Bank holidays: ಬ್ಯಾಂಕ್ ಗ್ರಾಹಕರಿಗೆ ಪ್ರಮುಖ ಮಾಹಿತಿ, ಡಿಸೆಂಬರ್ ಮಾಹೆಯಲ್ಲಿವೆ 17 ದಿನ ರಜೆ, ಕರ್ನಾಟಕದಲ್ಲಿ 8 ದಿನ ರಜೆ…!

Bank holidays- ಇಂದಿನ ಕಾಲದಲ್ಲಿ ಹಣಕಾಸಿನ ವ್ಯವಹಾರಗಳ ನಡೆಸಲು ಬ್ಯಾಂಕಿಂಗ್ ವ್ಯವಸ್ಥೆ ತುಂಬಾನೆ ಅತ್ಯವಶ್ಯಕವಾಗಿರುತ್ತದೆ. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆಯಿಲ್ಲದೇ ಇದ್ದ ಸಮಯದಲ್ಲಿ ಬ್ಯಾಂಕ್ ಗಳಿಗೆ ರಜೆಯಿದ್ದರೇ ಬ್ಯಾಂಕ್ ಗ್ರಾಹಕರು ಹಣಕಾಸಿನ ವ್ಯವಹಾರ ನಡೆಸಲು ತುಂಬಾನೆ ಕಷ್ಟ ಪಡುತ್ತಿದ್ದರು. ಆದರೆ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಬಂದ ಬಳಿಕ ಬ್ಯಾಂಕ್ ರಜೆಯಿದ್ದರೂ ಹಣಕಾಸಿನ ವ್ಯವಹಾರ ನಡೆಸಲು ಅಷ್ಟೊಂದು ಸಮಸ್ಯೆಯಾಗುವುದಿಲ್ಲ ಎಂದೇ ಹೇಳಬಹುದಾಗಿದೆ. ಸದ್ಯ ಡಿಸೆಂಬರ್‍ 2024 ಮಾಹೆಯಲ್ಲಿ ಎಷ್ಟು ದಿನಗಳು ಬ್ಯಾಂಕ್ ಗಳಿಗೆ ರಜೆಯಿರಲಿದೆ ಎಂಬ ಮಾಹಿತಿಯನ್ನು ಈ ಮೂಲಕ ತಿಳಿಸಲಾಗಿದೆ.

ದೇಶದಾದ್ಯಂತ ಡಿಸೆಂಬರ್‍ (Bank holidays) ಮಾಹೆಯಲ್ಲಿ ಬ್ಯಾಂಕ್ ಗಳಿಗೆ 17 ದಿನ ರಜೆಯಿರಲಿದೆ. ಆದರೆ ಕರ್ನಾಟಕ ಸೇರಿದಂತೆ ಕೆಲವೊಂದು ರಾಜ್ಯದಲ್ಲಿ 8 ದಿನಗಳು ಮಾತ್ರ ರಜೆಯಿರಲಿದೆ. ಸಿಕ್ಕಿಂ, ಮೇಘಾಲಯ, ಮಿಝೋರಾಂ, ಗೋವಾ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲೂ ಡಿಸೆಂಬರ್​ನಲ್ಲಿ ಹೆಚ್ಚು ರಜೆಯನ್ನು ಕಾಣಬಹುದು. ಡಿಸೆಂಬರ್ 25ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ದೇಶದ ಎಲ್ಲೆಡೆ ಸಾರ್ವತ್ರಿಕ ರಜೆ ಇರುತ್ತದೆ.

