ITBP – ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ನಲ್ಲಿ ಖಾಲಿಯಿರುವ ಗ್ರೂಪ್ ಬಿ ಹಾಗೂ ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಪುರುಷರು ಹಾಗೂ ಮಹಿಳೆಯರೂ ಅರ್ಜಿ ಸಲ್ಲಿಸಬಹುದಾಗಿದೆ. ಒಟ್ಟು 526 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ, ವೇತನ ಸೇರಿದಂತೆ ಮತಷ್ಟು ಪ್ರಮುಖ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ITBP – ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ನಲ್ಲಿ ಟೆಲಿಕಮ್ಯುನಿಕೇಷನ್ ಗೆ ಸಂಬಂಧಿಸಿದ 526 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ITBP – ಇಂಡೋ – ಟಿಬೆಟಿಯನ್ ಬಾರ್ಡರ್ ಪೊಲೀಸ್ ಪೋರ್ಸ್ ನ ಅಧಿಕೃತ ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕಿದೆ. ನ.15 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಲಿಂಕ್ ಓಪೆನ್ ಆಗಲಿದೆ.
ITBP – ಹುದ್ದೆಗಳ ವಿವರ: 526 ಹುದ್ದೆಗಳು
- ಸಬ್ಇನ್ಸ್ಪೆಕ್ಟರ್- 78
- ಸಬ್ಇನ್ಸ್ಪೆಕ್ಟರ್- 14
- ಹೆಡ್ ಕಾನ್ಸ್ಟೆಬಲ್- 325
- ಹೆಡ್ ಕಾನ್ಸ್ಟೆಬಲ್- 58
- ಕಾನ್ಸ್ಟೆಬಲ್- 44
- ಕಾನ್ಸ್ಟೆಬಲ್- 07
ITBP – ಮಾಸಿಕ ಸಂಭಾವನೆ:
- ಸಬ್ಇನ್ಸ್ಪೆಕ್ಟರ್- ₹35,400 ರಿಂದ ₹ 1,12,400
- ಹೆಡ್ ಕಾನ್ಸ್ಟೆಬಲ್- ₹25,500 ರಿಂದ ₹ 81,100
- ಕಾನ್ಸ್ಟೆಬಲ್- ₹21,700 ರಿಂದ ₹ 69,100
ITBP – ವಯೋಮಿತಿ:
- ಸಬ್ಇನ್ಸ್ಪೆಕ್ಟರ್- 20 ರಿಂದ 25 ವರ್ಷಗಳು
- ಹೆಡ್ ಕಾನ್ಸ್ಟೆಬಲ್- 18 ರಿಂದ 25 ವರ್ಷಗಳು
- ಕಾನ್ಸ್ಟೆಬಲ್- 18 ರಿಂದ 23 ವರ್ಷಗಳು
ITBP – ಅರ್ಜಿ ಶುಲ್ಕ:
- ಸಬ್ಇನ್ಸ್ಪೆಕ್ಟರ್- 200 ರೂಪಾಯಿ
- ಹೆಡ್ ಕಾನ್ಸ್ಟೆಬಲ್- 100 ರೂಪಾಯಿ
- ಎಸ್ಸಿ, ಎಸ್ಟಿ, ವಿಶೇಷ ಚೇತನರಿಗೆ, ಮಾಜಿ ಸೈನಿಕರಿಗೆ ವಿನಾಯಿತಿ ಇದೆ.
ITBP – ಪ್ರಮುಖ ದಿನಾಂಕಗಳು:
- ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭ- 15 ನವೆಂಬರ್ 2024
- ಅರ್ಜಿ ಸಲ್ಲಿಕೆಯ ಕೊನೆ ದಿನಾಂಕ- 14 ಡಿಸೆಂಬರ್ 2024
ITBP – Official Notification & Application Link:
| ITBP Official Website Career Page: Click Here |
| ITBP Official Notification PDF: Click Here |
| ITBP Online Application Form: Click Here |
| Starting Date for Submission of Application: 15.11.2024 @ 00.01 AM |

ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.

