Viral – ಅನೇಕರು ರೈಲಿನಲ್ಲಿ ಪ್ರಯಾಣಿಸಲು ಇಷ್ಟಪಡುತ್ತಾರೆ. ಕಡಿಮೆ ಬೆಲೆಯಲ್ಲಿ ಆರಾಮಾದ ಪ್ರಯಾಣ ಮಾಡುವ ದೃಷ್ಟಿಯಿಂದ ರೈಲಿನಲ್ಲಿಯೇ ಪ್ರಯಾಣಿಸಲು ಇಷ್ಟಪಡುತ್ತಾರೆ ಎನ್ನಬಹುದು. ರೈಲಿನಲ್ಲಿ ಪ್ರಯಾಣಿಸುತ್ತಾ ಅನೇಕ ಅನುಭವಗಳೂ ಸಹ ಆಗಿರುತ್ತದೆ. ಅವುಗಳಲ್ಲಿ ಕೆಲವೊಂದು ಘಟನೆಗಳು ಸುಂದರವಾದ ಅನುಭವಗಳನ್ನು ತಂದುಕೊಟ್ಟಿದ್ದರೇ, (Viral) ಮತ್ತೆ ಕೆಲವು ಅನುಭವಗಳು ಕೆಟ್ಟದಾಗಿರುತ್ತದೆ. ಇದೀಗ ರೈಲಿನಲ್ಲಿ ನಡೆದ ಒಂದು ಘಟನೆಯ ಬಗ್ಗೆ ಯುವಕನೋರ್ವ ತನಗಾದ ಅನುಭವವನ್ನು ಹಂಚಿಕೊಂಡಿದ್ದಾನೆ. ಅಷ್ಟಕ್ಕೂ ಆ ಯುವಕನಿಗಾದ ಅನುಭವ ಆದ್ರೂ ಏನು ಎಂಬ ವಿಚಾರಕ್ಕೆ ಬಂದರೇ,
ಯುವಕನೋರ್ವ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ನಡೆದ ಕಹಿ ಘಟನೆಯ ಬಗ್ಗೆ ಹೇಳಿದ್ದು, ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ರೈಲಿನ ಜನರಲ್ ಕೋಚ್ ನಲ್ಲಿ ಓರ್ವ ದರೋಡೆಕೋರ ತನ್ನ ಬಳಿಯಿದ್ದ ವಿಷಕಾರಿ ಹಾವನ್ನು ತೋರಿಸಿ ಪ್ರಯಾಣಿಕರಿಗೆ ಹೆದರಿಸಿ ಅವರಿಂದ (Viral) ಹಣವನ್ನು ಪೀಕಿದ್ದಾನೆ. ಉತ್ತರ ಭಾರತದ ಟ್ರೈನ್ ನಲ್ಲಿ ಪ್ರಯಾಣಿಸುವಾಗ ತನಗಾದ ಈ ಕೆಟ್ಟ ಹಾಗೂ ಭಯದ ಅನುಭವವನ್ನು ಕೇರಳ ಮೂಲದ ಎಸ್.ಅಶ್ವಿನ್ ಎಂಬಾತ ತನ್ನ travel_with_bon (Viral) ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾನೆ. ಈ ವಿಡಿಯೋ ತುಂಬಾನೆ ವೈರಲ್ ಆಗುತ್ತಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ: Click Here
ಸದ್ಯ ವೈರಲ್ ಆಗುತ್ತಿರುವ (Viral) ವಿಡಿಯೋದಲ್ಲಿ ಉತ್ತರಭಾರತದ ರೈಲಿನಲ್ಲಿ ಪ್ರಯಾಣಿಸುವಾಗ ತನಗಾದ ಭಯಾನಕ ಅನುಭವವನ್ನು ಅಶ್ವಿನ್ ಹೇಳಿಕೊಂಡಿದ್ದಾನೆ. ಈ ರೈಲಿನ ಕೋಚ್ ನಲ್ಲಿ ಪ್ರಯಾಣಿಕರು ತುಂಬಿದ್ದರು. ಈ ಸಮಯದಲ್ಲಿ ವ್ಯಕ್ತಿಯೋರ್ವ ತನ್ನ ಬಳಿಯಿದ್ದ ಹಾವನ್ನು ತೋರಿಸಿ ಭಯಪಡಿಸಿ ಪ್ರಯಾಣಿಕರಿಂದ ಹಣ ಪೀಕಿದ್ದಾನೆ. ಈ (Viral) ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಲಕ್ಷಾಂತರ ವೀಕ್ಷಣೆ ಕಂಡಿದೆ. ಜೊತೆಗೆ ನೆಟ್ಟಿಗರು ಸಹ ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಾ, ಹಾವು ತೋರಿಸಿ ಹಣ ಪೀಕಿದ ಕಿಲಾಡಿಯ (Viral) ವಿರುದ್ದ ಆಕ್ರೋಷ ಹೊರಹಾಕುತ್ತಿದ್ದಾರೆ.