2024ರ ಡಿಸೆಂಬರ್​ನಲ್ಲಿ ಬ್ಯಾಂಕುಗಳ ರಜಾದಿನಗಳ ಪಟ್ಟಿ

  • ಡಿಸೆಂಬರ್ 1: ಭಾನುವಾರದ ರಜೆ
  • ಡಿಸೆಂಬರ್ 3, ಮಂಗಳವಾರ: ಸೇಂಟ್ ಫ್ರಾನ್ಸಿಸ್ ಜೇವಿಯರ್ ಔತಣ (ಗೋವಾದಲ್ಲಿ ರಜೆ)
  • ಡಿಸೆಂಬರ್ 8: ಭಾನುವಾರದ ರಜೆ
  • ಡಿಸೆಂಬರ್ 14: ಎರಡನೇ ಶನಿವಾರದ ರಜೆ
  • ಡಿಸೆಂಬರ್ 12, ಗುರುವಾರ: ಪಾ ತೋಗನ್ ನೆಂಗ್​ಮಿಂಜಾ ಸಾಂಗ್ಮಾ (ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 15: ಭಾನುವಾರದ ರಜೆ
  • ಡಿಸೆಂಬರ್ 18, ಬುಧವಾರ: ಗುರು ಘಾಸಿದಾಸ್ ಜಯಂತಿ, ಉ ಸೋಸೋ ತಾಮ್ ಪುಣ್ಯತಿಥಿ (ಪಂಜಾಬ್, ಹರ್ಯಾಣದಲ್ಲಿ, ಹಾಗು ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 19, ಗುರುವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
  • ಡಿಸೆಂಬರ್ 22: ಭಾನುವಾರದ ರಜೆ
  • ಡಿಸೆಂಬರ್ 24, ಮಂಗಳವಾರ: ಕ್ರಿಸ್ಮಸ್, ಗುರು ತೇಗ್ ಬಹದೂರ್ ಬಲಿದಾನ ದಿನ (ಮೇಘಾಲಯ, ಮಿಝೋರಾಂ, ನಾಗಾಲ್ಯಾಂಡ್ ರಾಜ್ಯಗಳಲ್ಲಿ ಹಾಗೂ ಪಂಜಾಬ್, ಹರ್ಯಾಣದಲ್ಲಿ ರಜೆ)
  • ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬಕ್ಕೆ ದೇಶಾದ್ಯಂತ ಎಲ್ಲೆಡೆ ರಜೆ
  • ಡಿಸೆಂಬರ್ 26, ಗುರುವಾರ: ಮೇಘಾಲಯ, ನಾಗಾಲ್ಯಾಂಡ್ ಮೊದಲಾದ ಕೆಲವೆಡೆ ರಜೆ
  • ಡಿಸೆಂಬರ್ 27, ಶುಕ್ರವಾರ: ನಾಗಾಲ್ಯಾಂಡ್​ನಲ್ಲಿ ರಜೆ
  • ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  • ಡಿಸೆಂಬರ್ 29: ಭಾನುವಾರದ ರಜೆ
  • ಡಿಸೆಂಬರ್ 30, ಸೋಮವಾರ: ಟಮು ಲೋಸರ್, ಯು ಕಿಯಾಂಗ್ ನಾಂಗ್​ಬಾ (ಸಿಕ್ಕಿಂ, ಮೇಘಾಲಯದಲ್ಲಿ ರಜೆ)
  • ಡಿಸೆಂಬರ್ 31, ಮಂಗಳವಾರ: ಹೊಸ ವರ್ಷಾಚರಣೆ ಪ್ರಯುಕ್ತ ಮಿಜೋರಾಂನಲ್ಲಿ ರಜೆ

ಕರ್ನಾಟಕದಲ್ಲಿ ಡಿಸೆಂಬರ್​ನಲ್ಲಿ 8 ಬ್ಯಾಂಕ್ ರಜಾದಿನಗಳು

  • ಡಿಸೆಂಬರ್ 1: ಭಾನುವಾರದ ರಜೆ
  • ಡಿಸೆಂಬರ್ 8: ಭಾನುವಾರದ ರಜೆ
  • ಡಿಸೆಂಬರ್ 14: ಎರಡನೇ ಶನಿವಾರದ ರಜೆ
  • ಡಿಸೆಂಬರ್ 15: ಭಾನುವಾರದ ರಜೆ
  • ಡಿಸೆಂಬರ್ 22: ಭಾನುವಾರದ ರಜೆ
  • ಡಿಸೆಂಬರ್ 25, ಬುಧವಾರ: ಕ್ರಿಸ್ಮಸ್ ಹಬ್ಬ
  • ಡಿಸೆಂಬರ್ 28: ನಾಲ್ಕನೇ ಶನಿವಾರದ ರಜೆ
  • ಡಿಸೆಂಬರ್ 29: ಭಾನುವಾರದ ರಜೆ

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top