Python: ಹೆಬ್ಬಾವು ಅಂದುಕೊಂಡ್ರಾ ಅಥವಾ ಜಾರುಬಂಡಿ ಅಂದುಕೊಂಡ್ರಾ? ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡಿದ ಮಕ್ಕಳು: ವಿಡಿಯೋ ವೈರಲ್…!

ಸಾಮಾನ್ಯವಾಗಿ ಮಕ್ಕಳಿಗೆ ಜಾರುಬಂಡಿ ಅಂದ್ರೆ ತುಂಬಾನೆ ಇಷ್ಟ. ಜಾರುಬಂಡಿಯಾಡುವಂತಹ ಪ್ರದೇಶ ಕಂಡರೇ ಸಾಕು ಮಕ್ಕಳು ತಮ್ಮ ಬಟ್ಟೆ ಹರಿದರೂ ಪರವಾಗಿಲ್ಲ ಅಂತಾ ಜಾರುಬಂಡಿ ಆಡುತ್ತಾರೆ. ಇದೀಗ ಮಕ್ಕಳು ಹೆಬ್ಬಾವಿನ (Python) ಮೇಲೆ ಜಾರುಬಂಡಿಯ ಮೇಲೆ ಜಾರಿದಂತೆ ಜಾರಿ ಆಟವಾಡಿದ್ದಾರೆ. ಹಾವು ಎಂಬ ಭಯವಿಲ್ಲದೇ ಜಾರುಬಂಡಿಯಾಟ ಆಡಿದ್ದು, ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

kids play with python

ಹಾವುಗಳಲ್ಲಿ ಹೆಬ್ಬಾವು ವಿಷಕಾರಿಯಲ್ಲ ಆದರೆ ಅತ್ಯಂತ ಶಕ್ತಿಶಾಲಿ ಹಾಗೂ ಅಪಾಯಕಾರಿ ಹಾವು ಎಂದು ಹೇಳಲಾಗುತ್ತದೆ. ಈ ಹೆಬ್ಬಾವು ಮನುಷ್ಯನನ್ನು ಜೀವಂತವಾಗಿಯೇ ನುಂಗಿಬಿಡುತ್ತದೆ. ಒಮ್ಮೆ ಅದು ಬಿಗಿಯಾಗಿ ಸುತ್ತಿಕೊಂಡರೇ, ಅದರ ಹಿಡಿತದಿಂದ ಬಿಡಿಸಿಕೊಳ್ಳುವುದು ತುಂಬಾನೆ ಕಷ್ಟ ಎಂದು ಹೇಳಬಹುದು. ಒಮ್ಮೆ ಸುತ್ತಿಕೊಂಡರೇ ಉಸಿರುಗಟ್ಟಿ ಸಾಯುವ ತನಕ ಹೆಬ್ಬಾವು ತನ್ನ ಪಟ್ಟು ಬಿಡುವುದಿಲ್ಲ ಎನ್ನಬಹುದು. ಆದರೆ ಕೆಲವರು ಅಂತಹ ಹೆಬ್ಬಾವುಗಳ ಜೊತೆಗೆ ಆಟವಾಡುವಂತಹ ವಿಡಿಯೋಗಳು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಕಾಣಸಿಗುತ್ತವೆ. ಅಂತಹುದೇ ವಿಡಿಯೋ ಒಂದು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿದೆ.

ವೈರಲ್​ ವಿಡಿಯೋ ಇಲ್ಲಿದೆ ನೋಡಿ: ಇಲ್ಲಿ ಕ್ಲಿಕ್ ಮಾಡಿ

ಪುಟ್ಟ ಮಕ್ಕಳಿಬ್ಬರು ಹೆಬ್ಬಾವಿನ ಮೇಲೆ ಕುಳಿತು ಜಾರುಬಂಡಿ ಆಡಿದ್ದಾರೆ. ಈ ವಿಡಿಯೋ ವನ್ನು @BapuDaLadla ಎಂಬ ಎಕ್ಸ್  (ಟ್ವಿಟರ್​) ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಹಂಚಿಕೊಂಡ ಕಡಿಮೆ ಸಮಯದಲ್ಲೇ ಭಾರಿ ವೀಕ್ಷಣೆ ಕಂಡಿದೆ. ಮೂಲಗಳ ಪ್ರಕಾರ ಈ ವಿಡಿಯೋ ಇಂಡೋನೇಷಿಯಾಗೆ ಸೇರಿದ ವಿಡಿಯೋ ಆಗಿದೆ. ಜೊತೆಗೆ ಇದು ತುಂಬಾ ಹಳೆಯ ವಿಡಿಯೋ ಎಂದು ಹೇಳಲಾಗಿದೆ. ವಿಡಿಯೋದಲ್ಲಿ ಕಾಣಿಸಿಕೊಂಡ ಹೆಬ್ಬಾವಿನ ಹೆಸರು ‘ರೆಟಿಕ್ಯುಲೇಟೆಡ್ ಪೈಥಾನ್’ ಎಂದು ಹೇಳಲಾಗಿದ್ದು, ವಿಶ್ವದ ಎರಡನೇ ಅತೀ ದೊಡ್ಡ ಹಾವು ಎನ್ನಲಾಗಿದೆ. ಈ ಪ್ರಬೇಧದ ಹಾವುಗಳಿಗೆ ಮನುಷ್ಯನನ್ನು ಜೀವಂತವಾಗಿ ನುಂಗುವ ಶಕ್ತಿಯಿದೆ ಎಂದು ಹೇಳಬಹುದಾಗಿದೆ. ನೀವು ಅನಕೊಂಡ ಸಿನೆಮಾ ನೋಡಿದರೇ ಹಾವು ಮನುಷ್ಯನನ್ನು ಹೇಗೆ ನುಂಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿವಿಧ ರೀತಿಯ ಕಾಮೆಂಟ್ ಗಳು ಹರಿದುಬರುತ್ತಿವೆ.

Leave a Comment

Your email address will not be published. Required fields are marked *

Scroll to Top