬಂದ್ ಇರುತ್ತವೆ. ATM, ಡಿಜಿಟಲ್ ಬ್ಯಾಂಕಿಂಗ್, ಯುಪಿಐ ಮೂಲಕ ವಹಿವಾಟು ನಡೆಸಬಹುದಾಗಿದೆ.

Bank Holidays in August 1

ಕರ್ನಾಟಕದಲ್ಲಿ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ಪಟ್ಟಿ :

  • ಆಗಸ್ಟ್ 4, ಭಾನುವಾರ
  • ಆಗಸ್ಟ್ 10, ಎರಡನೇ ಶನಿವಾರ
  • ಆಗಸ್ಟ್ 11, ಭಾನುವಾರ
  • ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ
  • ಆಗಸ್ಟ್ 18, ಭಾನುವಾರ
  • ಆಗಸ್ಟ್ 19, ಸೋಮವಾರ: ರಾಖಿ ಹಬ್ಬ
  • ಆಗಸ್ಟ್ 24, ನಾಲ್ಕನೇ ಶನಿವಾರ
  • ಆಗಸ್ಟ್ 25, ಭಾನುವಾರ
  • ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ

2024ರ ಆಗಸ್ಟ್ ತಿಂಗಳಲ್ಲಿ ಇರುವ ಬ್ಯಾಂಕ್ ರಜಾ ದಿನಗಳ ಪಟ್ಟಿ :

  • ಆಗಸ್ಟ್ 4, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 7, ಬುಧವಾರ: ಹರ್ಯಾಲಿ ತೀಜ್ ಹಬ್ಬ (ಹರ್ಯಾಣ ರಾಜ್ಯದಲ್ಲಿ ರಜೆ)
  • ಆಗಸ್ಟ್ 8, ಗುರುವಾರ: ತೆಂಡೋಂಗ್ ಲೋ ರುಮ್ ಫಾಟ್ – ಸಿಕ್ಕಿಂ ರಾಜ್ಯದಲ್ಲಿ ರಜೆ
  • ಆಗಸ್ಟ್ 10, ಎರಡನೇ ಶನಿವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 11, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 13, ಮಂಗಳವಾರ: ದೇಶಪ್ರೇಮಿಗಳ ದಿನ – ಮಣಿಪುರ ರಾಜ್ಯದಲ್ಲಿ ರಜೆ
  • ಆಗಸ್ಟ್ 15, ಗುರುವಾರ: ಸ್ವಾತಂತ್ರ್ಯ ದಿನೋತ್ಸವ – ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 16, ಶುಕ್ರವಾರ: ಡೀ ಜೂರ್ ಟ್ರಾನ್ಸ್​ಫರ್ ಡೇ – ಪುದುಚೇರಿಯಲ್ಲಿ ರಜೆ
  • ಆಗಸ್ಟ್ 18, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 19, ಸೋಮವಾರ: ರಾಖಿ ಹಬ್ಬ (ಉ. ಪ್ರ., ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬ್ಯಾಂಕ್ ರಜೆ)
  • ಆಗಸ್ಟ್ 24, ನಾಲ್ಕನೇ ಶನಿವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 25, ಭಾನುವಾರ: ಎಲ್ಲಾ ಬ್ಯಾಂಕ್​ಗಳಿಗೂ ರಜೆ
  • ಆಗಸ್ಟ್ 26, ಸೋಮವಾರ: ಕೃಷ್ಣ ಜನ್ಮಾಷ್ಟಮಿ – ಹೆಚ್ಚಿನ ರಾಜ್ಯಗಳಲ್ಲಿ ರಜೆ

Leave a Reply

Your email address will not be published. Required fields are marked *

Next Post

Aadhar - Pan Card: ಆಧಾರ್ – ಪ್ಯಾನ್ ಕಾರ್ಡ್ ಲಿಂಕ್ ಮಾಡದೇ ಇರುವವರಿಗೆ ಬ್ಯಾಡ್ ನ್ಯೂಸ್, ಟ್ಯಾಕ್ಸ್ ಡಿಮ್ಯಾಂಡ್ ನೊಟೀಸ್?

Tue Jul 30 , 2024
Aadhar – PanCard Link – ಆಧಾರ್‍ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದ್ದು, ಒಂದು ವೇಳೆ ಲಿಂಕ್ ಮಾಡದಂತಹ ತೆರಿಗೆ ಪಾವತಿದಾರರು ಹೆಚ್ಚು ಮೊತ್ತದ ತೆರಿಗೆ ಪಾವತಿಸಬೇಕಾಗುತ್ತದೆ. ಮೇ.31ರೊಳಗೆ ಆಧಾರ್‍ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಆಗದೇ ಇದ್ದರೇ ಅಂತಹ ಪ್ಯಾನ್ ಕಾರ್ಡ್‌ಗಳು ನಿಷ್ಕ್ರಿಯ ಗೊಳ್ಳುತ್ತವೆ ಎಂದು ಹೇಳಲಾಗಿತ್ತು. ಇದೀಗ ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ವಿಚಾರವೊಂದನ್ನು ತಿಳಿಸಿದ್ದಾರೆ ಅದರಂತೆ […]
Aadhar pan linking
error: Content is protected !!