Heart Attack : ಮದುವೆಯ ಮನೆಯಲ್ಲಿ ವಿಷಾದ, ಹಳದಿ ಕಾರ್ಯಕ್ರಮದಲ್ಲಿ ಕುಣಿಯುತ್ತಿದ್ದ ವರ ಕುಸಿದು ಬಿದ್ದು ಸಾವು…!

Heart Attack – ಇತ್ತೀಚಿಗೆ ಇದ್ದಕ್ಕಿದ್ದಂತೆ ಮನುಷ್ಯರು ಸಾವನ್ನಪ್ಪುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಮದುವೆ ಸಂಭ್ರಮ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಇರುವ ಸಮಯದಲ್ಲೇ ಕುಸಿದು ಬಿದ್ದು ಮೃತಪಡುತ್ತಿದ್ದಾರೆ. ಇದೀಗ ಅಂತಹುದೇ ಘಟನೆಯೊಂದು ನಡೆದಿದೆ. ಮದುವೆಯ ನಿಮಿತ್ತ ಹಳದಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಈ ವೇಳೆ ಸಂತೋಷದಿಂದ ಕುಣಿಯುತ್ತಿದ್ದ ಯುವಕ ನೋಡ ನೊಡುತ್ತಿದ್ದಂತೆ ಕುಸಿದು (Heart Attack) ಬಿದ್ದು ಮೃತಪಟ್ಟಿರುವ ಘಟನೆಯೊಂದು ನಡೆದಿದೆ.

bride died by heart attack in hathras 0

ಅಂದಹಾಗೆ ಈ ಘಟನೆ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ನಡೆದಿದೆ ಎನ್ನಲಾಗಿದೆ. ಹತ್ರಾಸ್ ನ ಭೋಜ್ ಪುರ ಗ್ರಾಮದ ಶಿವಂ (22) ಎಂಬಾತನೇ ಮೃತ ವ್ಯಕ್ತಿ. ಶಿವಂ ಶಾಲೆಯೊಂದರಲ್ಲಿ ಕಂಪ್ಯೂಟರ್‍ ಕೋಚ್ ಆಗಿ ಕೆಲಸ ಮಾಡುತ್ತಿದ್ದ. ಆಗ್ರಾ ಮೂಲದ ನಿವಾಸಿ ಮೋಹಿನಿ ಎಂಬಾಕೆಯೊಂದಿಗೆ ಶಿವಂ ಮದುವೆ ನಿಶ್ಚಯವಾಗಿತ್ತು. ಇಬ್ಬರ ಮನೆಯಲ್ಲೂ ಮದುವೆಯ ಸಂಭ್ರಮ ಮನೆ ಮಾಡಿತ್ತು. ಮದುವೆ ಮೂಹೂರ್ತಕ್ಕೂ ಒಂದು ದಿನ ಮುಂಚೆಯೇ ಹಳದಿ ಸಂಭ್ರಮವನ್ನು ಆಯೋಜನೆ ಮಾಡಲಾಗಿತ್ತು. ಕುಟುಂಬಸ್ಥರೊಂದಿಗೆ ಸೇರಿ ಶಿವಂ ಸಂತೋಷದಿಂದ ಕುಣಿದು ಕುಪ್ಪಳಿಸಿದ್ದ. ಈ ವೇಳೆ ಇದ್ದಕ್ಕಿಂದ್ದಂತೆ ಆತ ಮೂರ್ಚೆಹೋಗಿ ನೆಲಕ್ಕೆ ಬಿದಿದ್ದಾನೆ. ಕುಟುಂಬಸ್ಥರು ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಶಿವಂ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಇಲ್ಲಿದೆ ನೋಡಿ: Click Here

ಇನ್ನೂ ಶಿವಂ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕ್ಷಣದಲ್ಲೇ ಅವರ ಕುಟುಂಬಸ್ಥರು ಹಾಗೂ ಸಂಬಂಧಿಕರು ಶಾಕ್ ಆಗಿದ್ದಾರೆ. ಆಸ್ಪತ್ರೆಗೆ ಕರೆದುಕೊಂಡ ಹೋದ ಬಳಿಕ ಅಲ್ಲಿನ ವೈದ್ಯರೂ ಆತ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಶಿವಂ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಶಿವಂ ತಂದೆ ಸಹ ಕೆಲವು ದಿನಗಳ ಹಿಂದೆಯಷ್ಟೆ ಮೃತಪಟ್ಟಿದ್ದರು. ಇದೀಗ ಶಿವಂ ಮದುವೆಗೂ ಮುಂಚೆಯೇ ಮೃತಪಟ್ಟಿದ್ದು, ಅವರ ಮನೆಯಲ್ಲಿ ವಿಷಾದ ತುಂಬುವಂತೆ ಮಾಡಿದೆ. ಶಿವಂ ಮರಣ ಸಂಭ್ರಮದಲ್ಲಿದ್ದ ಮನೆಯಲ್ಲಿ ಶೋಕ ಸಾಗರ ತುಂಬಿದೆ. ಈ ಸಂಬಂಧ ವಿಡಿಯೋ ಒಂದು ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ.

Leave a Comment

Your email address will not be published. Required fields are marked *

Scroll to Top