HomeStateFarmer Idea: ರೈತನ ಐಡಿಯಾಗೆ ಶಾಕ್ ಮಂದಿ, ಟಮೊಟೋ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ, ಸನ್ನಿ...

Farmer Idea: ರೈತನ ಐಡಿಯಾಗೆ ಶಾಕ್ ಮಂದಿ, ಟಮೊಟೋ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ, ಸನ್ನಿ ಪೊಟೋ ..…!

ರೈತರು ತಮ್ಮ ಬೆಳೆಗಳಿಗೆ ದೃಷ್ಟಿಯಾಗಬಾರದು, ಪ್ರಾಣಿ-ಪಕ್ಷಿಗಳು ಬಂದು ಬೆಳೆ ಹಾಳು ಮಾಡಬಾರದು ಎಂದು ಮನುಷ್ಯನಂತಿರುವ ಬೊಂಬೆಗಳನ್ನು ರೆಡಿಮಾಡಿ ಹಾಕುವುದನ್ನು ನೋಡಿರುತ್ತೇವೆ. ಆದರೆ ತಮ್ಮ ಬೆಳೆಗೆ ಯಾರ ದೃಷ್ಟಿಯೂ ತಾಗಬಾರದು ಎಂದು ರೈತ ಮಾಡಿದ ಪ್ಲಾನ್ (Farmer Idea) ನಿಮ್ಮನ್ನು ಅಚ್ಚರಿಗೊಳಿಸು‌ತ್ತದೆ. ಚಿಕ್ಕಬಳ್ಳಾಪುರದ ರೈತರೊಬ್ಬರು ತಮ್ಮ ಟೊಮೋಟೊ ತೋಟದ ಮೇಲೆ ಯಾರ ದೃಷ್ಟಿಯೂ ಬೀಳದಂತೆ ಪ್ಲಾನ್ ಮಾಡಿದ್ದು (Farmer Idea), ದೃಷ್ಟಿ ಬೊಂಬೆ ಬದಲಿಗೆ ರಚಿತಾ ರಾಮ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಪೊಟೋ ಹಾಕಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗಾನಳ ‌ಗ್ರಾಮದ ರೈತನೇ ಈ ಹೊಸ ಪ್ಲಾನ್ (Farmer Idea)ಮಾಡಿದ್ದಾರೆ. ಗ್ರಾಮದ ಯುವ ರೈತ ದೀಪಕ್ ಎಂಬುವವರು ತಮ್ಮ ಟೊಮೋಟಾ ತೋಟದಲ್ಲಿ ದೃಷ್ಟಿ ಬೊಂಬೆ ಬದಲಾಗಿ ಕನ್ನಡದ ಸ್ಟಾರ್‍ ನಟಿ ರಚಿತಾ ರಾಮ್ ಹಾಗೂ ಮಾದಕ ನಟಿ ಸನ್ನಿ ಲಿಯೋನಿ ಪೊಟೊಗಳನ್ನು ಹಾಕಿದ್ದಾರೆ. 5 ಎಕರೆ ಭೂಮಿಯಲ್ಲಿ ಟೊಮೋಟೊ ಬೆಳೆದಿದ್ದಾರೆ. ಕೆಲವೇ ದಿನಗಳಲ್ಲಿ ಕಾಯಿ ಸಹ ಬಿಡಲಿದೆ. ಈ ಹಿನ್ನೆಲೆಯಲ್ಲಿ ತಮ್ಮ ಬೆಳೆಯ ಮೇಲೆ ಯಾರ ದೃಷ್ಟಿಯೂ ಬೀಳದಂತೆ ಹಾಗೂ ಒಳ್ಳೆಯ ಫಸಲು ಬಂದು ಲಾಭ ಸಿಗಲಿ ಎಂಬ ಉದ್ದೇಶದಿಂದ ದೃಷ್ಟಿ ಬೊಂಬೆ ಬದಲು ರಚಿತಾ ರಾಮ್ ಹಾಗೂ ಬಾಲಿವುಡ್ ನಟಿ ಸನ್ನಿ ಲಿಯೋನ್ ಪೊಟೋ ಹಾಕಿದ್ದಾರೆ.

ಇನ್ನೂ ಈ ಸಂಬಂಧ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ (Farmer Idea) ವೈರಲ್ ಆಗುತ್ತಿದೆ. ಇನ್ನೂ ಚಿಕ್ಕಬಳ್ಳಾಪುರದಲ್ಲಿ ಟೊಮೋಟೊ ಬೆಲೆ ಕ್ವಿಂಟಾಲ್ ಗೆ 3500 ರೂಪಾಯಿಯಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದ ಯುವ ರೈತ ದೀಪಕ್ ತಮ್ಮ ಬೆಳೆಗೆ ಯಾರ ಕೆಟ್ಟ ಕಣ್ಣು ಬೀಳದಂತೆ ನಟಿಯರ ಪೊಟೋಗಳನ್ನು ಹಾಕಿದ್ದಾನೆ. ಕೆಲವರು ಈ ಬಗ್ಗೆ ಅಚ್ಚರಿ ಪಟ್ಟಿದ್ದರೇ, ಮತ್ತೆ ಕೆಲವರು ನಕ್ಕಿದ್ದಾರೆ. ಏನೇ ಆಗಲಿ ರೈತನ ಐಡಿಯಾ ಮಾತ್ರ ಮೆಚ್ಚಲೇ ಬೇಕಾಗಿದೆ.

by Balajihttp://ismkannadanews.com
ನಮಸ್ಕಾರ, ನಾನು ಬಾಲಾಜಿ ಆರ್. 10+ ವರ್ಷಗಳ ಅನುಭವ ಹೊಂದಿರುವ ಕಂಟೆಂಟ್ ರೈಟರ್ ಹಾಗೂ ಕಾಪಿ ಎಡಿಟರ್ ಆಗಿದ್ದು, ಹಣಕಾಸು, ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ವೈರಲ್ ಸುದ್ದಿ, ರಾಜಕೀಯ ಸುದ್ದಿ ಮತ್ತು ಸಿನಿಮಾ ಸುದ್ದಿಗಳ ಬಗ್ಗೆ ಬರೆಯುತ್ತೇನೆ. ಸಂಕೀರ್ಣ ಮಾಹಿತಿಯನ್ನು ಸರಳವಾಗಿ ನೀಡುವುದು ನನ್ನ ಉದ್ದೇಶ. ISM Kannada News ಮೂಲಕ ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಹಂಚಿಕೊಳ್ಳುತ್ತೇನೆ.
RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular

Recent Comments

John Doe on TieLabs White T-shirt