Govt Hospital: ಶೀಘ್ರದಲ್ಲೇ ಸರ್ಕಾರಿ ಆಸ್ಪತ್ರೆಗೆ ಮೂಲಭೂತ ಸೌಕರ್ಯಗಳು: ಶಾಸಕ ಸುಬ್ಬಾರೆಡ್ಡಿ

ಬಾಗೇಪಲ್ಲಿ: ಅತೀ ಶೀಘ್ರದಲ್ಲಿಯೇ (Govt Hospital) ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಸಿಬ್ಬಂದಿಗಳ ಕೊರತೆ ನೀಗಿಸುವುದಲ್ಲದೆ ಸಾರ್ವಜನಿಕ ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ಆಸ್ಪತ್ರೆಗೆ ಹೊಸ ರೂಪ ನೀಡುವಂತಹ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಭರವಸೆ ನೀಡಿದರು.

ಸಾರ್ವಜನಿಕ ಆಸ್ಪತ್ರೆಯಲ್ಲಿ (Govt Hospital) ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು  ನಾನು ಶಾಸಕನಾಗುವುದಕ್ಕೂ ಮೊದಲು ಕ್ಷುಲ್ಲಕ ಕಾರಣಗಳಿಗಾಗಿ ವೈದ್ಯರು ಮತ್ತು ಸಿಬ್ಬಂದಿ ಮೇಲೆ ನಿರಂತರವಾಗಿ ದೌರ್ಜನ್ಯಗಳು ನಡೆಯುತ್ತಿದ್ದ ಕಾರಣ ಸಿಬ್ಬಂದಿ ಆತಂಕದಲ್ಲಿಯೇ ಕರ್ತವ್ಯವನ್ನು ನಿರ್ವಹಿಸುವಂತಹ ಪರಿಸ್ಥಿತಿ ಇತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ ಎಂದರು. ಸಾರ್ವಜನಿಕ ಆಸ್ಪತ್ರೆಯಲ್ಲಿರುವ (Govt Hospital)  ತಜ್ಞ ವೈಧ್ಯರು ಸೇರಿದಂತೆ ಸಿಬ್ಬಂದಿ ಕೊರತೆಯನ್ನು ಶೀಘ್ರದಲ್ಲಿಯೇ ನೀಗಿಸಲಾಗುವುದು. ಸಾರ್ವಜನಿಕ ಆಸ್ಪತ್ರೆಗೆ ಅಗತ್ಯವಾಗಿರುವ ಗಣಕಯಂತ್ರ ಸಹಾಯಕರ ಹುದ್ದೆಗಳಿಗೆ ಅನುಮೋದನೆ ನೀಡಲಾಗಿದೆ. ಮತ್ತು ಸಾರ್ವಜನಿಕ ಆಸ್ಪತ್ರೆ ಭದ್ರತೆಗಾಗಿ ಗೃಹರಕ್ಷಕರನ್ನು ನೇಮಿಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗಿದೆ. ಇಲ್ಲಿನ ವೈಧ್ಯರ ಕೊರತೆಯನ್ನು ನೀಗಿಸಲು ಎಂ.ಎಸ್.ರಾಮಯ್ಯ ಆಸ್ಪತ್ರೆ ಅಥವಾ ಆಕಾಶ್ ಆಸ್ಪತ್ರೆಯ ತರಬೇತಿ ವೈಧ್ಯರನ್ನು ಹಾಕಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಲಾಗುವುದು ಎಂದ ಅವರು ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಸೇವೆಯನ್ನು ಪ್ರಾಮಾಣಿಕವಾಗಿ ಸಲ್ಲಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು

(Govt Hospital) ಸಾರ್ವಜನಿಕ ಆಸ್ಪತ್ರೆಗೆ ಹೊಸರೂಪ ನೀಡಲು ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಹೊಸವಿನ್ಯಾಸದೊಂದಿಗೆ ನಿರ್ಮಿಸುವುದು ಹಾಗು ತುರ್ತು ಸೇವೆ ವಿಬಾಗವನ್ನು ಮತ್ತಷ್ಠು ಆಧುನೀಕರಣಗೊಳಿಸಿ ತ್ವರಿತ ಚಿಕಿತ್ಸೆ ದೊರೆಕುವ ನಿಟ್ಟಿನಲ್ಲಿ ಬದಲಾಯಿಸಲಾಗುವುದು. ಬಾಗೇಪಲ್ಲಿಯಂತಹ ಹಿಂದುಳಿದ ಪ್ರದೇಶದಲ್ಲಿ ಬಹುತೇಕ ಬಡರೋಗಿಗಳು ಸರ್ಕಾರಿ ಆಸ್ಪತ್ರೆಗೆ ಬರುವುದರಿಂದ ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್ ಸೇವೆ ಉಚಿತವಾಗಿ ನೀಡಲೇಬೇಕು ಎಂದು ತಾಕೀತು ಮಾಡಿದ ಶಾಸಕರು ಯಾವುದೇ ಕಾರಣಕ್ಕೂ ಬಡವರಿಂದ ಹಣಕ್ಕೆ ಬೇಡಿಕೆ ಇಡುವುದನ್ನು ಸಹಿಸಲಾಗುವುದಿಲ್ಲ. ಆಸ್ಪತ್ರಯಲ್ಲಿ ಔಷದಿಗಳ ಅಗತ್ಯ ದಾಸ್ತಾನು ಇರಬೇಕು ಚೀಟಿಗಳನ್ನು ಯಾವುದೇ ಕಾರಣಕ್ಕೂ ಹೊರಗೆ ಬರೆದುಕೊಡಬಾರದು ಎಂದರು.

(Govt Hospital) ಸಭೆಯಲ್ಲಿ ಟಿ.ಹೆಚ್‍.ಓ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಸುಷ್ಮ, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಡಿ.ಎನ್.ಕೃಷ್ಣಾರೆಡ್ಡಿ, ಮನು,ರಾಹುಲ್,ಅಂಜಿನಪ್ಪ  ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Next Post

Viral Video: ಇವ ಯಾರ್ ಗುರು ಹಾವಿಗೂ ರೊಮ್ಯಾಂಟಿಕ್ ಆಗಿ ಲಿಪ್ ಕಿಸ್ ಕೊಡ್ತವ್ನೆ….!

Fri Aug 2 , 2024
ಬಹುತೇಕ ಜನರಿಗೆ ಹಾವುಗಳು ಅಂದ್ರೆ ತುಂಬಾನೆ ಭಯ ಅಂತಾನೆ ಹೇಳಬಹುದು. ಹಾವನ್ನು ಕಂಡ ಕೂಡಲೇ ಕಿ.ಮಿ ದೂರ ಓಡುವಂತವರು ಸಹ ಇದ್ದಾರೆ. ಆದರೆ ಕೆಲವರು ಹಾವುಗಳನ್ನು ಸಹ ಸಾಕು ಪ್ರಾಣಿಗಳಂತ ಮುದ್ದಾಡುವುದು, ಅದರೊಂದಿಗೆ ಆಟವಾಡುವುದನ್ನು ಮಾಡುತ್ತಿರುತ್ತಾರೆ. ಅಂತಹುದೇ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ. ತನಗೆ ಹಾವು ಅಂದ್ರೆ ಯಾವುದೇ ಭಯ ಇಲ್ಲ ಎಂಬಂತೆ, ಹಾವನ್ನು ತನ್ನ ಗರ್ಲ್ ಫ್ರೆಂಡ್ ಎಂದು ಭಾವಿಸಿ ರೊಮ್ಯಾಂಟಿಕ್ ಆಗಿ […]
young kissed snake
error: Content is protected !!