ಪ್ರೀತಿಗೆ ಕಣ್ಣಿಲ್ಲ, ಯಾರ ಮೇಲೆ ಯಾವಾಗ ಬೇಕಾದರೂ ಪ್ರೀತಿ ಹುಟ್ಟಬಹುದು ಎನ್ನಲಾಗುತ್ತದೆ. ಅದರಂತೆ ಕೆಲವೊಂದು ಪ್ರೇಮಕಥೆಗಳು ಸಫಲವಾದರೇ, ಕೆಲವೊಂದು ಪ್ರೇಮಕಥೆಗಳು ವಿಫಲವಾಗುತ್ತದೆ. ಕೆಲವೊಂದು ಪ್ರೇಮಕಥೆಗಳು ಸಾಯುವ ತನಕ ಹೋಗುತ್ತವೆ. ಇಲ್ಲೊಂದು ವಿಶೇಷವಾದ ಪ್ರೇಮಕಥೆ ನಡೆದಿದೆ. ಯುವಕನೋರ್ವ ಮಂಗಳಮುಖಿಯನ್ನು (Love) ಮೂರು ವರ್ಷಗಳಿಂದ ಪ್ರೀತಿಸಿದ್ದು, ಯಾರಿಗೂ ಅಂಜದೇ ಮಂಗಳಮುಖಿಯನ್ನು ಮದುವೆಯಾಗಿದ್ದಾರೆ. ಈ ಘಟನೆ ಆಂಧ್ರಪ್ರದೇಶದ ಎನ್.ಟಿ.ಆರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ವಿಸ್ಸನ್ನಪೇಟೆ ನಿವಾಸಿ ನಂದು ಹಾಗೂ ಎಂಕೂರಿನ ತೃತೀಯಲಿಂಗಿ ನಕ್ಷತ್ರಾ ಕಳೆದ ಮೂರು ವರ್ಷಗಳಿಂದ ಪ್ರೀತಿಸಿಕೊಳ್ಳುತ್ತಿದ್ದು, ಇದೀಗ ಮದುವೆಯಾಗಿದ್ದಾರೆ. ಅವರ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ತೃತಿಯಲಿಂಗಿ ಸಮುದಾಯದ ಪ್ರತಿನಿಧಿಗಳ ಸಮ್ಮುಖದಲ್ಲಿ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಇತ್ತೀಚಿಷ್ಟೆ ಮದುವೆಯಾಗಿದ್ದಾರೆ. ಈ ಕುರಿತು ನಂದು ಹೇಳಿದ್ದು, ನಾನು ಮಂಗಳಮುಖಿಯನ್ನು ಮದುವೆಯಾಗುವುದು ನನ್ನ ಕುಟುಂಬದವರಿಗೆ ಇಷ್ಟವಿರಲಿಲ್ಲ. ಆದರೆ ನಾವಿಬ್ಬರು ತುಂಬಾನೆ ಚರ್ಚೆ ನಡೆಸಿ ಮದುವೆಯಾಗಲು ತೀರ್ಮಾನಿಸಿದೆವು. ಅದರಂತೆ ತೃತೀಯ ಲಿಂಗಿ ಸಂಘದ ಸದಸ್ಯರನ್ನು ಭೇಟಿಯಾಗಿ ಅವರ ಬೆಂಬಲದೊಂದಿಗೆ ಮದುವೆ ಯಾವುದೇ ಸಮಸ್ಯೆಯಿಲ್ಲದೇ ನಡೆಯಿತು.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ: https://www.instagram.com/p/DAkoQjzSgOk/
ಇನ್ನೂ ನಮ್ಮ ಮದುವೆಗೆ ವಿವಿಧ ಕಡೆಯಿಂದ ತೃತೀಯ ಲಿಂಗಿ ಸಮುದಾಯದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಮ್ಮ ದಾಂಪತ್ಯ ಜೀವನಕ್ಕೆ ಶುಭ ಹಾರೈಸಿದ್ದಾರೆ ಎಂದು ಮದುವೆ ಗಂಡು ನಂದು ಹೇಳಿದ್ದಾನೆ ಎನ್ನಲಾಗಿದೆ. ಈ ಸಂಬಂಧ shethepeopletv ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೋಸ್ಟ್ ಹಂಚಿಕೊಂಡ ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿದೆ. ಈ ಹೊಸ ಜೋಡಿಗೆ ಅನೇಕರು ಶುಭ ಹಾರೈಸಿದ್ದಾರೆ. ಅನೇಕರು ನವಜೋಡಿಯ ಜೀವನ ಚೆನ್ನಾಗಿರಲಿ ಎಂದು ಶುಭ ಹಾರೈಸುತ್ತಿದ್ದಾರೆ.