Viral: ಆ ದೇಶದಲ್ಲಿದೆ ತಂದೆಯೇ ಸ್ವಂತ ಮಗಳನ್ನು ಮದುವೆಯಾಗುವ ಅನಿಷ್ಟ ಸಂಪ್ರದಾಯ, ತಂತ್ರಜ್ಞಾನ ಬೆಳೆದರೂ ಜೀವಂತವಾಗಿರುವ ಅನಿಷ್ಟ ಪದ್ದತಿ…!

Viral: ಆ ದೇಶದಲ್ಲಿದೆ ತಂದೆಯೇ ಸ್ವಂತ ಮಗಳನ್ನು ಮದುವೆಯಾಗುವ ಅನಿಷ್ಟ ಸಂಪ್ರದಾಯ, ತಂತ್ರಜ್ಞಾನ ಬೆಳೆದರೂ ಜೀವಂತವಾಗಿರುವ ಅನಿಷ್ಟ ಪದ್ದತಿ…!

ಈ ವಿಶ್ವದಲ್ಲಿ ಅನೇಕ ಕಡೆ ಇನ್ನೂ ಚಿತ್ರ ವಿಚಿತ್ರ ಸಂಪ್ರದಾಯಗಳು, ಆಚರಣೆಗಳು, ಮೂಡನಂಬಿಕೆಗಳು ಜೀವಂತವಾಗಿದೆ. ಜಗತ್ತು ದಿನೇ ದಿನೇ ಮುಂದುವರೆಯುತ್ತಿದ್ದರೂ ಸಹ ಇನ್ನೂ ವಿಚಿತ್ರ ಅಥವಾ ಅನಿಷ್ಟ ಪದ್ದತಿಗಳನ್ನು ಪಾಲನೆ ಮಾಡುತ್ತಿದ್ದಾರೆ. ಅದರಲ್ಲೂ ಕೆಲವೊಂದು ಬುಡಕಟ್ಟು ಜನಾಂಗದಲ್ಲಿ ವಿಚಿತ್ರವಾದ ಆಚರಣೆಗಳು ಎಲ್ಲರನ್ನೂ ಬೆರಗಾಗಿಸುವಂತೆ ಮಾಡುತ್ತದೆ. ಇದೀಗ ಅಂತಹುದೇ ಸುದ್ದಿಯೊಂದನ್ನು ಇಲ್ಲಿ ತಿಳಿಸಲಾಗುತ್ತಿದೆ. ಈ ದೇಶದಲ್ಲಿ ತಂದೆಯೇ ಮಗಳನ್ನು ಮದುವೆಯಾಗುವ ವಿಚಿತ್ರ (Viral) ಸಂಪ್ರದಾಯ ಪಾಲಿಸುತ್ತಿದ್ದಾರೆ. ಅಷ್ಟಕ್ಕೂ ಆ ದೇಶ ಯಾವುದು, ಆ ಬುಡಕಟ್ಟು ಜನಾಂಗ ಯಾವುದು ಎಂಬ ವಿಚಾರಕ್ಕೆ ಬಂದರೇ,

father marry daughter in bangla

ತಂದೆಯೇ ತನ್ನ ಸ್ವಂತ ಮಗಳನ್ನು ಮದುವೆಯಾಗುವಂತಹ ವಿಚಿತ್ರ ಸಂಪ್ರದಾಯ ಈ ಬುಡಕಟ್ಟು ಜನಾಂಗದಲ್ಲಿ ನಡೆಯುತ್ತದೆ. ತಂದೆ ಹಾಗೂ ಮಗಳ ಸಂಬಂಧ ತುಂಬಾ ಪವಿತ್ರವಾದ ಸಂಬಂಧ ಎಂದು ಹೇಳಲಾಗುತ್ತದೆ. ಆಧರೆ ಈ ಬುಡಕಟ್ಟು ಸಂಪ್ರದಾಯದಲ್ಲಿ ಮಾತ್ರ ತಂದೆ ಮಗಳನ್ನೆ ಮದುವೆಯಾಗಬೇಕಂತೆ. ಮೂಲಗಳ ಪ್ರಕಾರ ಈ ಅನಿಷ್ಟ ಪದ್ದತಿ ಬಾಂಗ್ಲಾದೇಶದ ’ಮಂಡಿ’ ಎಂಬ ಬುಡಕಟ್ಟು ಸಮುದಾಯದಲ್ಲಿ ಇಂದಿಗೂ ಸಹ ಆಚರಣೆಯಲ್ಲಿದೆಯಂತೆ. ಈ ಬುಡಕಟ್ಟು ಜನಾಂಗದಲ್ಲಿ ಹುಟ್ಟುವ ಹೆಣ್ಣು ತನ್ನ ಮಲತಂದೆಯನ್ನೇ ಮದುವೆಯಾಗಬೇಕಂತೆ. ಒಂದು ವೇಳೆ ಈ ಬುಡಕಟ್ಟು ಸಮುದಾಯದ ಮಹಿಳೆಯ ಗಂಡ ತೀರಿಕೊಂಡರೇ ಇನ್ನೊಂದು ಮದುವೆಯಾಗುವ ಅವಕಾಶವಿದೆಯಂತೆ. ಅಷ್ಟೇಅಲ್ಲದೇ ಮೊದಲ ಪತಿಯಿಂದ ಹುಟ್ಟಿರುವ ಹೆಣ್ಣು ಮಗಳನ್ನೂ ಸಹ ಆತನೇ ಮದುವೆಯಾಗಬೇಕೆಂತೆ.

ಬಾಂಗ್ಲಾದೇಶದ ಈ ಮಂಡಿ ಬುಡಕಟ್ಟು ಸಮುದಾಯದ ಆಚರಣೆಯ ಪ್ರಕಾರ ಚಿಕ್ಕ ವಯಸ್ಸಿನಲ್ಲೇ ಮಹಿಳೆ ವಿಧವೆಯಾದರೇ, ಆಕೆಯ ಮಗಳೂ ಸಹ ವಿಧವೆಯಾಗುತ್ತಾಳಂತೆ. ಆಗ ತಾಯಿ ಎರಡನೇ ಮದುವೆಯಾದರೇ, ಮಗಳೂ ಸಹ ತನ್ನ ಮಲತಂದೆಯನ್ನೇ ಮದುವೆಯಾಗಬೇಕಂತೆ. ಆಕೆ ಆತನಿಂದಲೇ ಮಕ್ಕಳನ್ನು ಸಹ ಪಡೆಯಬೇಕಂತೆ. ತಾಯಿ ಹಾಗೂ ಮಗಳ ಭವಿಷ್ಯ ಸುರಕ್ಷಿತವಾಗಿರಸಲು ಈ ಸಂಪ್ರದಾಯವನ್ನು ಪಾಲಿಸುತ್ತಾರಂತೆ ಈ ಬುಡಕಟ್ಟು ಜನ. ಈ ಅನಿಷ್ಟ ಪದ್ದತಿಯಿಂದ ಅನೇಕ ಹೆಣ್ಣು ಮಕ್ಕಳ ಬದುಕು ಹಾಳಾಗಿದೆಯಂತೆ. ಇನ್ನೂ ಸಹ ಈ ತಂತ್ರಜ್ಞಾನದ ಯುಗದಲ್ಲೂ ಸಹ ಈ ಅನಿಷ್ಟ ಪದ್ದತಿ ಜೀವಂತವಾಗಿದೆ ಎಂದು ತಿಳಿದುಬಂದಿದೆ.

Leave a Comment

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Scroll to Top