Local News – ಜನರ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ ಜನಸ್ಪಂದನಾ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಜನರು ಈ ಸಭೆಯಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಮನವಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದೆಂದು ಶಾಸಕ ಸುಬ್ಬಾರೆಡ್ಡಿ ತಿಳಿಸಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದಲ್ಲಿ ಕಂದಾಯ ಇಲಾಖೆ ಹಾಗೂ ತಾಲೂಕು ಪಂಚಾಯತಿ ಸಹಯೋಗದಲ್ಲಿ ಆಯೋಜಿಸಿದ್ದ ಜನಸ್ಪಂದನಾ (Local News) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜನರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸರ್ಕಾರಿ ಕಚೇರಿಗಳಿಗೆ ಹೋಗಲು ಕಷ್ಟವಾಗಿ ಅಥವಾ ತಮ್ಮ ಸಮಸ್ಯೆಗಳನ್ನು ಯಾವ ರೀತಿಯಲ್ಲಿ ಪರಿಹರಿಸಿಕೊಳ್ಳಬೇಕು (Local News) ಎಂಬುದು ತಿಳಿಯದೇ ಹಾಗೇ ಇರುತ್ತಾರೆ. ಅಂತಹವರಿಗಾಗಿಯೇ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಮಾಡುವುದು ನಾವು ರಾಜಕೀಯಕ್ಕಾಗಿ ಅಲ್ಲ. ಜನರಿಗೆ ಅನುಕೂಲವಾಗುವ ಉದ್ದೇಶದಿಂದ. ಇನ್ನು ವೃದ್ಧಾಪ್ಯದ ವೇತನ, (Local News) ಪಡಿತರ ಚೀಟಿಗಳು, ಪೌತಿ ಖಾತೆ ಸೇರಿ ಇತರೆ ಸಮಸ್ಯೆಗಳು ಇರುತ್ತವೆ, ಅಂತಹವರಿಗಾಗಿ ತಮ್ಮ ಮನೆ ಬಾಗಿಲಿಗೆ ಬಂದು ಅಧಿಕಾರಿಗಳನ್ನು ಕರೆತಂದಿದ್ದು, (Local News) ತಮ್ಮ ಸಮಸ್ಯೆಗಳನ್ನು ಸ್ಥಳದಲ್ಲೆ ಪರಿಹರಿಸಿಕೊಳ್ಳಬಹುದೆಂದರು.
ಇತ್ತೀಚಿಗೆ ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ (Local News) ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಸರ್ಕಾರದ ನಿಯಮಗಳಂತೆ ಮಕ್ಕಳಿಗೆ ಮದುವೆ ವಯಸ್ಸು ಬಂದ ಬಳಿಕ ಮದುವೆ ಮಾಡಬೇಕು. ಮದುವೆ ಮಾಡಲು ನಿಮಗೆ ಸಮಸ್ಯೆಯಾದರೇ ನನಗೆ ಹೇಳಿ, ನಮ್ಮ ಟ್ರಸ್ಟ್ ವತಿಯಿಂದ ಪ್ರತೀ ವರ್ಷ ನಾನು ಸಾಮೂಹಿಕ ವಿವಾಹಗಳನ್ನು (Local News) ಆಯೋಜನೆ ಮಾಡುತ್ತಿದ್ದೇನೆ. ಈ ಮದುವೆಗಳಲ್ಲಿ ನಿಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತೇನೆ. (Local News) ಸರ್ಕಾರದಿಂದ ಸಹಾಯಧನ ಹಾಗೂ ಒಂದು ಹಸುವನ್ನು ಸಹ ನೀಡುತ್ತೇನೆ. ಇನ್ನೂ ಕಾಂಗ್ರೇಸ್ ಪಕ್ಷ ಐದು ಗ್ಯಾರಂಟಿಗಳನ್ನು ನೀಡಿದ್ದು, ಎಲ್ಲವನ್ನೂ ಜನರಿಗೆ ತಲುಪಿಸುತ್ತಿದ್ದೇವೆ. ಯಾರಿಗಾದರೂ ಗ್ಯಾರಂಟಿಗಳು ಸಿಗುತ್ತಿಲ್ಲವಾದರೇ (Local News) ಅವುಗಳನ್ನು ಮಾಡಿಸುವ ಕೆಲಸ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿಗ್ಬತ್ತುಲ್ಲಾ ಮಾತನಾಡಿ, ಅಣ್ಣತಮ್ಮಂದಿರ ಗಲಾಟೆಗಳು ಸೇರಿ ಇತರೆ ಸಮಸ್ಯೆಗಳಿಂದ ಪವತಿ ಖಾತೆ ಮಾಡಿಸಿಕೊಳ್ಳಲು ಆಗಿರುವುದಿಲ್ಲ ಅಂತಹವರು (Local News) ಒಗ್ಗೂಡಿ ಪವತಿ ಖಾತೆಗಳನ್ನು ಮಾಡಿಸಿಕೊಳ್ಳಿ, ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಆದಾಗ ಸರ್ಕಾರದಿಂದ ಪರಿಹಾರ ನೀಡುತ್ತಾರೆ ಅಂತಹ ಸಮಯದಲ್ಲಿ ಪರಿಹಾರ ಪಡೆದುಕೊಳ್ಳಿ, ಈಗಾಗಲೆ ತಾಲೂಕನ್ನು ಪೋಡಿ ಮುಕ್ತ ಮಾಡಲಾಗಿದೆ. ತಾಲೂಕಿನಲ್ಲಿರುವ (Local News) ಅನೇಕ ಸರ್ವೆ ನಂಬರ್ ಗಳನ್ನು ದುರಸ್ಥಿ ಮಾಡಲಾಗುತ್ತಿದೆ. ಸಾರ್ವಜನಿಕರೂ ಸಹ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿದಾಗ ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದರು.
ಕಾರ್ಯಕ್ರಮದ ನಿಮಿತ್ತ ವಿವಿಧ (Local News) ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಗಳಲ್ಲಿ ಸಿಗುತ್ತಿರುವ ಸವಲತ್ತುಗಳ ಬಗ್ಗೆ ತಿಳಿಸಿಕೊಟ್ಟರು. ಸಭೆಯಲ್ಲಿ ಕೃಷಿ ಇಲಾಖೆ, ತೊಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಸಿಡಿಪಿಒ ಇಲಾಖೆ, ಅರಣ್ಯ ಇಲಾಖೆ ಸೇರಿ ಇತರೆ ಇಲಾಖೆಗಳಿಂದ ಅಂಗಡಿ ಮಳಿಗೆಗಳನ್ನು ತೆರೆಯಲಾಗಿತ್ತು. (Local News) ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ಅರ್ಹ ರೈತರಿಗೆ ಯಂತ್ರೋಪಕರಣಗಳನ್ನು, ಹೊಸ ಪಡಿತರ ಚೀಟಿ, ಮಾಶಾಸನ ಮಂಜೂರಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ತಾ.ಪಂ.ಇಒ ಹೇಮಾವತಿ, ಬೀಚಗಾನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾಂತಮ್ಮಮಹದೇವಪ್ಪ, ಉಪಾಧ್ಯಕ್ಷ ರಮೇಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೇಶವರೆಡ್ಡಿ, (Local News) ತೋಟಗಾರಿಕ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ, ಪಶು ಸಂಗೋಪನೆ ಇಲಾಖೆಯ ಸುಬ್ರಮಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಲಕ್ಷ್ಮೀಪತಿರೆಡ್ಡಿ, ಆರೋಗ್ಯಾಧಿಕಾರಿ ಡಾ.ನರಸಿಂಹಮೂರ್ತಿ, ಮುಖಂಡರಾದ ಆದಿರೆಡ್ಡಿ, ಬೀಚಗಾನಹಳ್ಳಿ ನರೇಂದ್ರ, ಮಹದೇವಪ್ಪ, ಕೃಷ್ಣೇಗೌಡ, ಹೆಚ್.ಪಿ.ಲಕ್ಷ್ಮೀನಾರಾಯಣ, ವೆಂಕಟನರಸಪ್ಪ, ಮೂರ್ತಿ, ರಮೇಶ್, ಪ್ರಕಾಶ್ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಗ್ರಾ.ಪಂ.ಸದಸ್ಯರು ಹಾಗೂ ಮುಖಂಡರು ಹಾಜರಿದ್ದರು.