HomeInternationalViral News: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ಸರಿ ಉತ್ತರ ನೀಡದ...

Viral News: ಕೋಳಿ ಮೊದಲಾ ಅಥವಾ ಮೊಟ್ಟೆ ಮೊದಲಾ ಎಂಬ ಪ್ರಶ್ನೆಗೆ ಸರಿ ಉತ್ತರ ನೀಡದ ಗೆಳೆಯನ ಕೊಲೆ?

ಬಹುತೇಕ ಎಲ್ಲರೂ ಕೋಳಿ ಮೊದಲಾ, ಮೊಟ್ಟೆ ಮೊದಲ ಎಂಬ ಒಗಟಿನ ಬಗ್ಗೆ ಕೇಳಿರುತ್ತೀರಿ. ಈ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ತುಂಬಾನೆ ಕಷ್ಟ ಎಂದು ಸಹ ಹೇಳಲಾಗಿತ್ತು. ಇದೀಗ ಈ ಪ್ರಶ್ನೆಯ ಕಾರಣದಿಂದ ಒಂದು ಜೀವ ಹೋಗಿದೆ. ಕೋಳಿ ಮೊದಲ, ಮೊಟ್ಟೆ ಮೊದಲ ಎಂಬ ಪ್ರಶ್ನೆಗೆ ಸರಿಯಾದ ಉತ್ತರ ನೀಡದ ಕಾರಣದಿಂದ ಗೆಳೆಯನನ್ನೆ ಕೊಲೆ ಮಾಡಿದ ಘಟನೆ ನಡೆದಿದೆ. ಈ ಘಟನೆ ಇಂಡೋನೇಷ್ಯಾದಲ್ಲಿ (Viral News) ನಡೆದಿದೆ ಎನ್ನಲಾಗಿದೆ.

murder for hen and egg question 1

ಕುಡುಕರಿಬ್ಬರು ಒಂದು ಕಡೆ ಕುಳಿತು ಕೋಳಿ ಮೊದಲಾ, ಮೊಟ್ಟೆ ಮೊದಲಾ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಾದ ಶುರುವಾಗಿದೆ. ಇಂಡೋನೇಷಿಯಾದ ಆಗ್ನೇಯ ಸುಲವೆಸಿ ಪ್ರಾಂತ್ಯದ ಮುನಾ ರೀಜೆನ್ಸಿ ಎಂಬ ಪ್ರದೇಶದಲ್ಲಿ ಈ ಆಘಾತಕಾರಿ (Viral News)  ಘಟನೆ ನಡೆದಿದೆ. ಇಬ್ಬರೂ ಕುಡಿದ ಮತ್ತಿನಲ್ಲಿ ತನ್ನ ಉತ್ತರವೇ ಸರಿ ಎಂದು, ಮತ್ತೊಬ್ಬ ನನ್ನ ಉತ್ತರವೇ ಸರಿ ಎಂದು ಜಗಳವಾಡಿಕೊಂಡಿದ್ದಾರೆ. ಅದೇ ಕೋಪದಲ್ಲಿ ಒಬ್ಬ ಕುಡುಕ ತನ್ನ ಸ್ನೇಹಿತನನ್ನೆ ಇರಿದು ಕೊಲೆ (Viral News) ಮಾಡಿದ್ದಾನೆ. ಕೊಲೆಯ ಆರೋಪದ ಮೇರೆಗೆ ಆ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ ಎಂದು ತಿಳಿದುಬಂದಿದೆ.

murder for hen and egg question 0

ಇನ್ನೂ ಜು.24 ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ತನ್ನ ಗೆಳೆಯನನ್ನು ಕುಡಿಯೋಕೆ ಕರೆದಿದ್ದಾರೆ. ಡಿ.ಆರ್‍ ಎಂಬ ವ್ಯಕ್ತಿ ಹಲವು ರೌಂಡ್ ಡ್ರಿಂಕ್ ಮುಗಿಸಿದ್ದಾರೆ. ಆಗ ಕೋಳಿ ಹಾಗೂ ಮೊಟ್ಟೆಯ ಒಗಟಿನ ಬಗ್ಗೆ ಚರ್ಚೆ (Viral News)  ಶುರುವಾಗಿದ್ದು, ಇಬ್ಬರ ನಡುವೆ ವಾದ ಪ್ರತಿವಾದ ಶುರುವಾಗಿದೆ. ಈ ಚರ್ಚೆ ಜೋರಾಗಿದೆ, ಜೊತೆಗೆ ವಿಪರೀತಕ್ಕೆ ಹೋಗಿ ಇಬ್ಬರ ನಡುವೆ ಜಗಳಕ್ಕೆ ತಿರುಗಿದೆ. ಈ ಸಮಯದಲ್ಲಿ ಡಿ.ಆರ್‍ ಎಂಬ ವ್ಯಕ್ತಿ ಹೊಡೆಯಲು ಹೋಗಿದ್ದಾನೆ. ಆ ಮತ್ತೋರ್ವ ಸ್ನೇಹಿತ ಓಡಿದ್ದಾನೆ. ಆಗ ಅವನ ಹಿಂದೆ ಓಡಿದ ಡಿಆರ್‍ ಚೂಪಾದ ಆಯುದದಿಂದ ತಿವಿದು ಕೊಲೆ (Viral News) ಮಾಡಿದ್ದಾನೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular